

ಶಿವಮೊಗ್ಗ,ಆ.28:
ಶಿವಮೊಗ್ಗ ಜೈಲ್ ರಸ್ತೆ ಹೊಂದಿಕೊಂಡಂತಹ ನೂರು ಅಡಿ ರಸ್ತೆಯ ಹಿಂದಿನ ಲಕ್ಷ್ಮಿ ಚಿತ್ರಮಂದಿರ ಬಳಿಯ ಆವರಣದ ಬಳಿ ನೂರಾರು ಕುದುರೆಗಳು ಓಡಾಡುತ್ತಿವೆ. ಇದು ವಾಹನ ಚಾಲಕರಿಗೆ ಅತಿ ದೊಡ್ಡ ಕಿರಿಕಿರಿ ಮಾಡುತ್ತಿವೆ.




ಇಂದು ಮಧ್ಯಾಹ್ನ 3:30 ಗಂಟೆಗೆ ಸ್ಕೂಟಿಯಲ್ಲಿ ಹೋಗುತ್ತಿದ್ದ ಯುವಕನೋರ್ವ ಇದೇ ಕುದುರೆಯ ಓಡಾಟದ ನಡುವೆ ಸಿಕ್ಕಿಕೊಂಡು ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ತಿಳಿದುಬಂದಿದೆ.
ಶಿವಮೊಗ್ಗ ಮಹಾನಗರ ಪಾಲಿಕೆ ಹಾಗೂ ಸಂಚಾರಿ ಪೊಲೀಸರು ಇಂತಹ ಅವಾಂತರಗಳನ್ನು ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ.

ಸ್ಕೂಟಿ ಪುಡಿಪುಡಿಯಾಗಿರುವ ರೀತಿಯನ್ನು ಗಮನಿಸಿದರೆ ನಿಜಕ್ಕೂ ಭಯದ ವಾತಾವರಣ ಕಂಡು ಬರುತ್ತಿದೆ.