ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿ ಇಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನ ಪ್ರಧಾನಕಾರ್ಯದರ್ಶಿ, ಕಳೆದ ಮುವತ್ತೆಂಟು ವರುಷದಿಂದಲೂ ಕಾಂಗ್ರೆಸ್ ಪಕ್ಷದ ನಿಷ್ಟಾವಂತ ಕಾರ್ಯಕರ್ತ ಎ.ಹೆಚ್. ಸುನಿಲ್ ಅವರು ಗಾಂಧಿಬಜಾರ್ ನಿಂದ ಪಕ್ಷದ ಕಛೇರಿಯವರೆಗೆ ಬೃಹತ್ ವೈಭವದ ಮೆರವಣಿಗೆ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಸಿದರು.

ಸುನಿಲ್ ಅವರು 1988 ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದು, ಎನ್ ಎಸ್ ಯು ಐ, ಯುವಕಾಂಗ್ರೆಸ್, ಬ್ಲಾಕ್ ಕಾಂಗ್ರೆಸ್ ಮೂಲಕ ಬೆಳೆದು ಈಗ ಜಿಲ್ಲಾ ಕಾಂಗ್ರೆಸ್ ಪ್ರಮುಖರಾಗಿದ್ದಾರೆ.
ಪ್ರಸಕ್ತ ಹತ್ತಕ್ಕೂ ಹೆಚ್ಚು ಸಂಘ, ಸಂಸ್ಥೆಗಳಲ್ಲಿ ಸಕ್ರಿಯ ಕಾರ್ಯಕರ್ತರಾಗಿರುವ ಸುನಿಲ್ ಅವರ ಅರ್ಜಿ ವಿವರಗಳು ಸ್ಪಷ್ಟವಾಗಿವೆ

ಸೂಡಾದ ಮಾಜಿ ಸದಸ್ಯ, ಸಿಟಿ ಹಾಗೂ ಹೌಸಿಂಗ್ ಕೋ ಆಪರೇಟೀವ್ ಬ್ಯಾಂಕ್ ನ ಮಾಜಿ ಪದಾದಿಕಾರಿ, ಕೋಟೆ ಮಾರಿಕಾಂಬಾ ದೇವಾಲಯದ ಸಹಕಾರ್ಯದರ್ಶಿ, ಜಿಲ್ಲೆಯ ಮುಂಚೂಣಿ ಯುವ ಹೋರಾಟಗಾರ ಸೇರಿದಂತೆ ವಿವಿಧ ಕ್ರೀಡಾ, ನಾಗರೀಕ ಸಮಿತಿಗಳ ಪ್ರಮುಖರಾಗಿರುವ ಸುನಿಲ್ ಅವರು ಅಪಾರ ಪ್ರಮುಖರು ಮತ್ತು ಅಭಿಮಾನಿಗಳೊಂದಿಗೆ ಕಾಂಗ್ರೆಸ್ ಪಕ್ಷದ ಆಡಳಿತ ಕಾರ್ಯದರ್ಶಿ ಎಸ್. ಟಿ. ಹಾಲಪ್ಪನವರಿಗೆ ತಮ್ಮ ಅರ್ಜಿಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾ

ದ ಶ್ರೀಧರ ಮೂರ್ತಿ ನವಲೆ, ಮಧುಸೂಧನ ಎಸ್.ಬಿ., ಯುವಕಾಂಗ್ರೆಸ್ ಮಂಜು, ವಿನಯ ತಾಂಡ್ಲೆ, ವಾರ್ಡ್ ಗಳ ಅಧ್ಯಕ್ಷರಾದ, ಮಲ್ಲಿಕಾರ್ಜುನ, ಮೋಹನ್ ಕುಮಾರ್, ವಿನಯ್ ಕುಮಾರ್, ಕೇಶವ, ಅಶೋಕ್, ರಘು, ಸತೀಶ್, ಆಶೀಸ್, ವೈ.ಎಸ್. ಕುಮಾರ್ ಸೇರಿದಂತೆ ಹಲವರಿದ್ದರು.