ಶಿವಮೊಗ್ಗ: ಗೋವರ್ಧನ ಟ್ರಸ್ಟ್, ವಾಸವಿ ವಿದ್ಯಾಲಯ, ಇಸ್ಕಾನ್ ಶಿವಮೊಗ್ಗ ಹಾಗೂ ಬಾಲ ಗೋಕುಲ ಸಂಸ್ಥೆಗಳ ಸಹಯೋಗದೊಂದಿಗೆ ಸೆ.5 ರಂದು ಸಂಜೆ 4 ಗಂಟೆಗೆ ವಾಸವಿ ವಿದ್ಯಾಲಯದಲ್ಲಿ ಕೃಷ್ಣ ಜನ್ಮಾಷ್ಟಮಿ” ಮತ್ತು ಶಿಕ್ಷರ ದಿನಾಚರಣೆಯನ್ನು ಆಯೋಜಿಸಲಾಗಿದೆ
‘ಗೋವರ್ಧನ ಟ್ರಸ್ಟ್’ ಪ್ರಾರಂಭವಾಗಿ ಒಂದು ವರ್ಷ ಪೂರ್ಣಗೊಳ್ಳುವ ಮುನ್ನವೇ ವಿವಿಧ ಸಮಾಜಮುಖಿ ಕಾರ್ಯಗಳ ಮೂಲಕ ಶಿವಮೊಗ್ಗ ಜನತೆಯ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಗೋವರ್ಧನ ಟ್ರಸ್ಟ್ ಅಧ್ಯಕ್ಷರು ಕೆ.ಇ. ಕಾಂತೇಶ್ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ಸಮಾಜಮುಖಿ ಕಾರ್ಯಗಳಿಗೆ ಸಹಕರಿಸುತ್ತಿರುವ ಸಹೃದಯರಿಗೆ ಕೃತಜ್ಞತೆ ಸಲ್ಲಿಸಿರುವ ಟ್ರಸ್ಟ್, ಮುಂಬರುವ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಶಿಕ್ಷಕರ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಲು ಮುಂದಾಗಿದೆ. ವಿಶೇಷವಾಗಿ ಗೋಮಾತೆಯ ರಕ್ಷಣೆ ಹಾಗೂ ಸಂರಕ್ಷಣೆಯಲ್ಲಿ ಗಮನಾರ್ಹ ಕಾರ್ಯಗಳನ್ನು ನಡೆಸುತ್ತಿರುವ ಟ್ರಸ್ಟ್, ಅಪಘಾತದಲ್ಲಿ ಗಾಯಗೊಂಡ, ದುಷ್ಕರ್ಮಿಗಳ ದಾಳಿಗೆ ಒಳಗಾದ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ಗೋವುಗಳಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡಿ ಸಂರಕ್ಷಿಸುತ್ತಿದೆ ಎಂದರು.
30 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಮೇವು ಬೆಳೆಸಿ, ಶಿವಮೊಗ್ಗ ನಗರದ ಸಮೀಪದಲ್ಲಿರುವ ಶ್ರೀ ಜ್ಞಾನೇಶ್ವರಿ ಗೋಶಾಲೆ, ಶ್ರೀ ಮಹಾವೀರ್ ಗೋಶಾಲೆ, ಸುರಭಿ ಗೋಶಾಲೆ ಹಾಗೂ ವಿಶ್ವಬಂಧು ಗೋಶಾಲೆಗಳಿಗೆ ಉಚಿತವಾಗಿ ಮೇವು ಒದಗಿಸುತ್ತಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗೋವರ್ಧನ ಟ್ರಸ್ಟ್ ನ ಖಜಾಂಚಿ ಶೇμÁಚಲ ಅವರು, ಮಕ್ಕಳಿಗೆ, ಯುವಕ-ಯುವತಿಯರಿಗೆ ಹಾಗೂ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಐದು ವರ್ಷದೊಳಗಿನ ಮಕ್ಕಳಿಗೆ ಕೃಷ್ಣ ವೇಷ ಸ್ಪರ್ಧೆ ನಡೆಯಲಿದೆ. 5ರಿಂದ 10 ವರ್ಷದೊಳಗಿನ ಮಕ್ಕಳಿಗೆ ಹಾಗೂ ಅವರ ತಾಯಂದಿರಿಗೆ ‘ಯಶೋಧಾ ಮತ್ತು ಕೃಷ್ಣ’ ರೂಪಕ ಸ್ಪರ್ಧೆ ಆಯೋಜಿಸಲಾಗಿದ್ದು, ಮೊದಲು ನೋಂದಾಯಿಸುವ 20 ತಂಡಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಆದರೆ ಕೃಷ್ಣವೇಶದ ಮಕ್ಕಳು ಎμÉ್ಟೀ ಬಂದರು ಅವರಿಗೆ ಅವಕಾಶ ಇರುವುದು ಎಂದು ಮಾಹಿತಿ ನೀಡಿದರು.
13ರಿಂದ 18 ವರ್ಷದೊಳಗಿನ ಮಕ್ಕಳಿಗೆ ಮಡಿಕೆ ಒಡೆಯುವ ಸ್ಪರ್ಧೆ ನಡೆಯಲಿದೆ. ಪ್ರತಿ ತಂಡದಲ್ಲಿ ಗರಿಷ್ಠ 10 ಸ್ಪರ್ಧಿಗಳಿಗೆ ಅವಕಾಶವಿದ್ದು, ಮೊದಲು ನೋಂದಾಯಿಸುವ ಯುವಕರ ಐದು ಹಾಗೂ ಯುವತಿಯರ ಐದು ತಂಡಗಳಿಗೆ ಪ್ರತ್ಯೇಕ ಸ್ಪರ್ಧೆ ನಡೆಯಲಿದೆ. ವಯೋಮಿತಿ ದೃಢೀಕರಣಕ್ಕಾಗಿ ಆಧಾರ್ ಕಾರ್ಡ್ ಪ್ರತಿಯನ್ನು ಸಲ್ಲಿಸುವುದು ಕಡ್ಡಾಯವಾಗಿದೆ.
ಇಸ್ಕಾನ್ ಶಿವಮೊಗ್ಗ, ಶ್ರೀ ಶಾರದಾ ನೃತ್ಯ ಕಲಾಕೇಂದ್ರ, ನಾಟ್ಯಪ್ರಿಯಾ ನೃತ್ಯ ಕಲಾಕೇಂದ್ರ ಹಾಗೂ ಶ್ರೀ ಸಾಯಿವೃಂದ ಸುಗಮ ಸಂಗೀತ ಶಾಲೆಯ ವತಿಯಿಂದ ವಿಶೇಷ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ.
ಸ್ಪರ್ಧೆಗಳಿಗೆ ಹೆಸರು ನೋಂದಾಯಿಸಲು ಅರ್ಜಿ ನಮೂನೆಗಳು ಎಸ್.ಪಿ.ಎಂ. ರಸ್ತೆಯಲ್ಲಿರುವ ಗೋವರ್ಧನ ಟ್ರಸ್ಟ್ ಕಚೇರಿ ಹಾಗೂ ಕೋಟೆ ರಸ್ತೆಯಲ್ಲಿರುವ ವಾಸವಿ ವಿದ್ಯಾಲಯ ಕಚೇರಿಯಲ್ಲಿ ಲಭ್ಯವಿರುತ್ತವೆ. ಹೆಚ್ಚಿನ ಮಾಹಿತಿಗಾಗಿ 9964586181, 9742162266, 9481504737 ಹಾಗೂ 8277083025 ಸಂಪರ್ಕಿಸಬಹುದು.
ಪತ್ರಿಕಾಗೋಷ್ಠಿಯಲ್ಲಿ ಗೋವರ್ಧನ ಟ್ರಸ್ಟ್ ಶುಭ ರಾಘವೇಂದ್ರ, ಕಾರ್ಯದರ್ಶಿಗಳು ನಾಗೇಶ ಎಂ, ರಮೇಶ್ ಬಾಬು, ಮೋಹನ್ ಜಾದವ್, ಮಂಜುನಾಥ್, ಕುಬೇರಪ್ಪ, ಅನಂತ್, ವಿಶ್ವಾಸ್.ಇ, ಸ್ವರೂಪ್, ಶುಭಾ ರಾಘವೇಂದ್ರ, ಪಾಂಡುರಂಗ ಪರಾಂಡೆ, ಕೇಶವ ಮುಂತಾದರು ಉಪಸ್ಥಿತರಿದ್ದರು.