ಗಮನದಲ್ಲಿಡಬೇಕಾದ ಸುದ್ದಿ:
ಸೈಬರ್ ಅಪರಾಧಿಗಳು ಸಾರ್ವಜನಿಕರನ್ನು ವಂಚಿಸಲು ದಿನಕ್ಕೊಂದು ಹೊಸ ತಂತ್ರ ಕಂಡುಕೊಳ್ಳುತ್ತಿದ್ದು, ‘ರಾಂಗ್ ಮನಿ ಟ್ರಾನ್ಸ್ಫರ್’ ಹೆಸರಿನಲ್ಲಿ ಹೊಸ ಮಾದರಿಯ ಎಸ್ಎಮ್ಎಸ್ (SMS) ಸ್ಕ್ಯಾಮ್ ಆರಂಭಿಸಿದ್ದಾರೆ.
ಸ್ಕ್ಯಾಮ್ ಹೇಗೆ ನಡೆಯುತ್ತದೆ?

ನಕಲಿ ಮೆಸೇಜ್ ರವಾನೆ: ನಿಮ್ಮ ಬ್ಯಾಂಕ್ ಅಕೌಂಟ್ಗೆ ಹಣ ಜಮೆಯಾದಂತೆ (Credit) ಥೇಟ್ ನಿಜವಾದ ಬ್ಯಾಂಕ್ ಮೆಸೇಜ್ ಮಾದರಿಯಲ್ಲೇ ನಕಲಿ SMS ಒಂದನ್ನು ಕಳುಹಿಸಲಾಗುತ್ತದೆ.

ದಿಢೀರ್ ಕರೆ ಮತ್ತು ಕಥೆ: ಮೆಸೇಜ್ ಬಂದ ತಕ್ಷಣ ಕರೆ ಮಾಡುವ ವಂಚಕ, “ನಾನು ತರಕಾರಿ/ಮೆಡಿಕಲ್ ಶಾಪ್ಗೆ ಹಣ ಕೊಡುವಾಗ ಮಿಸ್ಟೇಕ್ ಆಗಿ ನಿಮ್ಮ ನಂಬರ್ಗೆ ಕಳುಹಿಸಿಬಿಟ್ಟೆ, ದಯವಿಟ್ಟು ವಾಪಸ್ ಕೊಡಿ” ಎಂದು ವಿನಂತಿಸುತ್ತಾನೆ.
ಮೋಸದ ಖೆಡ್ಡಾ: ನಿಜಕ್ಕೂ ಹಣ ಬಂದಿದೆ ಎಂದು ಭಾವಿಸಿನೀವು ಹಣ ವಾಪಸ್ ಕಳುಹಿಸಿದರೆ, ನಿಮ್ಮ ಸ್ವಂತ ಹಣವನ್ನು ಕಳೆದುಕೊಳ್ಳುತ್ತೀರಿ.
ಮೋಸ ಗುರುತಿಸುವುದು ಹೇಗೆ?
ಸೆಂಡರ್ ಐಡಿ ಗಮನಿಸಿ: ಬ್ಯಾಂಕ್ನಿಂದ ಬರುವ ಅಧಿಕೃತ SMSಗಳಲ್ಲಿ ಎಂದಿಗೂ ಸಾಮಾನ್ಯ 10 ಅಂಕಿಯ ಮೊಬೈಲ್ ನಂಬರ್ ಇರುವುದಿಲ್ಲ. ಬದಲಿಗೆ AX-SBYONO, CB-CANBNK ನಂತಹ ಅಕ್ಷರಗಳ ಕೋಡ್ ಇರುತ್ತದೆ.

ಬ್ಯಾಂಕ್ ಆ್ಯಪ್ ಚೆಕ್ ಮಾಡಿ: ಕೇವಲ ಮೆಸೇಜ್ ನೋಡಿ ನಿರ್ಧರಿಸದೆ, ನಿಮ್ಮ ಅಧಿಕೃತ ಬ್ಯಾಂಕ್ ಅಥವಾ UPI ಆ್ಯಪ್ ಓಪನ್ ಮಾಡಿ ‘ಅಕೌಂಟ್ ಬ್ಯಾಲೆನ್ಸ್/ಸ್ಟೇಟ್ಮೆಂಟ್’ ಪರಿಶೀಲಿಸಿ.
ಗ