ಶಿವಮೊಗ್ಗ,ಆ.22:
ಆಟೋ ಚಾಲಕರೇ, ನಿಮಗೆ ಗ್ರಾಹಕರ ಬಗ್ಗೆ ಪ್ರೀತಿ ಗೌರವ ವಿಶ್ವಾಸ ಇರಲಿ. ಕೇವಲ ಹಣ ಮಾಡುವುದಷ್ಟೇ ನಮ್ಮ ಗುರಿಯಲ್ಲ. ಇಡೀ ವ್ಯವಸ್ಥೆಯಲ್ಲಿ ಕೆಲವೇ ಕೆಲವು ಆಟೋ ಚಾಲಕರು ಮಾಡುವ ಅವಾಂತರಗಳಿಗೆ ಎಲ್ಲಾ ಆಟೊ ಚಾಲಕರು ತಲೆ ಬಗ್ಗಿಸಬೇಕಾಗಿದೆ.
ಪೊಲೀಸರು ತಮಗೆ ದಂಡ ವಿಧಿಸುವ ಅವಾಂತರಕ್ಕೆ, ಈಡಾಗದಿರಿ. ಪ್ರೀತಿಯಿಂದ ಗ್ರಾಹಕರ ಜೊತೆ ಮಾತಾಡಿ. ಅದಕ್ಕೆ ಕಾರಣ ಈ ಸುದ್ದಿ ನೋಡಿ.

ಈ ದಿನ ದಿನಾಂಕ:21-08-2026 ರಂದು ರಾತ್ರಿ 7-30 ಸಮಯದಲ್ಲಿ ಶಿವಮೊಗ್ಗ ನಗರದ ರೈಲ್ವೆ ನಿಲ್ದಾಣದಿಂದ ಕಾಶಿಪುರಕ್ಕೆ ಪ್ರಯಾಣಿಸಲು ಪ್ರಯಾಣಿಕರೊಬ್ಬರು ಪ್ರೀ-ಪೇಯ್ಡ್ ಆಟೋ ಟಿಕೆಟ್ ಪಡೆದಿದ್ದರು. ಆದರೆ, ಸಂಬಂಧಿಸಿದ ಆಟೋ ಚಾಲಕನು ಪ್ರೀ-ಪೇಯ್ಡ್ ಟಿಕೆಟ್ನಲ್ಲಿ ನಿಗದಿಪಡಿಸಿದ ದರಕ್ಕಿಂತ ಹೆಚ್ಚುವರಿಯಾಗಿ ₹40/- ಹಣವನ್ನು ಬೇಡಿಕೆ ಮಾಡಿದ್ದು, ಅಲ್ಲದೇ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿರುವ

ಬಗ್ಗೆ ಪ್ರಯಾಣಿಕರು ದೂರು ನೀಡಿದ ಹಿನ್ನೆಲೆಯಲ್ಲಿ KA-14-C-75 ನೋಂದಣಿ ಸಂಖ್ಯೆಯ ಆಟೋ ರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿದ್ದು, ಚಾಲಕನ ವಿರುದ್ಧ Permit Condition ಉಲ್ಲಂಘನೆ (Violation of Permit Condition) ಅಡಿಯಲ್ಲಿ ಮೋಟಾರು ವಾಹನ ಕಾಯ್ದೆಯನ್ವಯ ಪ್ರಕರಣ ದಾಖಲಿಸಲಾಗಿದೆ.

ಮುಂದಿನ ಕಾನೂನು ಕ್ರಮಕ್ಕಾಗಿ ಪ್ರಕರಣವನ್ನು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಲಾಗಿದೆ.
(ಮಲ್ಲಿಕಾರ್ಜುನ ಚಿತ್ರಮಂದಿರದ ಎದುರೂ ಇದೇ ಅವಾಂತರ ನಡೆಯುತ್ತಿದೆ ಎಂಬ ಆರೋಪ ಇದೆ)