
ಶಿವಮೊಗ್ಗ,ಆ.07:
ಸಾಗರ ವಿಜಯ ನಗರ ನಿವಾಸಿ ಮಂಜು ತನ್ನ ಬಳಿ ಬಂಗಾರದ ನಾಣ್ಯಗಳಿವೆ ಇವುಗಳನ್ನು ಕಡಿಮೆ ಹಣಕ್ಕೆ ಕೊಡುತ್ತೇವೆಂದು ಹೇಳಿ ಕಳೆದ 04/06/2026 ರಂದು ಬೆಳಿಗ್ಗೆ ಜೋಗಿನಗದ್ದೆ ಗ್ರಾಮ, ಸಾಗರ ತಾಲ್ಲೂಕಿಗೆ ಜಗದೀಶ್ ಎಂಬುರನ್ನು ಕರೆಸಿಕೊಂಡು ಅವರಿಂದ 9,60,000 ರೂ ನಗದು ಹಣವನ್ನು ಪಡೆದುಕೊಂಡು ನಕಲಿ ಬಂಗಾರದ ಆಭರಣಗಳನ್ನು ನೀಡಿ, ವಂಚಿಸಿದ್ದು , ಆನಂದಪುರ ಪೊಲೀಸ್ ಠಾಣಾ ಅಪರಾಧ ಸಂಖ್ಯೆ: 97/2026 ಕಲಂ 318(4), 190 ಬಿ.ಎನ್.ಎಸ್ ಕಾಯ್ದೆ ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.

ಆರೋಪಿತರನ್ನು ಪತ್ತೆ ಹಚ್ಚುವ ಕುರಿತು ಮೇಲಾಧಿಕಾರಿಗಳಾದ ನಿಖಿಲ್.ಬಿ, ಐಪಿಎಸ್, ಪೊಲೀಸ್ ಅಧೀಕ್ಷಕರು ಶಿವಮೊಗ್ಗ, ಕಾರಿಯಪ್ಪ ವಿ.ಜಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಅವರ ಮಾರ್ಗದರ್ಶನದಲ್ಲಿ ಹಾಗೂ ಬೆನಕ ಪ್ರಸಾದ್ ಎಎಸ್ಪಿ ಸಾಗರ ಉಪವಿಭಾಗ ರವರ ಮೇಲ್ವಿಚಾರಣೆಯಲ್ಲಿ ಪ್ರವೀಣ್ ಎಸ್.ಪಿ, ಆನಂದಪುರ ಪೊಲೀಸ್ ಠಾಣಾ ಪಿಎಸ್ಐ ಹಾಗೂ ಸಿಬ್ಬಂದಿಗಳನ್ನು ಓಳಗೊಂಡ ತಂಡ ರಚಿಸಿಕೊಂಡು ಆರೋಪಿ ಪತ್ತೆ ಕಾರ್ಯದಲ್ಲಿದ್ದಾಗ, ಮಂಜುನಾಥ ವಿ, 30 ವರ್ಷ, ಪೈಂಟಿಂಗ್ ಕೆಲಸ, ವಾಸ ಯಲ್ಲಾಪುರ ಗ್ರಾಮ, ಹರಪನ ಹಳ್ಳಿ ತಾಲ್ಲೂಕು, ವಿಜಯನಗರ ಜಿಲ್ಲೆ ಈತನನ್ನು ದಸ್ತಗಿರಿ ಮಾಡಿ ಆರೋಪಿತನಿಂದ ಪ್ರಕರಣಕ್ಕೆ ಸಂಬಂಧಿಸಿದ 7,10,000/-ರೂ ನಗದು ಹಣವನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.

ರಘು ಕುಮಾರ್,
ಅಧ್ಯಕ್ಷರು,
ಪದಾದಿಕಾರಿಗಳು, ಸದಸ್ಯರು
ಶ್ರೀ ಬಾಲ ಸುಬ್ರಮಣ್ಯ ಸ್ವಾಮಿ ದೇವಾಲಯ ಟ್ರಸ್ಟ್,
ಗುಡ್ಡೆಕಲ್, ಶಿವಮೊಗ್ಗ
