ಶಿವಮೊಗ್ಗ,ಸೆ.1: ಸಂವಿಧಾನದ ಮೌಲ್ಯಗಳನ್ನು ಶಿಕ್ಷಣದ ಮೂಲಕ ತಲುಪಿಸುವ ಜವಾಬ್ದಾರಿ ನಮ್ಮ ಮುಂದಿದೆ ಎಂದು ಶಾಲಾ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಹೇಳಿದ್ದಾರೆ.
ಅವರು ಸೋಮವಾರ ಸಂಜೆ ಸರ್ಕಾರಿ ನೌಕರರ ಭವನದಲ್ಲಿ ಪೀಪಲ್ಸ್ ಲಾಯರ್ಸ್ ಗಿಲ್ಡ್ ವತಿಯಿಂದ ಆಯೋಜಿಸಿದ್ದ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ಅವರ ಕೃತಿ ‘ಮೆಮೊರಬಲ್ ಟ್ರಯಲ್’(ಅವಿಸ್ಮರಣೀಯ ಪ್ರಕರಣಗಳು) ಬಿಡುಗಡೆ ಮಾಡಿ ಮಾತನಾಡಿದರು.

ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ‘ಸಂವಿಧಾನ ಓದು’ ಶಿಕ್ಷಣದ ಭಾಗವೇ ಆಗಿದೆ. ಈಗ ಅವರ ಮೆಮೆರಬಲ್ ಟ್ರಯಲ್ ಕೃತಿ ಕೂಡ ಶಿಕ್ಷಣದ ಮೂಲಕ ನ್ಯಾಯಾಂಗ ವ್ಯವಸ್ಥೆಯ ಹಲವು ಮಜಲುಗಳನ್ನು ತಿಳಿಸಲು ಹೊರಟಿದೆ. ಸಾಮಾನ್ಯ ಜನರ ಪ್ರಶ್ನೆಗಳಿಗೆ ಈ ಪುಸ್ತಕದಲ್ಲಿ ಉತ್ತರವಿದೆ. ಇದರಲ್ಲಿರುವ 21 ಪ್ರಕರಣಗಳು ಜಗತ್ತಿನ ನ್ಯಾಯಾಲಯದ ಇತಿಹಾಸವನ್ನೇ ಮರುಸೃಷ್ಟಿ ಮಾಡುವಂತಿದೆ ಎಂದರು.

ಅμÉ್ಟೀ ಅಲ್ಲ, ಸಂವಿಧಾನವನ್ನು ಸುಡುವವರಿಗೆ ಮತ್ತು ತುಳಿಯುವವರಿಗೆ ಸಂವಿಧಾನವನ್ನೇ ಬದಲಾಯಿಸಲು ಹೊರಟವರಿಗೆ ಈ ಪುಸ್ತಕ ತಕ್ಕ ಉತ್ತರ ನೀಡುತ್ತದೆ. ಅವರ ಆಶಯದಂತೆ ಸಂವಿಧಾನ ಓದನ್ನು ನಾವು ಈಗ ಪ್ರಾಥಮಿಕ ಶಾಲೆಗಳಲ್ಲಿ ಆರಂಭ ಮಾಡಿದ್ದೇವೆ. ಇದು ಸಂತೋಷದ ವಿಷಯವಾಗಿದೆ. ಇದನ್ನು ಪಠ್ಯದಲ್ಲಿ ಅಳವಡಿಸುವ ಯೋಚನೆ ಕೂಡ ಇದೆ. ಈ ಪುಸ್ತಕ ಪ್ರತಿ ಲೈಬ್ರರಿಯಲ್ಲೂ ಸಿಗುವಂತಾಗಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ವಕೀಲ ಹಾಗೂ ಡಿವಿಎಸ್ ಸಂಸ್ಥೆ ಅಧ್ಯಕ್ಷ ಕೆ. ಬಸಪ್ಪಗೌಡ, ಇದೊಂದು ವಿಶಿಷ್ಟ ವಿರಳ ಕೃತಿ. ಇಂತಹ ಕೃತಿ ನ್ಯಾಯಾಂಗದಲ್ಲಿ ಬಂದಿಲ್ಲ. ಇದು ಇತಿಹಾಸದ ಬಗ್ಗೆ ಬೆಳಕು ಚೆಲ್ಲುತ್ತದೆ. ಸಾಕ್ರೆಟಿಸ್, ಗೆಲಿಲಿಯೊ, ಈಸೂರಿನ ಪ್ರಕರಣ ಇವೆಲ್ಲವೂ ವಿಭಿನ್ನವಾಗಿ ಇಲ್ಲಿ ಮೂಡಿ ಬಂದಿವೆ. ಸತ್ಯವನ್ನೇ ಪ್ರತಿಪಾದಿಸಿದವರಿಗೆ ಗಲ್ಲು ಶಿಕ್ಷಯಾಗಿದ್ದೂ ಇದೆ. ಇದೊಂದು ಯುವಕರಿಗೆ ಪ್ರೇರಣೆಯಾಗುವ ಪುಸ್ತಕ ಎಂದರು.

ಪುಸ್ತಕ ಕುರಿತು ಮಾತನಾಡಿದ ಪತ್ರಕರ್ತ ಹರ್ಷಕುಮಾರ್ ಕುಗ್ವೆ, ಇದು ವಿವೇಕ ನೀಡುವ, ಬುದ್ಧಿಗೆ ಸಾಣೆ ಹಿಡಿಯುವ ಕೃತಿಯಾಗಿದೆ. ಜಗತ್ತಿನ ಮಹತ್ವದ ಪ್ರಕರಣಗಳನ್ನು ನೆನಪು ಮಾಡಿಕೊಡುತ್ತದೆ. ನೆಲ್ಸನ್ ಮಂಡೇಲಾ, ಈಸೂರು ಪ್ರಕರಣ, ಗಾಂಧೀಜಿಯವರ ಹೋರಾಟ, ಕಮ್ಯುನಿಷ್ಟರ ದಾರಿಗಳು, ಹೀಗೆ ಹಲವು ಚರಿತ್ರೆಯ ವಿಷಯಗಳನ್ನು ಮತ್ತೆ ಮತ್ತೆ ನೆನಪಿಸಿ ಒಂದು ಕಾಲದಲ್ಲಿ ಯಾವುದೋ ಕಾರಣಕ್ಕೆ ನೀಡಿದ್ದ ತೀರ್ಪುಗಳು ಸರಿಯಲ್ಲ ಎಂದು ಪ್ರಸ್ತುತ ಮತ್ತೆ ವಿಚಾರಣೆಗಳು ನಡೆದು ಅದನ್ನು ಸರಿಪಡಿಸಿದ ನ್ಯಾಯಾಲಯದ ತೀರ್ಪುಗಳು ಇಲ್ಲಿ ಸತ್ಯತೆಯನ್ನು ಮತ್ತೆ ಹೊರಹಾಕಿವೆ ಎಂದರು.
ಈ ಇಡೀ ಪುಸ್ತಕದಲ್ಲಿ ಅಥವಾ ಇಡೀ ಪ್ರಕರಣಗಳಲ್ಲಿ ಆರ್.ಎಸ್.ಎಸ್.ನ ಒಬ್ಬರೂ ಬಲಿದಾನ ಮಾಡಿಲ್ಲ ಎಂಬುದು ಗೊತ್ತಾಗುತ್ತದೆ. ಸಾವರ್ಕರ್ ವಿಷಯ ಬಂದಾಗಲೂ ಅμÉ್ಟೀ. ಆತ ಸ್ವಾತಂತ್ರ್ಯಕ್ಕಾಗಿ ಹೋರಾಡಿದವನಲ್ಲ, ಬ್ರಿಟೀಷರ ಬಳಿ ಕ್ಷಮಾಪಣೆ ಪತ್ರ ಬರೆದವನು ಎಂದು ಸ್ವಾತಂತ್ರ್ಯಕ್ಕಾಗಿ ಎಲ್ಲಾ ಧರ್ಮದವರೂ ಹೋರಾಡಿದ್ದರು ಎಂಬುದನ್ನು ಈ ಪುಸ್ತಕ ಹೇಳುತ್ತದೆ ಎಂದರು.

ಕೃತಿಕಾರ ಹಾಗೂ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ಮಾತನಾಡಿ, ಈ ಕೃತಿಯಲ್ಲಿ 22 ಲೇಖನಗಳಿವೆ. ಇದರ ಹಿಂದೆ ಲಕ್ಷಾಂತರ ಪ್ರಕರಣಗಳ ಉತ್ತರವಿದೆ. ದಲಿತರು, ಕಾರ್ಮಿಕರು, ಮಹಿಳೆಯರು, ಏನೂ ಮಾಡಿಲ್ಲ, ಸ್ವಾತಂತ್ರ್ಯಕ್ಕೆ ಅವರ ಕೊಡಗೆ ಏನೂ ಇಲ್ಲ ಎನ್ನುವ ಮಿಥ್ ಗೆ ಇದು ಉತ್ತರ ಕೊಡುತ್ತದೆ ಎಂದರು.
ಯುವಕರಿಗೆ ಸಂವಿಧಾನದ ಪ್ರಜಾಪ್ರಭುತ್ವದ ಅರಿವು ಸಿಕ್ಕರೆ ನನ್ನ ಬರವಣಿಗೆ ಸಾರ್ಥಕವಾಗುತ್ತದೆ. ಪ್ರಜಾಪ್ರಭುತ್ವಕ್ಕೆ ಬದಲಿ ವ್ಯವಸ್ಥೆಯೇ ಇಲ್ಲವಾಗಿದೆ. ನ್ಯಾಯಾಂಗದಲ್ಲೂ ಲೋಪಗಳಿವೆ ಎನ್ನುವುದು ನಿಜ. ಅದನ್ನು ತಿದ್ದಿಕೊಳ್ಳಬೇಕμÉ್ಟೀ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ವಕೀಲ ಕೆ.ಪಿ.ಶ್ರೀಪಾಲ್, ನಾಗಮೋಹನ್ ದಾಸ್ ಅವರು ನಿವೃತ್ತರಾದ ಮೇಲೂ ಕೆಲಸ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಪ್ರೀತಿಯಿಂದ ಸಂವಿಧಾದನ ಅರಿವು ಮೂಡಿಸುವ ಅವರ ಕೆಲಸ ಎಲ್ಲರಿಗೂ ಮಾದರಿಯಾಗಿದೆ. ಈ ಪುಸ್ತಕ ಇತಿಹಾಸದಲ್ಲಿ ಹೂತು ಹೋದ ಹಲವು ಪ್ರಕರಣಗಳನ್ನು ಮತ್ತೆ ಎತ್ತಿಕೊಂಡು ಜೀವಂತಿಕೆ ಪಡೆಯುತ್ತವೆ. ಈ ಪುಸ್ತಕವನ್ನು ಎಲ್ಲರೂ ಓದಬೇಕು ಎಂದ ಅವರು, ಇವರ ಇನ್ನೊಂದು ಕೃತಿ ‘ಸಂವಿಧಾನ ಓದು’ ಪುಸ್ತಕವನ್ನು ಸರ್ಕಾರ ಎಸ್ಎಸ್ಎಸ್ ಮತ್ತು ಪಿಯುಸಿ ತರಗತಿಗಳಿಗೆ ಪಠ್ಯವನ್ನಾಗಿಸಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ, ಸಿಬಿಆರ್ ರಾಷ್ಟ್ರೀಯ ಕಾನೂನು ಕಾಲೇಜಿನ ಪ್ರಾಂಶುಪಾಲೆ ಅನಲಾ, ಸಂವಿಧಾನ ಓದು ಅಭಿಯಾನದ ಸಂಚಾಲಕ ಪೆÇ್ರ. ರಾಜಶೇಖರ್ ಕಿಗ್ಗಾ ಮತ್ತು ಅಧ್ಯಕ್ಷತೆ ವಹಿಸಿದ್ದ ಹಿರಿಯ ವಕೀಲ ಜಿ.ಎಸ್. ನಾಗರಾಜ್ ಮುಂತಾದವರು ಮಾತನಾಡಿದರು. ಸಿರಾಜ್ ಸಿದ್ದಿಕಿ ಸ್ವಾಗತಿಸಿದರು.