ಶಿವಮೊಗ್ಗ, ಸೆ.01:
ಶಿವಮೊಗ್ಗ ತಾಲೂಕಿನ ಹಾಯ್ ಹೊಳೆ ಅಂಚೆಯ ಕಲ್ಲೂರು ಗ್ರಾಮದ ಶ್ರೀ ಮಾರಿಕಾಂಬ ಸೇವಾ ಸಮಿತಿ ವತಿಯಿಂದ ಮಾರಿಕಾಂಬ ಸ್ಥಿರಮೂರ್ತಿ ಅಷ್ಟಬಂಧ ಪ್ರತಿಷ್ಠೆ ಹಾಗೂ ೪೮ ಸಹಿತ ಬ್ರಹ್ಮಕಲಶಾಭಿಶೇಕ ಸಮಾರಂಭ ನಾಳಿನ ಸೆ. ೨ ಹಾಗೂ ೩ ರಂದು ನಡೆಯಲಿದೆ.
ಸೆ. ೦೨ರ ನಾಳೆ ಸಂಜೆ ೬ ಗಂಟೆಗೆ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಲಿದ್ದು,


ಸೆ.೦೩ರಂದು ಆದಿಚುಂಚನಗಿರಿ ಮಹಾಸಂಸ್ಥಾನದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ಸುಬ್ರಮಣ್ಯ ಹೆಬ್ಬಾರ್ ಪೌರೋಹಿತ್ಯದಲ್ಲಿ ನಡೆಯಲಿವೆ.

ಅಂದು ಬೆಳಿಗ್ಗೆ ೧೦:೪೫ ಕ್ಕೆ ಮಹಾಪೂರ್ಣಾಹುತಿ ನಂತರ ಬ್ರಹ್ಮ ಕಳಸಾಭಿಷೇಕ, ಮದ್ಯಾಹ್ನ ಒಂದು ಗಂಟೆಗೆ ಮಹಾ ಮಂಗಳಾರತಿ ಮತ್ತು ಅನ್ನ ಸಂತರ್ಪಣೆ ನಡೆಯಲಿದೆ ಎಂದು ಸೇವಾ ಸಮಿತಿ ತಿಳಿಸಿದೆ.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಶ್ರೀಗಳು ಸಾನಿಧ್ಯ ವಹಿಸಲಿದ್ದು, ಉತ್ಸವ ಮೂರ್ತಿ ಸೇವಾಕರ್ತರಾದ ಸುರೇಶ್ ಕೆ ಬಾಳೆಗುಂಡಿ, ಸಂಸದ ಬಿ. ವೈ. ರಾಘವೇಂದ್ರ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಶಾಸಕರಾದ ಶಾರದಾ ಪೂರ್ಯಾನಾಯ್ಕ್, ಡಿ. ಎಸ್. ಅರುಣ್, ಪ್ರಮುಖರಾದ ಸುಂದರೇಶ್, ಕಾಂತೇಶ್, ಅಶೋಕ್ ನಾಯಕ್, ಶ್ರೀಕಾಂತ್, ಶಂಕರ್ ಗನ್ನಿ ಅತಿಥಿಗಳಾಗಿ ಆಗಮಿಸಿದ್ದಾರೆ.

ಪೂಜಾ ಕಾರ್ಯಕ್ರಮದ ವಿವರ ಹಾಗೂ ಹೆಸರು ನೋಂದಾಯಿಸಲು ಸಮಿತಿಯ ಅಧ್ಯಕ್ಷ ಮೂರ್ತಿ ೯೧೪೧೬ ೯೪೪೬೪, ಕಾರ್ಯದರ್ಶಿ ಮನು ಕುಮಾರ್, ಶ್ರೀಧರ್ ೯೫೯೦೬ ೫೧೬೧೦ಗೆ ಸಂಪರ್ಕಿಸಬಹುದು.