ಶಿವಮೊಗ್ಗ : ಹೊಸನಗರ ಸುತ್ತ ಮುತ್ತ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೇ ಸಾಗುತ್ತಿದ್ದು, ಕಣ್ಣುಮುಚ್ಚಿ ಕುಳೀತು ಕೊಂಡಿದ್ದಾರೆ ಎಂದು ಮಾಜಿ ಶಾಸಕ, ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಆರೋಪಿಸಿದ್ದಾರ
ಅವರಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹೊಸನಗರ ಮತ್ತು ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಅಕ್ರಮ ಮರ ಳುಗಾರಿಕೆ ನಿರಂತರವಾಗಿ ನಡೆಯುತ್ತಿದ್ದು, ಇದಕ್ಕೆ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಮತ್ತು ತಹಶೀಲ್ದಾರ್ ಅವರು ನೇರ ಹೊಣೆಗಾರರಾಗಿದ್ದಾರೆ. ಇವರೆಲ್ಲ ಶಾಸಕ ಹಾಲಪ್ಪ ಅವರ ಏಜೆಂಟ್ ಗಳಂತೆ ಕೆಲಸ ಮಾಡುತ್ತಿದ್ದಾರೆ.ಅದರಲ್ಲೂ ಸಂಸದ ಬಿ.ವೈ. ರಾಘವೇಂದ್ರ ಅವರು ಹೇಳಿದಂತೆ ಕೇಳಿದಂತೆ ಕೇಳುತ್ತಾ ಅಕ್ರಮ ದಂಧೆಗೆ ಕಡಿವಾಣ ಹಾಕದೇ ಮೌನಕ್ಕೆ ಶರಣಾಗಿದ್ದಾರೆ ಎಂದು ಆರೋಪಿಸಿದರು.
ಮೇ ೫ ಕ್ಕೆ ಮರಳುಗಾರಿಕೆ ಬಂದ್ ಆಗಬೇಕಿತ್ತು. ಆದರೆ, ಅದು ನಿರಂತರವಾಗಿ ಇಂದು ಕೂಡ ಮುಂದುವರೆದಿದೆ. ಸುಮಾರು ಸಾವಿರಕ್ಕೂ ಹೆಚ್ಚು ಲೋಡ್ ಮರಳನ್ನು ಅಕ್ರಮ ದಾಸ್ತಾನು ಮಾಡಲಾಗಿದೆ. ಇದಕ್ಕಾಗಿ ಎಂಪಿಎಂ ಪ್ಲಾಂಟೇಷನ್ ಹಾಗೂ ಕಾಡಿನ ಮರಗಳನ್ನು ಕಡಿದು ಬೆಟ್ಟದಂತೆ ಮರಳು ಸುರಿ ಯಲಾಗಿದೆ ಎಂದು ಆರೋಪಿಸಿದ ಅವರು ನಿಜ ವಾಗಿ ಈ ಮರಳು ಸರ್ಕಾರ ನಿಗದಿ ಮಾಡಿದ ಜಾಗದಲ್ಲಿ ಹಾಕಬೇಕಿತ್ತು. ಇದನ್ನು ನೋಡಿದ ಅಧಿಕಾರಿಗಳು ಕೂಡ ಯಾವ ಕ್ರಮ ಕೈಗೊಳ್ಳದೇ ಸುಮ್ಮನೆ ಹೋಗಿದ್ದಾರೆ. ಸಾವಿರ ಲೋಡ್ ಮರಳು ಎಂದರೆ ಕೋಟಿ ಕೋಟಿ ರೂ, ಹಣವಾಯ್ತು ಎಂದು ಹೇಳಿದರು.
ಇಲ್ಲಿನ ತಹಶೀಲ್ದಾರ್ ಸೇರಿದಂತೆ ಅಧಿಕಾರಿಗಳು ಶಾಸಕರು ಹೇಳಿದಂತೆ ಕೇಳುತ್ತಿದ್ದಾರೆ. ಶಾಸಕರೊಬ್ಬರು ಇಂತಹವರಿಗೆ ಗುತ್ತಿಗೆ ಕೊಡಬೇಕು ಎಂದು ಪತ್ರ ಬರೆಯುವ ಹಂತಕ್ಕೆ ಹೋಗಿದ್ದಾರೆ ಎಂದರೆ ಈ ಮರಳು ದಂಧೆಯ ಕರಾಳಮುಖಗಳನ್ನು ಕಾಣಬಹುದಾಗಿದೆ. ಕಳ್ಳನೊಬ್ಬ ಮತ್ತೊಬ್ಬ ಕಳ್ಳನಿಗೆ ಬೆಂಬಲ ನೀಡಿದಂತೆ ಶಾಸಕ ಹಾಲಪ್ಪ ಗುತ್ತಿಗೆದಾರರಿದ್ದಾರೆ ಎಂದು ನೇರ ಆರೋಪ ಮಾಡಿದರು.
ಇಲ್ಲಿನ ಯಾವ ಮರಳು ಕ್ವಾರೆಗಳು ನಿಯಮವನ್ನು ಪಾಲಿಸುತ್ತಿಲ್ಲ. ಇದಕ್ಕೆ ಉದಾಹರಣೆ ಎಂದರೆ ಕ್ರಿಮಿನಲ್ ಕೇಸ್ ಇರುವ ಮೂರನೇ ದರ್ಜೆ ಗುತ್ತಿಗೆದಾರ ಶರತ್ ಶೆಟ್ಟಿ ಎಂಬಾತನಿಗೆ ಸುತ್ತ ಗ್ರಾಮದ ಬಳಿ ಮರಳುಗಾರಿಕೆಗೆ ಅವಕಾಶ ನೀಡಲಾಗಿದೆ. ಇದು ಸಂಪೂರ್ಣ ನಿಯಮಕ್ಕೆ ವಿರುದ್ಧವಾಗಿದೆ ಎಂದು ಆರೋಪಿಸಿದರು.
ತೂಕ ಯಂತ್ರಗಳಿಲ್ಲ, ಸಿಸಿ ಕ್ಯಾಮೆರಾಗಳಿಲ್ಲ, ಮರಳು ಯಾರ್ಡ್ ಇದ್ದರೂ ಅಲ್ಲಿ ಮರಳು ಸಂಗ್ರಹಿಸುತ್ತಿಲ್ಲ ಎಂದ ಅವರು ಇಡೀ ಮರಳು ದಂಧೆ ಪ್ರಕರಣವನ್ನು ಸಂಫೂರ್ಣವಾಗಿ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿ.ಡಿ. ಮಂಜುನಾಥ್, ರಾಜಶೇಖರ್, ಲ್ಯಾವಿಗೆರೆ ಸೋಮಶೇಖರ್ ಇದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!