ಹುಡುಕಾಟದ ವರದಿ:
ಶಿವಮೊಗ್ಗ,ಸೆ.04:
ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಸದಸ್ಯರಾಗಿ ಶಶಾಂಕ್ ಸಜ್ಜನ್ ಆಯ್ಕೆಯಾಗಿದ್ದು, ಅವರ ಪ್ಲೆಕ್ಸಿಯಲ್ಲಿ ಅಧ್ಯಕ್ಷರನ್ನೇ ಕಡೆಗಣಿಸಿದ್ದರ ಬಗ್ಗೆ ನಿನ್ನೆ ತುಂಗಾತರಂಗ ವರದಿ ಮಾಡಿದ್ದಕ್ಕೆ ಸೂಕ್ತ ಪ್ರತಿಕ್ರಿಯೆ ಹೊರಬಿದ್ದಿದೆ. ಮಾಡಿದ ತಪ್ಪಿಗೆ ಪರಿಹಾರ ಹುಡುಕಿದ್ದಾರೆ.
ಹಿಂದಿನ ವರದಿಯಲ್ಲಿ ಪ್ಲೆಕ್ಸಿಯಲ್ಲಿ ಕಾಂಗ್ರೆಸ್ ಪಕ್ಷದ ಬಹಳಷ್ಟು ನಾಯಕರುಗಳ, ಮುಖ್ಯಮಂತ್ರಿ ಹಾಗೂ ಕರ್ನಾಟಕ ಸರ್ಕಾರದ ನಾಯಕರುಗಳ ಫೋಟೋಗಳಿವೆ.

ಆದರೆ
ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿರುವ ಅವರ ಪ್ಲೆಕ್ಸಿಗಳಲ್ಲಿ ಎಲ್ಲಿಯೂ ಪ್ರಾಧಿಕಾರದ ಅಧ್ಯಕ್ಷ ಸುಂದರೇಶ್ ಅವರ ಫೋಟೋ, ಹೆಸರು ಕಾಣಿಸದಿರುವುದು ರಾಜಕಾರಣದ ದ್ವೇಷ ಎನಿಸುತ್ತದೆ ಎಂದಿತ್ತು.

ಅಧ್ಯಕ್ಷರನ್ನೇ ಬಿಟ್ಟು ಸದಸ್ಯರಾಗಿರುವ ಸಜ್ಜನ್ ಅವರಿಗೆ ಅಭಿನಂದಿಸುವುದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆ ಕಾಂಗ್ರೆಸ್ ವಲಯದಲ್ಲಿ ಬಹು ದೊಡ್ಡ ಚರ್ಚಿತ ವಿಷಯವಾಗಿತ್ತು.

ಇದನ್ನ ಗಂಭೀರವಾಗಿ ಗಮನಿಸಿದ ಕಾಂಗ್ರೆಸ್ ಮುಖಂಡ, ಪಾಲಿಕೆ ಮಾಜಿ ಸದಸ್ಯ ಹೆಚ್.ಸಿ. ಯೋಗೇಶ್ ಶಶಾಂಕ್ ಸಜ್ಜನ್ ಗೆ ಬುದ್ದಿ ಹೇಳಿ ಹೊಸದಾಗಿ ಪ್ಲೆಕ್ಸಿ ಹಾಕಿಸಿ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಪೋಟೋ ಹಾಕಿಸಿ ಗೌರವಿಸಿರುವುದು ವಿಶೇಷ.