ಶಿವಮೊಗ್ಗ, ಜು.13: ಸದ್ಯದಲ್ಲೇ ಎಲ್ಲರಂತೆ ಶಿವಮೊಗ್ಗ ತಾಲ್ಲೂಕಿನ ಎಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರಿಗೂ ಹತ್ತುದಿನಗಳ ತರಬೇತಿ ನಡೆಯುತ್ತಿದೆ. ನಿತ್ಯ ಶಾಲೆಗೆ ಹೋಗಿ ಬರುತ್ತಿರುವ ಈ ಶಿಕ್ಷಕರು ಕೊರೋನಾ ಹೆಸರಿನಲ್ಲಿ ಈಗಷ್ಟೆ ಭಯಬೀತರಾಗಿದ್ದಾರೆ…!
ಕಾರಣವಿಷ್ಟೆ.,, ಕಳೆದ ಜು.9 ರಂದು ಡಯಟ್ ನಲ್ಲಿ ನಡೆದ ಶಿಕ್ಷಕರ ತರಬೇತಿ ಪೂರ್ವದ ಸಿ ಆರ್ ಪಿಗಳ ಸಭೆಯಲ್ಲಿ ಓರ್ವ ಸಿ ಆರ್ ಪಿಗೆ ಕೊರೊನಾ ಪಾಸಿಟೀವ್ ಬಂದಿದೆ.
ಈ ಸಿ ಆರ್ ಪಿಗಳು ನಡೆಸುವ ಸಭೆಯಲ್ಲಿ ಹೇಗೆ ಭಾಗವಿಸಬಹುದೆಂದು ಬೆದರಿದ್ದಾರೆ. ಇದಕ್ಕೆ ಪೂರಕವಾಗಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರವಿ ನೇತೃತ್ವದಲ್ಲಿ ತರಬೇತಿ ಅವಧಿ ಮುಂದೂಡಲು ವಿನಂತಿಸಿದ್ದರು.
ಅಂದಿನ ಸಭೆಯಲ್ಲಿ ಡಯಟ್ ಪ್ರಾಂಶುಪಾಲರಾದ ಚಂದ್ರಮ್ಮ, ಬಿ.ಇ.ಓ. ನಾಗರಾಜ್, 32 CRPಗಳು, 5 ECOಗಳು ಭಾಗವಹಿಸಿದ್ದರು.
ಈ ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ ಸ್ವಯಂ ತಪಾಸಣೆಗೆ ಹೋಗಿ ಬಂದಿದ್ದ CRPಒಬ್ಬರಿಗೆ ನಿನ್ನೆ ಕೊರೊನಾ ಬಂದಿರುವುದು ಗೊತ್ತಾಗಿದೆ.
ಆ ಸಭೆಯಲ್ಲಿದ್ದ ಉಳಿದ ಅಧಿಕಾರಿಗಳೆಲ್ಲಾ ಹೆದರಿದ್ದಾರೆ. ಹಾಗೆಯೇ, ಸದ್ಯದಲ್ಲೇ ನಡೆಯುವ ಶಿಕ್ಷಕರ ತರಬೇತಿ ನೆನೆದು ಶಿಕ್ಷಕರು ಬೆದರಿದ್ದಾರೆ.
ದೈರ್ಯ ಹೇಳಿದ ಬಿಇಓ
ಈ ವಿಚಾರದ ಮಾಹಿತಿ ಪಡೆದ ಬಿಇಓ ನಾಗರಾಜ್ ಅವರು ಶಿಕ್ಷಕರಿಗೆ ಗಾಬರಿಯಾಗದಿರಲು ತಿಳಿಸಿದ್ದಾರೆ.
ಅಂದಿನ ಸಭೆ ಸಾಮಾಜಿಕ ಅಂತರ ಹಾಗೂ ಸ್ಯಾನಿಟೈಜಿಂಗ್ ಮೂಲಕ ನಡೆದಿದೆ. ಪ್ರಾಥಮಿಕ ಸಂಪರ್ಕಕ್ಕೆ ಇಲ್ಲಿಯ ಯಾರೂ ಬಂದಿಲ್ಲ. ಆಯುಕ್ತರ ಸೂಚನೆಯಂತೆ ಸಭೆ ನಡೆದಿದ್ದು, ಎಲ್ಲಾ CRP ಹಾಗೂ ECOಗಳಿಗೆ ಏಳುದಿನಗಳ ಕಾಲ ಮನೆಯಲ್ಲಿರಲು ತಿಳಿಸಿದ್ದೇವೆ. ಆರೋಗ್ಯ ದಲ್ಲಿ ವ್ಯತ್ಯಯವಾದರೆ ತಪಾಸಣೆ ಮಾಡಿಸಿಕೊಳ್ಳು ಸೂಚಿಸಿದ್ದೇವೆ. ಈಗಾಗಲೇ ನಾಲ್ಕು ದಿನವಾಗಿದೆ. ಇನ್ನೂ ಮೂರುದಿನ ಈ ಕಾರ್ಯ ನಡೆಯುತ್ತದೆ. ಶಿಕ್ಷಕರ ತರಬೇತಿ ಬಗ್ಗೆ ಡಯಟ್ ಕ್ರಮಕೈಗೊಳ್ಳುತ್ತದೆ. ಶಿಕ್ಷಕರು ಗಾಬರಿಯಾಗದಂತೆ ಬಿಇಓ ನಾಗರಾಜ್ ತಿಳಿಸಿದ್ದಾರೆ.