ಶಿವಮೊಗ್ಗ, ಜು, 17 ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ ಐ ಆರ್) ಕಾರ್ಯವು ಸಾಗುತ್ತಿದ್ದು, ಜುಲೈ 17 ರ ಸಂಜೆ 4 ಗಂಟೆಯ ವೇಳೆಗೆ ಜಿಲ್ಲೆಯಾದ್ಯಂತ ಒಟ್ಟು ಶೇ. ರಷ್ಟು ಇ-ಫಾರ್ಮ್ಗಳನ್ನು (EFs) ವಿತರಿಸಲಾಗಿದೆ ಎಂದು ಶಿವಮೊಗ್ಗ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದ್ದಾರೆ.
ಜಿಲ್ಲೆಯ ಒಟ್ಟು 7 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 1,793 ಬಿ.ಎಲ್.ಒ ಗಳು ಕಾರ್ಯನಿರ್ವಹಿಸುತ್ತಿದ್ದು, ಒಟ್ಟು 15,19,459 ಮತದಾರರಿದ್ದಾರೆ. ಈ ಪೈಕಿ ಇದುವರೆಗೆ 1517930 ಇ-ಫಾರ್ಮ್ಗಳನ್ನು ಅಂದರೆ ಶೇ. 99.90
ವಿತರಿಸಲಾಗಿದ್ದು, 1006399 ಫಾರ್ಮ್ಗಳನ್ನು ಶೇ.66.23 ಡಿಜಿಟಲೀಕರಣಗೊಳಿಸಲಾಗಿದೆ.

ಕ್ಷೇತ್ರವಾರು ಪ್ರಗತಿ ವಿವರಗಳು:
ಶಿವಮೊಗ್ಗ ಗ್ರಾಮಾಂತರ: ಒಟ್ಟು 2,20,250 ಮತದಾರರಿದ್ದು, 2,20,250 ಶೇ. 100 ಇ-ಫಾರ್ಮ್ ವಿತರಿಸಲಾಗಿದೆ. 158001 ಅಂದರೆ ಶೇ. 71.74 ಡಿಜಿಟಲೀಕರಣಗೊಳಿಸಲಾಗಿದೆ.
ಭದ್ರಾವತಿ: 2,14,907 ಮತದಾರರಿದ್ದು, 2,14,907 ಶೇ. 100 ಇ-ಫಾರ್ಮ್ ವಿತರಿಸಲಾಗಿದ್ದು, 110420 ಫಾರ್ಮ್ ಅಂದರೆ ಶೇ 4.12 ಡಿಜಿಟಲೀಕರಣಗೊಂಡಿದೆ.
ಶಿವಮೊಗ್ಗ ನಗರ: 2,77,098 ಮತದಾರರನ್ನು ಹೊಂದಿದ್ದು, 275778 ಶೇ. 99.52 ಇ-ಫಾರ್ಮ್ ವಿತರಣೆಯಾಗಿದೆ. 144251 ಫಾರ್ಮ್ ಶೇ.52.06ಡಿಜಿಟಲೀಕರಣಗೊಂಡಿದೆ.

ತೀರ್ಥಹಳ್ಳಿ: 1,92,314 ಮತದಾರರಿದ್ದು, 192113 ಶೇ. 99.90 ಇ-ಫಾರ್ಮ್ ವಿತರಿಸಲಾಗಿದೆ. 140863 ಫಾರ್ಮ್ ಶೇ. 73.25 ಡಿಜಿಟಲೀಕರಣಗೊಂಡಿದೆ.
ಶಿಕಾರಿಪುರ 2,06,415 ಮತದಾರರಿದ್ದು,2,06,415 ಶೇ. 100 ಇ-ಫಾರ್ಮ್ ವಿತರಿಸಲಾಗಿದ್ದು, 142558 ಫಾರ್ಮ್ ಶೇ. 69.06 ಡಿಜಿಟಲೀಕರಣಗೊಳಿಸಲಾಗಿದೆ.
ಸೊರಬ: 1,98,955 ಮತದಾರರಿದ್ದು, 1,98,955 ಶೇ. 100 ರಷ್ಟು ಇ-ಫಾರ್ಮ್ ವಿತರಣೆಯಾಗಿದ್ದು. ಇಲ್ಲಿ 153176 ಫಾರ್ಮ್ ಶೇ. 76.99 ಡಿಜಿಟಲೈಸ್ ಮಾಡಲಾಗಿದೆ.

ಸಾಗರ: 2,09,520 ಮತದಾರರಿದ್ದು,2,09,520 ಶೇ. 100 ಇ-ಫಾರ್ಮ್ ವಿತರಿಸಲಾಗಿದ್ದು, 157130 ಫಾರ್ಮ್ ಶೇ.75 ಡಿಜಿಟಲೀಕರಣಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.