ಶಿವಮೊಗ್ಗ : ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ಪೇಟೆಯ ಚಿನ್ನೆಗೌಡ ಕ್ರೀಡಾಂಗಣದಲ್ಲಿ ನಡೆದ 17 ವರ್ಷದೊಳಗಿನ ವಿದ್ಯಾರ್ಥಿಗಳ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಭಾರೀ ಅನಾಹುತ ಸಂಭವಿಸಿದೆ.

ವಿದ್ಯಾರ್ಥಿಯೊಬ್ಬ ಎಸೆದ ಡಿಸ್ಕಸ್ ಆಕಸ್ಮಿಕವಾಗಿ ಮೇರಿಮಾತಾ ಶಾಲೆಯ ದೈಹಿಕ ಶಿಕ್ಷಕ ಕಮಲಾಕರ್ ಅವರ ತಲೆಗೆ ಬಿದ್ದಿದೆ. ಪರಿಣಾಮವಾಗಿ ಶಿಕ್ಷಕನ ತಲೆಯಿಂದ ತೀವ್ರ ರಕ್ತಸ್ರಾವ

ಉಂಟಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ತಕ್ಷಣವೇ ಗಾಯಾಳು ಶಿಕ್ಷಕನನ್ನು ರಿಪ್ಪನ್ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೇರಿಸಿ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಆಸ್ಪತ್ರೆಗೆ ರವಾನಿಸಲಾಗಿದೆ. ಈ ದುರಂತದಿಂದಾಗಿ ಕ್ರೀಡಾಂಗಣದಲ್ಲಿ ಭೀತಿ ಮತ್ತು ಆತಂಕದ ವಾತಾವರಣ ಆವರಿಸಿದೆ.