ಹುಡುಕಾಟದ ವರದಿ: ರವಿ
ಶಿವಮೊಗ್ಗ,ಜೂ.18:
ಸರ್ಕಾರದ ಒಡೆತನದಲ್ಲಿರುವ ಜಮೀನು ಹಾಗೂ , ಆಸ್ತಿಯನ್ನು ಕಬಳಿಸಲು ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಕ್ಕೆ, ಅಧಿಕಾರಿಗಳಿಗೆ ವಂಚಿಸಲು ಯತ್ನಿಸಿದ ಪ್ರಕರಣವೊಂದು ಶಿವಮೊಗ್ಗ ತಾಲ್ಲೂಕು ಕಛೇರಿಯಲ್ಲಿ ನಡೆದಿದೆ ಅಧಿಕಾರಿಗಳ ತಂಡ ತನ್ನ ಚಾಣಾಕ್ಷತನದಿಂದ ನಕಲಿ ದಾಖಲೆಗಳನ್ನ ಸೃಷ್ಟಿಸಿದವನ ಬಂಡವಾಳ ಬಯಲು ಮಾಡಿದ್ದಾರೆ. ಶಿವಮೊಗ್ಗಲ್ಲಿ ತಾಲ್ಲೂಕು ಕಛೇರಿಯಲ್ಲಿ ಈ ಘಟನೆ ನಡೆದಿದ್ದು ತಹಶೀಲ್ದಾರ್ V.S ರಾಜೀವ್ , ಅಭೀಲೇಖಾಲಯ ವಿಷಯ ನಿರ್ವಾಹಕ ಅಭಿನಂದನ್ , ಹಾಗೂಆರ್ ಆರ್ ಟಿ ಶೀರಸ್ತೆದಾರಾದ ,ವಿನಯ್ ಅವರು ಇಂತಹದೊಂದು ಪ್ರಕರಣವನ್ನು ಪತ್ತೆ ಹಚ್ಚಿದ್ದು
ಖತನಾಕ್೯ ಭೂಗಳ್ಳರಾದ ರಘು ಹಾಗೂ ಶಾಹಿದ್ ಎಂಬುವವರ ವಿರುದ್ದ ಶಿವಮೊಗ್ಗ ಜಯನಗರ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಿ ಜೈಲಿನ ಒಳಗೆ ಮುದ್ದೆ ಮುರಿಯಲು ಕಳಿಸಿದ್ದಾರೆ

ಆರ್ ಆರ್ ಟಿ ಶೀರಸ್ತೆದಾರಾದ ವಿನಯ್ ,ಅಭೀಲೇಖಾಲಯ ವಿಷಯ ನಿರ್ವಾಹಕ ಅಭಿನಂದನ್ , ಡಾಟ ಅಪರೇಟಿವ್ ಪುನೀತ್
ಶಿವಮೊಗ್ಗ ತಾಲ್ಲೂಕು ಅಭಿಲೇಖಾಲಯ ಶಾಖೆಯಲ್ಲಿ ಡಾಟ ಅಪರೇಟಿವ್ ಅಗಿ ಕೆಲಸ ನಿರ್ವಹಿಸುತ್ತಿದ್ದ ಪುನೀತ್ ಎಂಬುವವರ ಬಳಿ ಸಾಂಖ್ಯಿಕ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಖತನಾಕ್ ೯ ಭೂಗಳ್ಳ ರಘು ಎಂಬಾತ ತನ್ನ ಅತಿ ಬುದ್ದಿವಂತಿಕೆ ಬಳಸಿ ಸರ್ಕಾರಿ ಭೂಮಿಯ ನಕಲಿ ದಾಖಲೆಯನ್ನೆ ಸೃಷ್ಟಿಮಾಡಿ ಭೂಮಿಯನ್ನು ಸರ್ಕಾರಿ ಭೂಮಿಯನ್ನೆ ನುಂಗಲು ಮುಂದಾದ ರಘು ಎಂಬಾತನು ಪುನೀತನ ಬಳಿ ಬಂದು ಸೊರಬದ ನನ್ನ ಸ್ನೇಹಿತ ಶಾಯಿದ್ ಎಂಬುವವರ ಹಳೇಯ ದಾಖಲೆಗಳನ್ನು ಕೊಡುತ್ತೇನೆ ನೀನು ಅದಷ್ಟು ಬೇಗ ಭೂ ಸುರಕ್ಷಾ ತಂತ್ರಂಶದಲ್ಲಿ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿಕೊಡು ಅತನಿಂದ ನಿನಗೆ ಬೇಕಾದಷ್ಟು ಹಣ ನಿನಗೆ ಕೊಡಿಸುತ್ತೇನೆ ಎಂದು ಹಣದ ಆಸೆ ಅಮಿಷ ಒಡ್ಡಿದ ಮಹಾನ್ ಬುದ್ದಿವಂತ ರಘು ಹೇಳಿದ ಈತ ಹೇಳಿದ ವಿಷಯವನ್ನು ತಕ್ಷಣ ಡಾಟ ಎಂಟ್ರಿಯಾದ ಪುನೀತ್ ರವರು

ಅಭೀಲೇಖಾಲಯ ಶಾಖೆಯ ನಿರ್ವಾಹಕರಾದ ಅಭಿನಂದನ್ ಹಾಗೂ ಆರ್ ಆರ್ ಟಿ ಶೀರಸ್ತೆದಾರಾದ ವಿನಯ್ ರವರಿಗೆ ಈ ವಿಷಯವನ್ನು ತಿಳಿಸುತ್ತಾನೆ ಅನುಮಾನಗೊಂಡ ಅಭಿನಂಧನ್ ಹಾಗೂ ವಿನಯ್ ರವರು ಯಾವುದೇ ಹಣದ ಅಮಿಷಕ್ಕೆ ಬಲಿಯಾಗದೇ ಸರಿ ರಘು ಬಳಿ ಇರುವ ಕಡತಗಳನ್ನು ತರಿಸಿಕೋ ಮುಂದಿನ ಕ್ರಮದ ಬಗ್ಗೆ ತಹಶೀಲ್ದಾರ್ ಬಳಿ ಚರ್ಚಿಸೋಣ ಎಂದು ಹೇಳಿದ ಎರಡು ದಿನದ ನಂತರ ರಘು ಬಳಿ ಇರುವ ಕಡತಗಳನ್ನು ಪರೀಶಿಲಿಸಿದಾಗ ಮೂರು ಗ್ರಾಮದ ದರ್ಖಾಸ್ ಸಾಗುವಳಿ ಮಂಜೂರು ಕಡತಗಳಾಗಿದ್ದು

ಫಾರಂ ನಂ: 121 ಮೆಮೊರಾಂಡಂ ಆದರಲಿ, ಗೋವಿಂದಾಪುರ ಗ್ರಾಮ ಸರ್ವೆ ನಂ:48 ಮತ್ತು 04 ಮಾಲತೇಶ ಬಿನ್ ನೀಲಪ್ಪ ಭರ್ಮಪ್ಪ ಬಿನ್ ನೀಲಪ್ಪ, ಟಿಯಲಪ್ಪ ಬಿನ್ ದುರ್ಗಪ್ಪ, ಕೆಂಪಮ್ಮ ಕೋಂ ಶಿವಣ್ಣ ಅಂತ ನಮೂದು ಇರುತ್ತವೆ. 2) ಸರ್ವೆ ನಕಾಶೆ, 3)ಆಹವಾಲ್ ತು 4) ಮಾಲತೇಶ ಬಿನ್ ನೀಲಪ್ಪ, ಭರ್ಮಪ್ಪ ಬಿನ್ ನೀಲಪ್ಪ, ಟಿ, ಯಲ್ಲಪ್ಪ ಬಿನ್ ದುರ್ಗಪ್ಪ, ಕೆಂಪಮ್ಮ ಕೋಂ ಶಿವಣ್ಣ ಹೆಸರಿನ ಫಾರಂ 01 ಸಾಗುವಳಿ ಚೀಟಿಗಳು ಆಗಿದ್ದು ಇವುಗಳ ಮೇಲೆ ಶಿವಮೊಗ್ಗ, ತಹಶೀಲ್ದಾರ್ ಹಾಗೂ ಕಸಬಾ ಹೋಬಳಿ-01 ರ ರೆವಿನ್ಯೂ ಇನ್ಸ್ ಪೆಕ್ಟರ್ ರವರ ಸಹಿ ಸೀಲು ಇರುತ್ತವೆ. 1) ಫಾರಂ ನಂ: 121 ಮೆಮೊರಾಂಡಂ ಅದರಲಿ. ಗೋವಿಂದಾಪುರ ಗ್ರಾಮ ಸರ್ವೆ ನಂ:08 ಸೆಲ್ವಕುಮಾರ ಬಿನ್ ಶಿವಲಿಂಗಪ್ಪ, ವಿಜಯ ಬಿನ್ ಡಾಕಪ್ಪ, ಮಾಲತೇಶ ಬಿನ್ ನೀಲಪ್ಪ, ನಾಗರತ್ನ, ಕೋಂ ಭೈರಪ್ಪ, ಬಸವರಾಜಪ್ಪ ಬಿನ್ ರಾಮಪ್ಪ, ನೇಮಕ್ಷಮ್ಮ ಕೋಂ ಡಿ.ಯಲಪ್ಪ ಅಂತ ನಮೂದು ಇರುತ್ತವೆ. 2)ಸಾಗುವಳಿದಾರರ ಹೆಸರು ಸಹಿ ಇರುವ ದಾಖಲೆ 3) ಸರ್ವೆ ನಕಾಶೆ, 4) ಅಹವಾಲ್ ತು 5) ಸೆಲಕುಮಾರ ಬಿನ್ ಶಿವಲಿಂಗಪ್ಪ, ವಿಜಯ ಬಿನ್ ಡಾಕಪ್ಪ ಮಾಲತೇಶ ಬಿನ್ ನೀಲಪ್ಪ,ನಾಗರತ್ನ, ಕೋಂ ಬೈರಪ್ಪ, ಬಸವರಾಜಪ್ಪ ಬಿನ್ ರಾಮಪ್ಪ, ನೇಮಾಕ್ಷಮ್ಮ ಕೋಂ ಡಿಯಲಪ್ಪ ಹೆಸರಿನ ಫಾರಂ 01 ಸಾಗುವಳಿ ಚೀಟಿಗಳು ಇವುಗಳ ಮೇಲೆ ನಕಲಿ ಶಿವಮೊಗ್ಗ,ತಹಶೀಲ್ದಾರ್ ಹಾಗೂ ಕಸಬಾ ಹೋಬಳಿ-01 ರ ರೆವಿನ್ಯೂ ಇನ್ಸ್ ಪೆಕ್ಟರ್ ರವರ ಸಹಿ ಸೀಲು ಇರುತ್ತವೆ, 1) ಫಾರಂ ನಂ: 121 ಮೆಮೊರಾಂಡಂ ಅದರಲಿ., ಗೋಪಿಶೆಟ್ಟಿಕೊಪ್ಪ ಗ್ರಾಮ ಸರ್ವೆ ನಂ: 36 ಡಿಯಲ್..ಪ್ಪ ಬಿನ್ ದುರ್ಗಪ್ಪ, ನರಸಮ್ಮ ಕೋಂ ಮಂಜಪ್ಪ, ಗುಡ್ಡಪ್ಪ, ಬಿನ್ ಪಕ್ಕೀರಪ್ಪ, ರಂಗಪ್ಪ ಬಿನ್ ತಿಮ್ಮೆಗೌಡ, ಅಂತ ನಮೂದು ಇರುತ್ತವೆ, 2) ಸರ್ವೆ ನಕಾಶೆ, 3) ಸಾಗುವಳಿದಾರರ ಹೆಸರು ಸಹಿ ಇರುವ ದಾಖಲೆ 4) ಅಹವಾರ್ ತಃಖ್ಛೆ 5) ಡಿ. ಯಲ್ಲಪ್ಪ ಬಿನ್ ದುರ್ಗಪ್ಪ ನರಸಮ್ಮ ಕೋಂ ಮಂಜಪ್ಪ ಗುಡ್ಡಪ್ಪ ಬಿನ್ ಫಕೀರಪ್ಪ ರಂಗಪ್ಪ ಬಿನ್ ತಿಮ್ಮೇಗೌಡ ಹೆಸರಿನ ಫಾರಂ 01 ಸಾಗುವಳಿ ಚೀಟಿಗಳ ಇವುಗಳ ಮೇಲೆ ಶಿವಮೊಗ್ಗ ತಹಶೀಲ್ದಾರ್ ಹಾಗೂ ಕಸಬಾ ಹೋಬಳಿ _ 01 ರೆವಿನ್ಯೂ ಇನ್ಸ್ ಪೆಕ್ಟರ್ ರವರ ಸೀಲು ಸಹಿ ಇದ್ದು ಬುದ್ದಿವಂತ ಭೂ ಕಳ್ಳನಾಗಿರುವ ರಘು ನೀಡಿದ ಕಡತಗಳನ್ನು ಅಭೀಲೇಖಾಲಯ ಶಾಖೆಯ ವಿಷಯ ನಿರ್ವಾಹಕರಾದ ಅಭಿನಂದನ್ ಹಾಗೂ ಆರ್ ಆರ್ ಟಿ ಶಿರಸ್ತೆದಾರಾರಾದ ವಿನಯ್ ರವರಿಗೆ ಕಡತಗಳನ್ನು ನೀಡಿದ್ದು ಅವರು ಅ ದಾಖಲೆಗಳನ್ನು ಪರೀಶೀಲನೆ ನಡೆಸಲು ಮುಂದಾದಾಗ ಅ ದಾಖಲೆಗಳು ಸಂಪೂರ್ಣ ನಕಲಿ ಎಂದು ಗೊತ್ತಾಗಿದ್ದು, ಕೂಡಲೇ ಎಚ್ಚೆತ್ತುಕೊಂಡ ಅಭಿನಂದನ್ ಹಾಗೂ ವಿನಯ್ ರವರು ಡಾಟಾ ಎಂಟ್ರಿಗೆ ಈ ದಾಖಲೆಗಳು ಸಂಪೂರ್ಣವಾಗಿ ನಕಲಿಯಾಗಿದ್ದು ಇವುಗಳನ್ನು ಭೂ ಸುರಕ್ಷಾ ತಂತ್ರಂಶದಲ್ಲಿ ಸ್ಕ್ಯಾನ್ ಮಾಡಬೇಡ ಎಂದಿದ್ದಾರೆ
ಅದರೇ ರಘು ,ಹಾಗೂ ಶಾಹಿದ್ ಎಂಬುವವರು ಇಲ್ಲಿಗೆ ಇದನ್ನು ಕೈ ಬಿಟ್ಟು ಹೊರಗೆ ನಡೆಯದೇ

ಡಾಟಾ ಎಂಟ್ರಿಯಾದ ಪುನೀತ್ ರವರಿಗೆ ನಿನಗೆ ಅದೆಷ್ಟು ಹಣ ಬೇಕಾದರೂ ನೀಡುತ್ತೇನೆ ಎಂದು ಹಣದ ಅಮಿಷ ಒಡ್ಡಿ ಸ್ಯ್ಕಾನ್ ಮಾಡಲು ದಿನೇ ದಿನೇ ಕರೆ ಮಾಡಿ ತಿಳಿಸಿದಾಗ ರಘು ಹಾಗೂ ಶಾಹಿದ್ ರವರು ಮೋಸ ಮಾಡುವ ಉದ್ದೇಶದಿಂದ ನಕಲಿ ದಾಖಲೆಗಳನ್ನು ತಾವೇ ಸೃಷ್ಟಿಸಿ ಮಾಡಿ ಮೇಲ್ಕಂಡ ಜಮೀನುಗಳನ್ನು ಮೇಲ್ಕಂಡವರ ಹೆಸರಿಗೆ ಮಂಜೂರು ಮಾಡುವ ಸಲುವಾಗಿ ಭೂ ಸುರಕ್ಷಾ ತಂತ್ರಾಂಶದಲ್ಲಿ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಲು ಕೇಳಿಕೊಂಡಿದ್ದು ಈ ವಿಚಾರವನ್ನು ಅಭಿನಂದನ್ ಹಾಗೂ ವಿನಯ್ ರವರು ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ತಂದು ಚರ್ಚಿಸಿದಾಗ ಮೇಲಾಧಿಕಾರಿಗಳು ರಘು ಹಾಗೂ ಶಾಹಿದ್ ಎಂಬುವವರ ಮೇಲೆ ಕೂಡಲೇ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಲು ತಿಳಿಸಿದ್ದು ತಕ್ಷಣ ಇಬ್ಬರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಅಧಿಕಾರಿಗಳು ಸೂಚಿಸಿದ್ದಾರೆ
ಕಂದಾಯ ಇಲಾಖೆಗೆ ಸೇರಿರುವ ಅಸ್ತಿಗಳನ್ನು ಸುರಕ್ಷಿತವಾಗಿ ರಕ್ಷಿಸಿದ ಶಿವಮೊಗ್ಗ ತಹಶೀಲ್ದಾರ್ ವಿ.ಎಸ್.ರಾಜೀವ್ ರವರ ಹಾಗೂ ತಮ್ಮ ತಂಡದ ನಿಷ್ಟಾವಂತ ಕಾರ್ಯವೈಕರಿಗೆ ಜನ ಪ್ರಶಂಸೆ ವ್ಯಕ್ತಪಡಿಸಿದ್ದಾರೆ
ಸಾರ್ವಜನಿಕರು ಯಾವುದೇ ದಾಖಲೆಗಾಗಿ ಮಧ್ಯವರ್ತಿಗಳ , ಮೋಸ ಮಾಡುವ ಭ್ರೋಕರ್ ಗಳ ಬಳಿ ಹೋಗದೆ ನೇರವಾಗಿ ನಮ್ಮ ಕಚೇರಿಗೆ ಬನ್ನಿ. ಅನುಮಾನ ಬಂದರೆ ತಕ್ಷಣ ದೂರು ನೀಡಿ.
ಸರ್ಕಾರಿ ಜಮೀನು ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ನಕಲಿ ದಾಖಲೆ ಸೃಷ್ಟಿಸುವುದು ಗಂಭೀರ ಅಪರಾಧ. ಇಂತಹ ಪ್ರಕರಣಗಳಲ್ಲಿ ಭಾಗಿಯಾದವರ ವಿರುದ್ಧ ಯಾವುದೇ ಮೂಲಾಜಿಲ್ಲದೇ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು.
– ರಾಜೀವ್, ತಾಲ್ಲೂಕು ದಂಡಾಧಿಕಾರಿಗಳು, ಶಿವಮೊಗ್ಗ