ಶಿವಮೊಗ್ಗ: ಮಧು ಬಂಗಾರಪ್ಪ ಅವರ ತಂದೆಯ ಹೆಸರಿನಿಂದ ಸಚಿವರಾಗಿದ್ದಾರೆ ಹೊರತು ತಮ್ಮ ಸ್ವಂತ ಹೋರಾಟ ಅಥವಾ ಸಾಧನೆಯಿಂದ ಅಲ್ಲ ಎಂದು ಬಿಜೆಪಿಯ ಪ್ರಭಾರಿ ಸಿದ್ರಾಮಣ್ಣ ಕುಟುಕಿದರು.
ಕಸ್ತೂರಿನ ರಂಗನ್ ವರದಿ ಕುರಿತು ಸಚಿವರು ನೀಡಿರುವ ಹೇಳಿಕೆಯನ್ನು ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಮಾತನಾಡಿದರು.
ಬಂಗಾರಪ್ಪನವರು ಈ ಹಿಂದೆ ನನಗೆ ತಮ್ಮ ಸಚಿವ ಸಂಪುಟದಲ್ಲಿ ಸ್ಥಾನ ನೀಡಿದ್ದರು. ಆ ಋಣ ತೀರಿಸಲು ಮಧು ಬಂಗಾರಪ್ಪರಿಗೆ ನನ್ನ ಅವಧಿಯಲ್ಲಿ ಸಚಿವರನ್ನಾಗಿ ಮಾಡಿದ್ದೇನೆ ಎಂದು ಸ್ವತಃ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಈ ಹೇಳಿಕೆಯೇ ಅವರು ಸಚಿವ ಸ್ಥಾನ ಹೇಗೆ ದೊರಕಿತು ಎಂಬುದು ತಿಳಿಸುತ್ತದೆ ಎಂದು ಟೀಕಿಸಿದರು.

ಎಸ್. ಬಂಗಾರಪ್ಪ ಅವರ ಬಗ್ಗೆ ನಮಗೆ ಅಪಾರ ಗೌರವವಿದೆ. ಬಡವರು ಹಾಗೂ ಹಿಂದುಳಿದವರ ಬಗ್ಗೆ ಕಾಳಜಿ ಹೊಂದಿದ್ದರು. ರಾಜಕೀಯವಾಗಿ ಬೇರೆ ಪಕ್ಷದಲ್ಲಿದ್ದರೂ ಅವರ ಬೇರೆಯವರಿಗೆ ಗೌರವ ಕೊಡುತ್ತಿದ್ದರು. ನಾವು ಕೂಡ ಅಷ್ಟೇ ಗೌರವದಿಂದ ಕಾರಣುತ್ತಿದ್ದೇವು. ಆದರೆ ನೀವು ಮಧು ಬಂಗಾರಪ್ಪ ಅ?, ಬಂಗಾರಪ್ಪ ಅಲ್ಲ. ಬಂಗಾರಪ್ಪ ಆಗಲು ನಿಮ್ಮಲ್ಲಿ ಆ ಸಾಮರ್ಥ್ಯ ಇಲ್ಲ. ನೀವು ಅಷ್ಟು ಸಾಧನೆಯನ್ನು ಮಾಡಿಲ್ಲ. ಅವರ ಗುಣವು ನಿಮ್ಮಲ್ಲಿಲ್ಲ. ಅಪ್ಪ ಹೆಸರೇಳಿ ರಾಜಕಾತಣ ಮಾಡುವುದು ಬೇಡ. ಹಾಗಾಗಿ ನೀವು ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಹೆಸರಿನ ಪ್ರಭಾವದಿಂದ ಹೊರಬಂದು ತಮ್ಮದೇ ರಾಜಕೀಯ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಸ್ತೂರಿ ರಂಗನ್ ವರದಿ ಅರೆದು ಕುಡಿದವರ ತರಹ ಮಾತನಾಡಿದ್ದಾರೆ. ಇದರಲ್ಲಿ ಪಕ್ಷ ರಾಜಕೀಯ ಬೇಡ. ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸವೂ ಬೇಡ. ಈ ವರದಿಯಿಂದ ಮೂರು ಜಿಲ್ಲೆಯ ಮೇಲೆ ಪರಿಣಾಮ ಆಗಲಿದೆ. ಈಗಾಗಲೇ ಪರಿಸರ ಸೂಕ್ಷ್ಮ ಪ್ರದೇಶ ಗುರುತಿಸಿದ್ದಾರೆ. ಕರ್ನಾಟಕದ ೧೫೭೬ ಗ್ರಾಮದಲ್ಲಿ ಮೂರು ಜಿಲ್ಲೆಯಲ್ಲಿ ೧೨೫೭ ಗ್ರಾಮ ಬರುತ್ತದೆ.
ಈಗಾಗಲೇ ಮೂರು ಜಿಲ್ಲೆಯ ಸಂಸತ್ ಸದಸ್ಯರು, ಮಾಜಿ ಸಂಸತ್ ಸದಸ್ಯರು ಬಿಜೆಪಿ ಕಚೇರಿಯಲ್ಲಿ ವರದಿ ಕುರಿತು ಚರ್ಚೆ ಮಾಡಿದ್ದೇವೆ. ಇದು ಪಕ್ಷ ರಾಜಕಾರಣಕ್ಕೆ ಒಳಪಡಬಾರದು. ವಿ?ಯ ಆಧಾರಿತ ಮೇಲೆ ಬೆಂಬಲ ಕೊಟ್ಟಿದ್ದೇವೆ. ಮಧು ಬಂಗಾರಪ್ಪ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗಬೇಕು. ಅವರಿಗೆ ಇದರ ಗಂಭೀರತೆ ಅರ್ಥ ಆಗಿಲ್ಲ ಎಂದು ಕಿಡಿಕಾರಿದರು.

ಗಾಡ್ಗೀಳ್ ವರದಿ ಬಂದಿದ್ದು ಮನಮೋಹನ್ ಸಿಂಗ್ ಸರ್ಕಾರ ಇದ್ದಾಗ. ಆಗ ಜೈರಾಮ್ ರಮೇಶ್ ಪರಿಸರ ಸಚಿವ ಆಗಿದ್ದರು. ಕಸ್ತೂರಿ ರಂಗನ್ ವರದಿ ಬಂದಾಗಲೂ ಮನಮೋಹನ್ ಸಿಂಗ್ ಪ್ರಧಾನಿ ಇದ್ದರು. ಜಯಂತಿ ನಟರಾಜನ್ ಕೇಂದ್ರ ಅರಣ್ಯ ಸಚಿವರಾಗಿದ್ದರು. ಜೈರಾಮ್ ರಮೇಶ್ ಚಿಕ್ಕಮಗಳೂರಿನವರು, ಜಯಂತಿ ನಟರಾಜನ್ ತಮಿಳುನಾಡಿನವರು ಇಬ್ಬರಿಗೂ ಕೂಡ ಕಸ್ತೂರಿ ರಂಗನ್ ಪರಿಣಾಮ ತಿಳಿದಿಲ್ಲವೇ ಎಂದು ಪ್ರಶ್ನಿಸಿದರು.

ನಮಗೂ ಪರಿಸರ ಉಳಿಯಬೇಕೆಂಬ ಆಸೆ ಇದೆ. ಪರಿಸರ ಇಲ್ಲದಿದ್ದರೆ ನಾವ್ಯಾರು ಇಲ್ಲ. ಉತ್ತರದಲ್ಲಿ ಹಿಮಾಲಯದ ಮೇಲೆ ಹವಾಮಾನ ಬದಲಾವಣೆ ಪರಿಣಾಮ ಆಗಿದೆ. ಆದರಿಂದ ಈಗಾಗಲೇ ಸಾಕಷ್ಟು ನಷ್ಟವಾಗಿದೆ. ಇದೇ ರೀತಿ ಗುಜರಾತಿನ ತಪತಿ ನದಿ ದಂಡೆಯಿಂದ ಕನ್ಯಾಕುಮಾರಿಯ ವರೆಗೆ ಸುಮಾರು ೬ ರಾಜ್ಯಗಳಲ್ಲಿ ಪಶ್ಚಿಮ ಘಟ್ಟ ಹರಡಿಕೊಂಡಿದ್ದು, ಅದ ಉಳಿಯಬೇಕಾಗಿದೆ. ಆದರೆ ಅರಣ್ಯದ ಜೊತೆಗೆ ಜನ ಜೀವನ ಮತ್ತು ಕೃಷಿ ಹಿಂದಿನಿಂದಲೂ ಇದೆ.
ಅದನ್ನು ಬಿಟ್ಟು ವರದಿ ಜಾರಿಗೆ ತರಲು ಆಗುವುದಿಲ್ಲ. ಆನ ಜೀವನ ಮತ್ತು ಕೃಷಿಯನ್ನು ಉಳಿಸುವ ಕೆಲಸ ಮಾಡಬೇಕು. ಇದಕ್ಕಾಗಿ ಹೊಸದಾಗಿ ಜಂಟಿ ಸರ್ವೇ ಮಾಡಬೇಕು. ಅವೈಜ್ಞಾನಿಕ ಸ್ಯಾಟಲೆಟ್ ಸರ್ವೇಯಿಂದ ಏನು ಪ್ರಯೋಜವಿಲ್ಲ. ಇದರಿಂದ ಪಶ್ಚಿಮ ಘಟ್ಟದ ತಪ್ಪಲಿನ ಕೃಷಿಕರ ಮತ್ತು ಜನರ ಬದುಕೆ ದುರ್ಬಲವಾಗಲಿದೆ ಎಂದರು.

ಈ ವರದಿ ವಿ?ಯ ಸುಪ್ರೀಂ ಕೋರ್ಟ್ ಹಾಗೂ ಹಸಿರು ಪೀಠದ ಅಂಗಳದಲ್ಲಿ ಇದುವರೆಗೂ ೭ ಬಾರಿ ಕರಡು ಅಧಿಸೂಚನೆ ಹೊರಡಿಸಲಾಗಿದೆ. ನಮ್ಮ ಬಿಜೆಪಿ ಸಂಸದರು ಅನೇಕ ಬಾರಿ ಇದರ ಪ್ರಸ್ತಾವನೆಯನ್ನು ಸಂಸತ್ನಲ್ಲಿ ಮಂಡಿಸಿದ್ದಾರೆ. ಸಾಧಕ ಭಾದಕಗಳನ್ನು ಚರ್ಚಿಸಿದ್ದಾರೆ. ಫಿಸಿಕಲ್ ಸರ್ವೇ ಮಾಡಿ ಜನರ ನಾಡಿ ಮೀಡಿತ ಅರಿತುಕೊಂಡು ಅವರಿಗೆ ತೊಂದರೆ ಅಗದ ರೀತಿಯಲ್ಲಿ ಜಾರಿಗೋಲಿಸಲು ಈ ವರದಿಯಲ್ಲಿ ಅನೇಕ ಬದಲಾವಣೆಯನ್ನು ಮಾಡಿಕೊಳ್ಳಬೇಕಾಗಿದೆ ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಮಹತ್ವದ ಪಾತ್ರವಿದೆ. ಇದಕ್ಕಾಗಿ ಸಿಎಂ ವಿಶೇಚ ಅಧಿವೇಶನ ಕರೆದಿರುವುದು ಸಂತೋಷ ವಿಚಾರಾಗಿದ್ದು ಪಕ್ಷ ಬೇದ ಮರೆತು ಚರ್ಚೆಯಾಗಬೇಕಿದೆ ಎಂದರು.
ಬಿಜೆಪಿ ಜಿಲ್ಲಾ ಅಧ್ಯಕ್ಷ ಎನ್.ಕೆ ಜಗದೀಶ್, ಮೋಹನ್ ರೆಡ್ಡಿ, ಮಾಲತೇಶ್, ಶಿವರಾಜು, ಕೆ.ಜಿ.ಕುಮಾರ ಸ್ವಾಮಿ, ಚಂದ್ರಶೇಖರ್, ಮಂಜುನಾಥ್