ಶಿವಮೊಗ್ಗ,ಜೂ.21:
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ನೂತನ ಅಧ್ಯಕ್ಷರಾಗಿ ಬಿ.ಕೆ. ಹರಿಪ್ರಸಾದ್ ಪದಗ್ರಹಣ ಸಮಾರಂಭ ಇಂದು ವೈಭವದಿಂದ ನಡೆದಿದೆ.
ರಾಜ್ಯದಾದ್ಯಂತ ಆಯಾ ಜಿಲ್ಲಾ ಕಾಂಗ್ರೆಸ್ ಸಮಿತಿ ಅಪಾರ ಸಂಖ್ಯೆಯ ಪದಾದಿಕಾರಿಗಳು, ಕಾರ್ಯಕರ್ತರನ್ನು ಅಲ್ಲಿ ಸೇರಿಸಿಕೊಂಡು ಶುಭ ಹಾರೈಸಿದೆ.

ಆದರೆ, ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಎಷ್ಟು ಮಂದಿಯನ್ನು ಕರೆದುಕೊಂಡು ಹೋಗಿದ್ದಾರೆ. ಬಹುತೇಕ ನಾಯಕರು ಅವರವರೇ, ಅವರವರ ಪಕ್ಷದ ಕಾರ್ಯಕರ್ತರನ್ನು ಕರೆದುಕೊಂಡು ಹೋಗಿದ್ದಾರೆ. (ಸಂಪೂರ್ಣ ವೀಡಿಯೋ ಇದೆ)
ಜಿಲ್ಲಾ ಕಾಂಗ್ರೆಸ್ ನ ಪ್ಲೆಕ್ಸಿಯಲ್ಲಿನ ಮೂವರು ಅಲ್ಲಿದ್ದರಾ? ಅವರು ಎಷ್ಟು ಕಾರ್ಯಕರ್ತರನ್ನು ಕರೆದುಕೊಂಡು ಹೋಗಿದ್ದಾರೆ, ಅವರವರ ಜಾಲಿ ಟ್ರಿಪ್ ಮಾಡಿದ್ದಾರಾ? ಎಂಬ ಪ್ರಶ್ನೆ ಹಿಡಿದು ಕಾಂಗ್ರೆಸ್ ಮುಖಂಡರ ಪ್ರಶ್ನೆಗೆ ಜಿಲ್ಲಾ ಕಾಂಗ್ರೆಸ್, ಆ ಪ್ಲೆಕ್ಸಿಯ ಮೂವರು, ಅಧ್ಯಕ್ಷರೆಂಬ ನಾಯಕರು ಉತ್ತರಿಸಬೇಕು?

ದಾಖಲೆ ವೀಡಿಯೋ ಸಹಿತದ ಮಾಹಿತಿ ತುಂಗಾತರಂಗ ಪತ್ರಿಕೆ ಅಂಗಳದಲ್ಲಿದೆ. ಪಕ್ಷ, ಕಛೇರಿ, ಜವಾಬ್ದಾರಿ ಅವರವರಿಗೆ ಗೊತ್ತರಬೇಕಲ್ವೇ? ಎಲ್ಲೆಡೆ ಗುಂಪು ಕ್ರಿಯೇಟ್ ಮಾಡೋರು ನಾಯಕರಾ? ಎಂಬ ಗಂಭೀರ ಪ್ರಶ್ನೆ ಇದು.


(ಈ ಮಾಹಿತಿ ತುಂಗಾತರಂಗ ಪತ್ರಿಕೆಯದಲ್ಲ, ಪತ್ರಿಕೆ ಬಳಗದ ನೆಂಟಸ್ತಿಕೆಯದ್ದೂ ಅಲ್ಲ, ಮಾಹಿತಿ ನೀಡಬೇಕಾದರು ನೀಡಲಿ, ಪಕ್ಷ ಎಲ್ಲಿದೆ, ವ್ಯಕ್ತಿಗತ ಎಲ್ಲಿದೆ ಗಮನಿಸಲಿ. ನಿನ್ನೆ ತುಂಗಾತರಂಗ ಈ ವಿಷಯ ಬರೆದು ಮುನ್ಸೂಚನೆ ನೀಡಿತ್ತು, ಮುಂದಿನದು..!)
