!
ಹುಡುಕಾಟದ ವರದಿ:
ಶಿವಮೊಗ್ಗ,ಸೆ.03:
ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಸದಸ್ಯರಾಗಿ ಶಶಾಂಕ್ ಸಜ್ಜನ್ ಆಯ್ಕೆಯಾಗಿದ್ದು, ಅವರಿಗೆ ಅವರ ಅಭಿಮಾನಿಗಳು, ಹಿತೈಷಿಗಳು ಶಿವಮೊಗ್ಗ ನಗರದ ಹಲವೆಡೆ ಅಭಿನಂದನೆಗಳ ಪ್ಲೆಕ್ಸಿಗಳನ್ನು ಹಾಕಿದ್ದಾರೆ.

ಅಭಿಮಾನಿಗಳ ಅಭಿನಂದನೆಗೆ ತಕರಾರೇನಿಲ್ಲ, ಅದರಲ್ಲಿ ಕಾಂಗ್ರೆಸ್ ಪಕ್ಷದ ಬಹಳಷ್ಟು ನಾಯಕರುಗಳ,

ಮುಖ್ಯಮಂತ್ರಿ ಹಾಗೂ ಕರ್ನಾಟಕ ಸರ್ಕಾರದ ನಾಯಕರುಗಳ ಫೋಟೋಗಳಿವೆ.
ಇಲ್ಲಿ ಗಂಭೀರ ಎನಿಸುತ್ತಿರುವ ವಿಷಯವೊಂದಿದೆ.


ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿರುವುದು ಮಹತ್ತರ ವಿಷಯವೇ ಹೌದು. ಆದರೆ ಅದರಲ್ಲಿ ಎಲ್ಲಿಯೂ ಪ್ರಾಧಿಕಾರದ ಅಧ್ಯಕ್ಷ ಸುಂದರೇಶ್ ಅವರ ಫೋಟೋ, ಹೆಸರು ಕಾಣಿಸದಿರುವುದು ರಾಜಕಾರಣದ ದ್ವೇಷ ಎನಿಸುತ್ತದೆ ಎಂಬುದು ಕಾಂಗ್ರೆಸ್ ಪಕ್ಷದ ಕಿಟಕಿಗಳಲ್ಲಿ ಕೇಳಿ ಬರುತ್ತಿರುವ

ಬಹುದೊಡ್ಡ ಸುದ್ದಿ.
ಅಧ್ಯಕ್ಷರನ್ನೇ ಬಿಟ್ಟು ಸದಸ್ಯರಾಗಿರುವ ಸಜ್ಜನ್ ಅವರಿಗೆ ಅಭಿನಂದಿಸುವುದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆ ಆ ವಲಯದಲ್ಲಿ ಬಹು ದೊಡ್ಡ ಚರ್ಚಿತ ವಿಷಯವಾಗುತ್ತಿದೆ.

(ಪ್ಲೆಕ್ಸಿಯನ್ನು ಉದ್ದೇಶ ಪೂರ್ವಕವಾಗಿ ಮಾಡಿಸಲಾಗಿದೆಯಂತೆ, ಸದಸ್ಯರಾಗಿ ಕಾಸು ಖರ್ಚುಮಾಡಿ ಪ್ಲೆಕ್ಸಿ ಹಾಕಿಸಿಕೊಂಡವರೀ ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ.