ಶಿವಮೊಗ್ಗ,ಆ.೮: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನನ್ನ ಅಣ್ಣ ಸಮಾನ. ಅವರಿಗೆ ನಮ್ಮ ತಂದೆಯ ಮೇಲೆ ಅಪಾರ ಗೌರವ ಇರುವುದರಿಂದ ಸಂಪುಟದಲ್ಲಿ ಸ್ಥಾನ ನೀಡಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ಸಂತಸ ವ್ಯಕ್ತಪಡಿಸಿದರು.
ಅವರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸನ್ಮಾನ ಸ್ವೀಕರಿಸಿ ಮಾಧ್ಯಮದೊಂದಿಗೆ ಮಾತನಾಡಿ, ಕಾಂಗ್ರೆಸ್ ಹೈಕಮಾಂಡ್ ನನ್ನ ಮೇಲೆ ವಿಶ್ವಾಸ ಇರಿಸಿ ಸಂಪುಟದಲ್ಲಿ ಸಚಿವ ಸ್ಥಾನ ನೀಡಿದ್ದಾರೆ. ಈ ಹಿಂದೆ ಸಚಿವನಾಗಿದ್ದಾಗ ಯಾವುದೇ ನಿರೀಕ್ಷೆಯೆಲ್ಲದೆ ಶಿಕ್ಷಣ ಖಾತೆ ನೀಡಿದ್ದರು. ಈ ಬಾರಿ ಅಂತಹ ಯಾವುದೇ ನಿರೀಕ್ಷೆಯಿಲ್ಲ ಮುಖ್ಯಮಂತ್ರಿ ಯಾವ ಖಾತೆ ಕೊಟ್ಟರು ನಿಭಾಯಿಸುತ್ತೇನೆ. ಅಥವಾ ಈ ಹಿಂದೆ ಇದ್ದ ಶಿಕ್ಷಣ ಖಾತೆ ಕೊಟ್ಟರು ನಿಭಾಯಿಸುತ್ತೇನೆ ಎಂದರು.

ಕಾಂಗ್ರೆಸ್ನ ಜಿಲ್ಲಾ ಕಾರ್ಯಕರ್ತರಿಗೆ ಧನ್ಯವಾಗಳು ಸಲ್ಲಿಸುತ್ತೇವೆ. ನಾನು ಸಚಿವನ್ನಾಗಿದ್ದಾಗ ಜಿಲ್ಲಾ ಸರ್ವಾಂಗೀಣ ಅಭಿವೃದ್ದಿ ವಿಚಾರವಾಗಿ ಎಲ್ಲಾ ರೀತಿಯ ಸಹಕಾರ ನೀಡಿದ್ದರು. ಈ ಬಾರಿ ಅಂತಹ ಸಹಕಾರವನ್ನು ಬಯಸುತ್ತೇನೆ. ಮುಖ್ಯಮಂತ್ರಿ ಸೂಚನೆಯಂತೆ ಜಿಲ್ಲೆಯ ಅತಿವೃಷ್ಟಿ ಮತ್ತು ಬರ ಪರಿಶೀಲನೆ ಜಿಲ್ಲೆ ಪ್ರವಾಸ ಕೈಗೊಂಡಿದ್ದೇನೆ ಎಂದರು.

ಸಂಪುಟ ಪುನರ್ ಮತ್ತು ಗೊಂದಲಗಳ ಬಗ್ಗೆ ನನಗೆ ಮಾಹಿತಿ ಇಲ್ಲ. ಮಾಧ್ಯಮದಲ್ಲಿ ನೋಡಿದ್ದೇನೆ. ಸೋಮವಾದ ವೇಳೆಗೆ ಖಾತೆ ಹಂಚಿಕೆ ಆಗಬಹುದು. ಬೇಳೂರು ಗೋಪಾಲಕೃಷ್ಣ ಹಾಗೂ ಬಿ.ಕೆ. ಸಂಗಮೇಶ್ ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದರು. ಆದರೆ ಅವರಿಗೆ ಸಚಿವ ಸ್ಥಾನ ದೊರಕಿಲ್ಲ. ಇದರಿಂದ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರನ್ನು ಇನ್ನು ಭೇಟಿ ಆಗಿ ಅವರೊಂದಿಗೆ ಮಾತನಾಡುತ್ತೇನೆ ಎಂದರು.
ಕುಮಾರ್ ಬಂಗಾರಪ್ಪ ಒಳ್ಳೆದಾಗಲಿ:
ಮಧು ಬಂಗಾರಪ್ಪ ಸಚಿವ ಸ್ಥಾನ ಸಿಕ್ಕಿರುವುದು ಸಂತೋ?ವಾಗಿದೆ ಎಂಬ ಕುಮಾರ್ ಬಂಗಾರಪ್ಪ ಹೇಳಿಕೆ ಹಿನ್ನೆಲೆಯಲ್ಲಿ
ಅವರಿಗೆ ಒಳ್ಳೆಯದಾಗಲಿ ಎಂದರು.
ಕಾಗೋಡು ತಿಮ್ಮಪ್ಪ ಅವರು ನನ್ನ ತಂದೆ ಸಮಾನ ಸಚಿವ ಸ್ಥಾನ ಪಡೆದು ಅವರ ಆಶೀವಾದ ಪಡೆದಿದ್ದೇನೆ ಎಂದರು.

ಸಚಿವ ಮಧು ಬಂಗಾರಪ್ಪನವರು ಇಂದು ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ್ದಾಗ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಆತ್ಮೀಯವಾಗಿ ಸ್ವಾಗತಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿ ಸಚಿವ ಮಧು ಬಂಗಾರಪ್ಪ, ನಾವೆಲ್ಲ ಪಕ್ಷದ ಶಿಸ್ತಿನ ಸಿಪಾಯಿಗಳು. ಹೈಕಮಾಂಡ್ ತೀರ್ಮಾನಕ್ಕೆ ಬೆಲೆ ಕೊಡುತ್ತೇವೆ. ಒಮ್ಮೆ ಆಯ್ಕೆಯಾದ ಮೇಲೆ ಎಲ್ಲರೂ ಜೊತೆಯಾಗಿ ಹೋಗಬೇಕು. ಅಸಮಾಧಾನ ಕೆಲವರಲ್ಲಿ ಇರಬಹುದು. ಪಕ್ಷದ ಹಿತಾದೃಷ್ಟಿಯಿಂದ ಎಲ್ಲಾ ಹಿರಿಯರು, ಕಿರಿಯರು, ಕಾರ್ಯಕರ್ತರು ಜೊತೆಯಾಗಿ ಹೋಗಬೇಕು. ಮುಖ್ಯಮಂತ್ರಿಗಳು ಪ್ರೀತಿಯಿಂದ ಯಾವುದೇ ಖಾತೆ ಕೊಟ್ಟರು ನಾನು ಯಶಸ್ವಿಯಾಗಿ ನಿರ್ವಹಿಸುತ್ತೇನೆ. ಸರ್ಕಾರಕ್ಕೆ ಒಳ್ಳೆಯ ಹೆಸರು ತರುವ ರೀತಿಯಲ್ಲಿ ಕೆಲಸ ಮಾಡಬೇಕೆಂದು ತಾಕೀತು ಮಾಡಿದ್ದಾರೆ.
ಜಿಲ್ಲೆಯ ಜನ ಶಾಶ್ವತವಾಗಿ ನೆನಪಿನಲ್ಲಿ ಇಡುವಂತಹ ಕೆಲಸ ಮಾಡುತ್ತೇನೆ ಎಂಬ ವಿಶ್ವಾಸ ಇದೆ. ಮಂತ್ರಿಯಾಗಿ ಒಂದು ಚಾಪು ಮೂಡಿಸಬೇಕು ಎಂಬ ಆಶಯ ಇದೆ. ಇನ್ನುಳಿದ ಎರಡು ವರ್ಷಕ್ಕೆ ನಿಮ್ಮೆಲ್ಲರ ಸಹಕಾರ ಬೇಕು. ಮತ್ತೇ ಚುನಾವಣೆಯಲ್ಲಿ ನಾವೆ ಗೆಲ್ಲುತ್ತೇವೆ. ಜಿಲ್ಲೆಯಲ್ಲಿ ಅನೇಕ ಸಮಸ್ಯೆಗಳಿವೆ, ನನಗೆ ಅದರ ಅರಿವಿದೆ. ಕುಡಿಯುವ ನೀರು, ಹಕ್ಕುಪತ್ರ, ಅರಣ್ಯ ಭೂಮಿ, ಸೇರಿದಂತೆ ಅನೇಕ ಸಮಸ್ಯೆ ಇದೆ. ಅದನ್ನು ಬಗೆಹರಿಸುವಲ್ಲಿ ಎಲ್ಲರೂ ಸೇರಿ ಕೆಲಸ ಮಾಡೋಣ ಎಂದರು.

ಪ್ರಸಾವಿಕ ಮಾತನಾಡಿದ ಜಿಲ್ಲಾಧ್ಯಕ್ಷ ಆರ್.ಪ್ರಸನ್ನ ಕುಮಾರ್, ಎಲ್ಲರಿಗೂ ಮಂತ್ರಿ ಸ್ಥಾನ ಸಿಗುವುದು ಕಷ್ಟ ಕೇವಲ ೩೫ ಮಂತ್ರಿ ಸ್ಥಾನಗಳಿವೆ. ಹೈ ಕಮಾಂಡ್ ನೀಡಿದ ತೀರ್ಮಾನವನ್ನು ಎಲ್ಲರೂ ಗೌರವಿಸಬೇಕು. ಪಕ್ಷದಲ್ಲಿ ಯಾವುದೇ ಬಣಗಳಿಲ್ಲ. ನೆನ್ನೆ ಸಣ್ಣಪುಟ್ಟ ಗೊಂದಲಗಳಾಗಿವೆ. ಎರಡು ಕಡೆಯವರನ್ನು ಕರೆಸಿ ಮಾತನಾಡಿದ್ದೇನೆ. ಸಚಿವರು ಬರುವ ಸಂದರ್ಭದಲ್ಲಿ ಎಲ್ಲರೂ ಸೇರಿ ಅದ್ದೂರಿಯಾಗಿ ಸ್ವಾಗತ ಮಾಡಿದ್ದೇವೆ. ಪಾಲಿಕೆ ಮಾಜಿ ಸದಸ್ಯರೊಬ್ಬರಿಗೆ ಅಗೌರವ ತೋರಿಸಿದ್ದಾರೆಂದು ಕೆಲ ಕಾರ್ಯಕರ್ತರು ದೂರ ನೀಡಿದ್ದಾರೆ. ಆ ಸಂದರ್ಭದಲ್ಲಿ ತಳ್ಳಾಟ ನೂಕಾಟವಾಗಿದೆ. ಅದು ಪಕ್ಷದ ವಿಚಾರವಲ್ಲ. ಅವರ ವೈಯಕ್ತಿಕ ಕಾರಣಕ್ಕೆ ಸ್ವಲ್ಪ ಗೊಂದಲವಾಗಿದೆ. ಇಬ್ಬರನ್ನು ಕರೆಸಿ ಸಮಾಧಾನ ಪಡಿಸಿದ್ದೇವೆ ಎಂದರು.
ಎಲ್ಲರೂ ಜಿಲ್ಲೆಯ ಅಭಿವೃದ್ದಿಗೆ ಶ್ರಮಿಸುತ್ತೇವೆ. ಮೊದಲ ಬಾರಿ ಶಿಕ್ಷಣ ಸಚಿವರಾಗಿ ಮಧು ಬಂಗಾರಪ್ಪನವರು ಉತ್ತಮ ಕಾರ್ಯ ಮಾಡಿದ್ದಾರೆ. ಅದನ್ನು ಗಮನಿಸಿ ಹೈ ಕಮಾಂಡ್ ಮಂತ್ತೆ ಮಂತ್ರಿ ಸ್ಥಾನ ನೀಡಿದೆ ಎಂದರು.
ಈ ಸಂದರ್ಭದಲ್ಲಿ ಪಕ್ಷದ ಮುಂಖಡರಾದ ಎಸ್.ಕೆ.ಮರಿಯಪ್ಪ, ಕಲಗೋಡು ರತ್ನಾಕರ್, ಎಸ್.ರವಿಕುಮಾರ್, ಎನ್.ರಮೇಶ್, ಸಯ್ಯದ್ ವಾಹೀದ್ ಅಡ್ಡು, ಜಿ.ಡಿ.ಮಂಜುನಾಥ್, ಚಂದ್ರಭೂಪಾಲ್, ಶಿವಕುಮಾರ್, ರಂಗನಾಥ್, ಚೇತನ್ ಗೌಡ, ಗಿರೀಶ್, ಚಿನ್ನಪ್ಪ, ಶಿವಾನಂದ್ ಸ್ಟೇಲ್ಲಾ ಮಾರ್ಟೀನ್, ಶ್ವೇತಾ ಬಂಢಿ, ಚಂದ್ರಶೇಖರ್ ಇನ್ನಿತರರು ಇದ್ದರು.
\
(\)