ಶಿವಮೊಗ್ಗ:- ನಗರದ ದುರ್ಗಿಗುಡಿ ಪಾರ್ಕ್ ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆ.29, 30 ಹಾಗೂ 31ರಂದು ಮೂರು ದಿನಗಳ ಕಾಲ ಶ್ರೀ ಗುರುರಾಯರ ೩೫೫ನೇ ಆರಾಧನಾ ಮಹೋತ್ಸವವು ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ.

ಆ.29 ರ ಶನಿವಾರ ಪೂರ್ವಾ ರಾಧನೆ, 30 ರ ಭಾನುವಾರ ಮಧ್ಯಾ ರಾಧನೆ ಹಾಗೂ ಆ.31ರ ಸೋಮ ವಾರ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಲಿದೆ.

ಆರಾಧನೋತ್ಸವ ನಿಮಿತ್ತ ಈ ಮೂರು ದಿನಗಳ ಕಾಲ ಪ್ರತಿದಿನ ಬೆಳಿಗ್ಗೆ ಶ್ರೀ ಗುರುರಾಯರಿಗೆ ವಿಶೇಷ ಅಭಿಷೇಕ, ಸರ್ವಸೇವೆ, ಪೂಜೆ ಹಾಗೂ ಸಂಜೆ ರಜತ ರಥೋತ್ಸವ, ಉಯ್ಯಾಲೆ ಸೇವೆ ಮತ್ತು ಪ್ರಸಾದ ವಿನಿಯೋಗ ಇರುತ್ತದೆ.

ಆ.29 ರ ಶುಕ್ರವಾರ ಬೆಳಿಗ್ಗೆ ಸಾಮೂಹಿಕ ಸತ್ಯನಾರಾಯಣ ಪೂಜೆ, ಸಂಜೆ ಗೋಪೂಜೆ, ಲಕ್ಷ್ಮಿ ಪೂಜೆ ಹಾಗೂ ಧಾನ್ಯ ಪೂಜೆಗಳನ್ನು ಹಮ್ಮಿಕೊಳ್ಳ ಲಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ಗುರುರಾಯರ ಕೃಪೆಗೆ ಪಾತ್ರರಾಗು ವಂತೆ ಸಮಿತಿ ಕೋರಿದೆ.ಶಿವಮೊಗ್ಗದ ಬೊಮ್ಮನಕಟ್ಟೆ ಮಂತ್ರಾಲಯ ಮಠದ ಶ್ರೀರಾಯರ ಶಾಖಾ ಮಠ ಹಾಗೂ ಕೆಆರ್ಪುರಂ ರಸ್ತೆಯ ಪುರಾತನ ಪ್ರಸಿದ್ಧ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಸಹ ಶ್ರೀ ಗುರುರಾಯರ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ಜರುಗಲಿದೆ.