

ಶಿವಮೊಗ್ಗ: ಪತ್ರಿಕೋದ್ಯಮದ ಮುದ್ರಣ ಕ್ಷೇತ್ರದಲ್ಲಿ ಸಲ್ಲಿಸಿರುವ ಅಪಾರ ಸೇವೆಯನ್ನು ಪರಿಗಣಿಸಿ, ಶಿವಮೊಗ್ಗ ಪ್ರೆಸ್ ಟ್ರಸ್ಟ್ ಶಿವಮೊಗ್ಗದ ತುಂಗಾ ತರಂಗ ದಿನಪತ್ರಿಕೆಯ ಸಂಪಾದಕರಾದ ಎಸ್.ಕೆ. ಗಜೇಂದ್ರ ಸ್ವಾಮಿ ಅವರಿಗೆ “ಮುದ್ರಣ ಮಾಧ್ಯಮ ವಿಭಾಗದ ಅತ್ಯುತ್ತಮ ಸಾಧಕ” ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.


ನಗರದ ಪತ್ರಿಕಾ ಭವನದಲ್ಲಿ ಪ್ರೆಸ್ ಟ್ರಸ್ಟ್ ವತಿಯಿಂದ ಆಯೋಜಿಸಲಾದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.

ಪ್ರಶಸ್ತಿ ಸ್ವೀಕರಿಸಿದ ಎಸ್.ಕೆ. ಗಜೇಂದ್ರ ಸ್ವಾಮಿ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು, ಶಿಕ್ಷಕ ಕ್ಷೇತ್ರದವರು, ವೈದ್ಯರ ಸಮೋಹ, ವಾಣಿಜ್ಯೋದ್ಯಮಿಗಳು, ಪತ್ರಿಕಾ ರಂಗದ ಹಿರಿಯ ಕಿರಿಯ ಗೆಳೆಯರು ಶುಭಹರಸಿದ್ದಾರೆ.


ಕಾಂಗ್ರೆಸ್ ಮುಖಂಡರಾದ ಎಲ್. ಸತ್ಯನಾರಾಯಣ್, ಶ್ರೀನಿಧಿ ಬಳಗ, ಅಶ್ವತನಾಯಾಯಣಶೆಟ್ಟಿ, ಕಾಂಗ್ರೆಸ್ ನ ಕೆ. ರಂಗನಾಥ್, ಎ.ಹೆಚ್. ನಿಲ್ ಮಾಜಿ ಮಹಾನಗರ ಪಾಲಿಕೆ ಸದಸ್ಯೆ ರೇಖಾ ರಂಗನಾಥ್ ಸೇರಿದಂತೆ ಹಲವರು ಮತ್ತು ಪತ್ರಿಕೋದ್ಯಮ ಕ್ಷೇತ್ರದ ಸ್ನೇಹಿತರು, ಹಿರಿಯ ಪತ್ರಕರ್ತರು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಕುಟುಂಬದ ಸದಸ್ಯರು ಹೂಗುಚ್ಛ ನೀಡಿ ಶುಭ ಹಾರೈಸಿದರು.
