ಶಿವಮೊಗ್ಗ,ಆ.೮: ಎಸ್ಐಆರ್ ಪ್ರಕ್ರಿಯೆಯ ಮೊದಲ ಹಂತವನ್ನು ಆ.೧೭ ರವರೆಗೆ ವಿಸ್ತರಿಸಲಾಗಿದ್ದು, ಶಿವಮೊಗ್ಗ ನಗರ ವಿಧಾನಸಭೆ ಕ್ಷೇತ್ರದಲ್ಲಿ ೫೬,೭೨೫ ಮತದಾರರು ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆ ಇರುವುದರಿಂದ ಆತಂಕ ತಂದಿದೆ ಎಂದು ರಾಷ್ಟ್ರಭಕ್ತ ಬಳಗದ ಕೋಶಾಧ್ಯಕ್ಷ ಕೆ.ಈ.ಕಾಂತೇಶ್ ಎಂದರು.


ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಮೃತಪಟ್ಟವರು, ಶಾಶ್ವತ ಸ್ಥಳಾಂತರಗೊಂಡವರು, ವಿಳಾಸಲ್ಲಿ ಇಲ್ಲದವರು ಪ್ರಸ್ತುತ ಮತದಾರರ ಪಟ್ಟಿಯಲ್ಲಿದ್ದಾರೆ. ಇವೆರೆಲ್ಲ ಒಟ್ಟು ಸಂಖ್ಯೆ ೫೬,೭೨೫ ಆಗಿದೆ.

ಈ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಎಲ್ಲಾ ಬಿಎಲ್ಒಗಳಿಗೆ ಸಹಕಾರ ನೀಡಲಾಗಿದೆ. ನಮ್ಮ ರಾಷ್ಟ್ರಭಕ್ತ ಬಳಗದ ಕಾರ್ಯಕರ್ತರು ಎಲ್ಲಾ ಬೂತ್ಗಳಿಗೆ ಭೇಟಿ ನೀಡಿ ಕೈಬಿಟ್ಟಿರುವ ಬಗ್ಗೆ ಕೂಲಂಕುಷವಾಗಿ ಪರಿಶೀಲನೆ ನಡೆಸಲಿದ್ದಾರೆ. ಪ್ರತಿಯೊಬ್ಬ ಮತದಾರರಿಗೆ ಮತ ಚಲಾಯಿಸುವ

ಹಕ್ಕಿದೆ. ರಾಷ್ಟ್ರಭಕ್ತ ಬಳಗದಿಂದ ನಗರದಲ್ಲಿ ಮೂರು ಕಡೆ ಎಸ್ಐಆರ್ ಕಚೇರಿಯನ್ನು ತೆರೆಯಲಾಗಿತ್ತು. ಈಗ ಶುಭ ಮಂಗಳ ಸಮುದಾಯ ಭವನದಲ್ಲಿರುವ ಕಚೇರಿ ಆ.೧೭ರ ವರೆಗೆ ಕಾರ್ಯ ನಿರ್ವಹಿಸಲಿದೆ. ಅಲ್ಲಿಗೆ ಮತದಾರರು ಬಂದು ತಮ್ಮ ಪಟ್ಟಿಯನ್ನು ಪರಿಶೀಲಿಸಬಹುದಾಗಿದೆ ಎಂದರು.