\
ಸ್ಥಳೀಯ ಲೆಕ್ಕ ಪರಿಶೋಧನಾ ವರ್ತುಲ ಕಚೇರಿಯ ಉಪನಿರ್ದೇಶಕರಾಗಿ ಸಿ.ಎಸ್.ಷಡಾಕ್ಷರಿ ಅಧಿಕಾರ ಸ್ವೀಕಾರ :
ಶಿವಮೊಗ್ಗ : ಜೂನ್ ೧೯ : : ಸಿ.ಎಸ್.ಷಡಾಕ್ಷರಿ ಅವರು ಜೂನ್ ೧೮ರಂದು ಶಿವಮೊಗ್ಗದ ಸ್ಥಳೀಯ ಲೆಕ್ಕ ಪರಿಶೋಧನಾ ವರ್ತುಲ ಕಚೇರಿಯಲ್ಲಿ ಖಾಲಿ ಇದ್ದ ಉಪನಿರ್ದೇಶಕರ ಹುದ್ದೆಯ ಅಧಿಕಾರ ವಹಿಸಿಕೊಂಡರು. ಶ್ರೀಯುತರು ಈ ಹಿಂದೆ ಶಿವಮೊಗ್ಗದ ಲೆಕ್ಕಪರಿಶೋಧನಾ ವರ್ತುಲ

ಇಲಾಖೆಯಲ್ಲಿ ಲೆಕ್ಕ ಅಧೀಕ್ಷಕರಾಗಿ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಸಿ.ಎಸ್.ಷಡಾಕ್ಷರಿ ಅವರು ೨೦೨೩ರಲ್ಲಿ ಶಿವಮೊಗ್ಗದಿಂದ ವರ್ಗಾವಣೆಗೊಂಡು ಬೆಂಗಳೂರಿನ ಉಚ್ಛನ್ಯಾಯಾಲಯ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ್ದರು.

ಪ್ರಸ್ತುತ ಸಿ.ಎಸ್.ಷಡಾಕ್ಷರಿ ಅವರು ಸರ್ಕಾರದ ವರ್ಗಾವಣೆ ಆದೇಶದಂತೆ ಶಿವಮೊಗ್ಗಕ್ಕೆ ಮರಳಿ ಕರ್ತವ್ಯದ ಮೇಲೆ ಹಾಜರಾಗಿರುವುದು ರಾಜ್ಯ ನೌಕರರು ನೌಕರರಲ್ಲಿ ಸಂತಸ ಮೂಡಿದೆ. ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ನೌಕರರು ಸಿ.ಎಸ್.ಷಡಾಕ್ಷರಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡು ಸಂಭ್ರಮಿಸಿದರು.
: