ಶಿವಮೊಗ್ಗ,ಆ.31:
ಉನ್ನತ ಶಿಕ್ಷಣ ಸಚಿವ ಅಯೋಗ್ಯ, ಆತನ ವಿರುದ್ದ ಸುಮೋಟೋ ಕೇಸ್ ಹಾಕಲು ಕೆ.ಎಸ್. ಈಶ್ವರಪ್ಪ ಒತ್ತಾಯಿಸಿದ್ದೇಕೆ? ಆತ ಹೊಟ್ಟೆಗೇನು ತಿಂತಾನೋ ಅಂದದ್ದಕ್ಕೇ…? ಗೊತ್ತೇ?

ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ ಓರ್ವ ಅಯೋಗ್ಯ, ಧರ್ಮಾಂಧರ ಕೈಗೆ ಶಿಕ್ಷಣ ಇಲಾಖೆ ಸಿಕ್ಕಿದೆ ಹಿಂದೂ ಧರ್ಮ ವಿರೋಧಿಗಳಾದ ಇಂತಹ ಕೆಲವರು ಡಿಕೆ ಶಿವಕುಮಾರ್ ಕ್ಯಾಬಿನೆಟ್ ಕ್ಯಾಬಿನೆಟ್ ನಲ್ಲಿ ಇರುವುದು ದುರಂತದ ಸಂಗತಿ. ಹೊಟ್ಟೆಗೆ ಏನು ತಿಂತಾನೆ ಎಂದು ಸುದ್ದಿಗೋಷ್ಟಿಯಲ್ಲಿ ಅವರು ಅತ್ಯಂತ ನಿಕೃಷ್ಟವಾಗಿ ನಿಂದಿಸಿದರು.

ಉನ್ನತ ಶಿಕ್ಷಣ ಸಚಿವ ನಿನ್ನೆ ಇಸ್ಲಾಂ ಧರ್ಮವನ್ನು ಹೊಗಳಿದ್ದಲ್ಲದೆ ಮಠ ಮಾನ್ಯಕ್ಕೆ ಹೋಗಲ್ಲ ಅಂದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಅವನಿಗೆ ಹೋಗು ಅಂತ ಹೇಳಿದವರು ಯಾರು? ಹಿಂದೂ ಧರ್ಮದ ಬಗ್ಗೆ ತಿಳಿದುಕೋ ಮೊದಲು ಎಂದು ಹೇಳಿದರು.

ಇದಕ್ಕೆ ಪತಕರ್ತರು ಇಂದು ಅವರು ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗಿದ್ದರು ಎಂದಾಗ *ರಾತ್ರಿ ಆತನ ಕನಸಿನಲ್ಲಿ ಆಂಜನೇಯ ಬಂದು ದೇವಸ್ಥಾನಕ್ಕೆ ಮಠ ಮಂದಿರಕ್ಕೆ ಬರದಿದ್ದರೆ ಜಾಡಿಸಿ ಒದೆಯುತ್ತೇನೆ ಎಂದಿರಬೇಕು ಎಂದು ಹೇಳಿದರು.

ಕೂಡಲೇ ಗೃಹ ಸಚಿವ ಪ್ರಿಯಾಂಕಾ ಖರ್ಗೆ ಅವರು ಈ ಶಿಕ್ಷಣ ಸಚಿವ ನ ವಿರುದ್ಧ ಸುಮೊಟೋ ಪ್ರಕರಣವನ್ನು ದಾಖಲಿಸಬೇಕು ಎಂದು ಒತ್ತಾಯಿಸಿದರು.