ಶಿವಮೊಗ್ಗ, ಜು.13: ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲಾಕ್‌ಡೌನ್ ಚರ್ಚೆ ನಡೆಯುತ್ತಿದೆ. ಇದರ ನಡುವೆ ಶಿವಮೊಗ್ಗ ಕೊರೊನಾ ಸೋಂಕಿತರ ಸಂಖ್ಯೆ ಅದರಲ್ಲೂ ನಗರದ ಸಂಖ್ಯೆ ನಿನ್ನೆ ಒಂದೆ ದಿನ 42 ಆಗಿದ್ದು, ಉಳಿದಂತೆ ಸೊರಬ 8, ಭದ್ರಾವತಿ 4, ಶಿಕಾರಿಪುರ 7, ತೀರ್ಥಹಳ್ಳಿ 1, ಇತರೆ ಜಿಲ್ಲೆಯ ಒಬ್ಬರಿಗೆ ಸೋಂಕು ಕಾಣಿಸಿಕೊಂಡಿದೆ.
ಇಂದು ಸಹ ಸಾಕಷ್ಟು ಪ್ರಕರಣ ಮದ್ಯಾಹ್ನ ೨ರವರೆಗೆ ಲಭಿಸಿದ ಮಾಹಿತಿಯಾನುಸಾರ ಶಿವಮೊಗ್ಗ ನಗರದ ಬಹಳಷ್ಟು ಹೊಸ ಹೊಸ ಬಡಾವಣೆಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಬಗ್ಗೆ ಮೂಲಗಳು ತಿಳಿಸಿವೆ.
ಸಹ್ಯಾದ್ರಿ ನಗರ, ಜೆ.ಹೆಚ್.ಪಟೇಲ್ ಬಡಾವಣೆ, ಚೌಡೇಶ್ವರಿ ದೇವಸ್ಥಾನದ ಎದುರು, ಸವಾರ್ ಲೈನ್ ರಸ್ತೆ, ಗುತ್ಯಪ್ಪ ಕಾಲೋನಿ, ತಾವರೆಚಟ್ನಳ್ಳಿ, ಗೋಪಾಳ ಸೇರಿದಂತೆ ಹಲವೆಡೆ ಮತ್ತೆ ಪ್ರಕರಣಗಳು, ಹೊಸ ಸೋಂಕಿತರು ಪತ್ತೆಯಾದ ಹಿನ್ನೆಲೆಯಲ್ಲಿ ಆ ಭಾಗಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಸೀಲ್‌ಡೌನ್‌ಗಳ ಸಂಖ್ಯೆ ೫೦ರ ಸಮೀಪ ತಲುಪಿರುವುದು ಮತ್ತೊಂದು ಆತಂಕದ ಸಂಗತಿ.
ಕೊರೊನಾ ಸೋಂಕಿತರ ಸಾವಿನ ನಂತರ ಅಂತ್ಯ ಸಂಸ್ಕಾರ ನಡೆಸುತ್ತಿದ್ದ ರೋಟರಿ ಚಿತಗಾರದ ಬಳಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಶಿವಕುಮಾರ್ ಅವರು ಚಿತಗಾರದ ಸುತ್ತ ೨೦೦ ಮೀಟರ್ ವಿಸ್ತೀರ್ಣದಲ್ಲಿ ದಂಡ ಸಂಹಿತೆ ಕಲಂ 144ರ ಅನ್ವಯ ನಿಷೇದಾಜ್ಞೆಯನ್ನು ಜಾರಿಗೊಳಿಸಿದ್ದಾರೆ.
ಕಳೆದ ಜು.07ರ ಶನಿವಾರದಿಂದ 20ರ ಸೋಮವಾರದ ವರೆಗೆ ಈ ನಿಷೇದಾಜ್ಞೇಯೂ ಇರಲಿದ್ದು, ಜಿಲ್ಲಾ ರಕ್ಷಣಾಧಿಕಾರಿಗಳ ಉಲ್ಲೇಖನ್ವಯ ಸೋಂಕಿತರ ಶವ ಸಂಸ್ಕಾರ ನಡೆಸುವಾಗ ಕಾನೂನು ಸುವ್ಯವಸ್ಥೆಗೆ ಅಡ್ಡಿಯಾಗುವುದನ್ನು ತಪ್ಪಿಸಲು ಈ ಕ್ರಮವನ್ನು ಕೈಗೊಳ್ಳಲಾಗಿದೆ.