
ಹುಡುಕಾಟದ ಸುದ್ದಿ
ಶಿವಮೊಗ್ಗ,ಆ.20:
ಕಳೆದ ಮೂರು ದಿನದ ಹಿಂದೆ ನ್ಯೂ ಮಂಡ್ಲಿಯ ಮೆಸ್ಕಾಂ ಉದ್ಯೋಗಿಯೊಬ್ಬರ ಮನೆಯಲ್ಲಿ ಸಿಕ್ಕಿ ಬಿದ್ದ ಬಾರೀ ಮೆಸ್ಕಾಂ ಉಪಕರಣಗಳು/ ವಿಜಿಲಿಯನ್ಸ್ ತನಿಖಾ ರಿಪೋರ್ಟ್ ಏನು..? ಎಂಬ ಪ್ರಶ್ನೆ ಮೆಸ್ಕಾಂ ಪಡಸಾಲೆಯಲ್ಲಿ ಚರ್ಚೆಯಾಗುತ್ತಿದೆ.
ನಿಖರ ಮಾಹಿತಿ ಮೇರೆಗೆ ಮೆಸ್ಕಾಂ ವಿಜಿಲಿಯಸ್ಸ್ ತಂಡ ಮನೆ ತೆರವುಗೊಳಿಸುವ ಸಂದರ್ಭದಲ್ಲಿ ದಾಳಿ ನಡೆಸಿತ್ತು, ಅಪಾರ ವಸ್ತುಗಳು ಸಿಕ್ಕಿವೆ, ಅವು ಮೆಸ್ಕಾಂನದಾ ಅಥವಾ ಬೇರೆಯವರದಾ?


ಈಗ ಮೆಸ್ಕಾಂ ಗೋದಾಮಿನಲ್ಲಿಡಲಾಗಿದೆಯಂತೆ, ದಾಳಿ ನಡೆದದ್ದು ದೂರಾಯಿತೇ? ಇಲ್ಲವೇ? ಎಂಬ ಹಲವು ಪ್ರಶ್ನೆಗಳಿಗೆ ಉತ್ತರ ಹುಡುಕಬೇಕಿದೆ.

ವಿಜಿಲೆನ್ಸ್ ನ ಅಧಿಕಾರಿಗಳು ಹೇಳುವ ಪ್ರಕಾರ ಹಿಂದೆ ಇದ್ದ ಮೆಸ್ಕಾಂ ಉದ್ಯೋಗಿ ಮನೆ ಖಾಲಿ ಮಾಡಿದ್ದು ಹೊಸಬರಿಗೆ ಆ ಮನೆಯನ್ನು ನೀಡಲಾಗಿತ್ತು ಈ ಸಂದರ್ಭದಲ್ಲಿ ಖಚಿತ ಮಾಹಿತಿ ದೊರೆತಿದ್ದು, ಆ ಮನೆಯಲ್ಲಿ ವಿದ್ಯುತ್ ಉಪಕರಣಗಳು ಇರುವುದಾಗಿ ತಿಳಿಯು ಬಂದಿದೆ. ಆಗ ದಾಳಿ ನಡೆಸಿದ್ದು ಅವುಗಳನ್ನು ಗೋದಾಮಿಗೆ ಕಳಿಸಲಾಗಿದೆ.
ಅವುಗಳ ಕಳವಿನ ಬಗ್ಗೆ ಅಥವಾ ದೂರು ನೀಡಿರುವ ಬಗ್ಗೆ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಆನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. ಕಥೆ ಎತ್ತ ಸಾಗುತ್ತದೆ ಕಾದು ನೋಡೋಣ…?
