ಶಿವಮೊಗ್ಗ,ಜೂ.26:
ಫೇಸ್‌ಬುಕ್ ಮೂಲಕ ಪ್ರೀತಿಸಿ ಮದುವೆಯಾಗಿದ್ದವಳು ಗಂಡನ ಮನೆಯಲ್ಲಿ ನೇಣಿಗೆ ಶರಣಾದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನಲ್ಲಿ ನಡೆದಿದೆ.

ಹೊಸನಗರ ತಾಲೂಕಿನ ಕಾಡಗೆರೆಯಲ್ಲಿ ಈ ಘಟನೆ ನಡೆದಿದ್ದು, ಸೌಂದರ್‍ಯ ಆತ್ಮಹತ್ಯೆ ಮಾಡಿಕೊಂಡವಳಾಗಿದ್ದಾಳೆ.
ಸಕಲೇಶಪುರದ ಈಕೆ ಕಳೆದ ಏಳು ತಿಂಗಳ ಹಿಂದೆಯಷ್ಟೇ ಕಾಡಗೆರೆಯ ಉಮೇಶ ಎನ್ನುವನನ್ನು ವಿವಾಹವಾಗಿದ್ದಳು.
ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದ ಸೌಂದರ್‍ಯಳನ್ನು ವಿವಾಹವಾಗುವಂತೆ ಉಮೇಶ್ ದುಂಬಾಲುಬಿದ್ದಿದ್ದ. ಇದು ಸಾಧ್ಯವಾಗದಿದ್ದಾಗ ಉಮೇಶ್ ಕಾರಿನಲ್ಲಿ ಸ್ನೇಹಿತರೊಂದಿಗೆ ತೆರಳಿ ಹೋಗಿ ಕಾರ್‍ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಬೇಲೂರಿನಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದ ಇವಳನ್ನು ಅಪರಿಸಿ ಮದುವೆಯಾಗಿದ್ದನು.
ಆದರೆ ಇಬ್ಬರ ಜಾತಿ ಬೇರೆಯಾಗಿದ್ದರಿಂದ ವಿವಾಹದ ನಂತರ ಭಿನ್ನಾಭಿಪ್ರಾಯ ಮೂಡಿತ್ತೆನ್ನಲಾಗಿದೆ.
ಇದೇ ಕಾರಣಕ್ಕೆ ಸೌಂದರ್‍ಯಳನ್ನು ಸಾಯಿಸಿ ನೇಣಿಗೇರಿಸಲಾಗಿದೆ ಎಂದು ಮೃತಳ ತಂದೆ ಉದಯ್ ಪೊಲೀಸರಿಗೆ ದೂರು ನೀಡಿದ್ದಾರೆ. ಕೆಲವು ದಿನಗಳ ಹಿಂದೆ ಸೌಂದರ್‍ಯ ತನಗೆ ಗಂಡನ ಮನೆಯಲ್ಲಿ ಕಿರುಕುಳ ಕೊಡುತ್ತಿದ್ದ ಬಗ್ಗೆ ಸಹೋದದರು ಹಾಗೂ ಮಾವನಲ್ಲಿ ಹೇಳಿಕೊಂಡಿದ್ದಾಳೆ ಎಂಬ ಅಂಶ ಸಹ ಈಗ ಬೆಳಕಿಗೆ ಬಂದಿದೆ.
ಹೊಸನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಉಮೇಶ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪೇಸ್ಬುಕ್ ಪ್ರೇಮವೀಗ ಪ್ರೇಮಿಯ ಆತ್ಮಹತ್ಯೆ ಮೂಲಕ ಅಂತ್ಯವಾಗಿದೆ
.

By admin

ನಿಮ್ಮದೊಂದು ಉತ್ತರ

You missed

error: Content is protected !!