ಶಿವಮೊಗ್ಗ : ಆನ್ಲೈನ್ ಔಷಧ ಮಾರಾಟವನ್ನು ವಿರೋಧಿಸಿ ಔಷಧಿ ವ್ಯಾಪಾರಿಗಳ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ, ಇಂದಿನಿಂದ ದೇಶಾದ್ಯಂತ ಔಷಧಿ ಮಾರಾಟ ಸಂಘ 24 ಗಂಟೆಗಳ ಕಾಲ ಔಷಧಿ ಅಂಗಡಿಗಳನ್ನು ಮುಚ್ಚಿ ಮುಷ್ಕರ ಕರೆ ನೀಡಿದ್ದರ ಹಿನ್ನಲೆಯಲ್ಲಿ ಇಂದು ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.
ಸಂಘದ ಜಿಲ್ಲಾಧ್ಯಕ್ಷ ಮಧುಕರ್ ಶೆಟ್ಟಿ ಮಾತನಾಡಿ, ಈ ಮುಷ್ಕರವು ದೇಶ ವ್ಯಾಪಿಯಾಗಿದೆ. ಆಲ್ ಇಂಡಿಯಾ ಆರ್ಗ ನೈಜೇಷನ್ ಆಫ್ ಕೆಮಿಸ್ಟ್ ಅಂಡ್ ಡ್ರಗ್ಗಿಸ್ಟ್ ಸಂಸ್ಥೆ ಮತ್ತು ರಾಜ್ಯಘಟಕದ ಸಹಭಾಗಿತ್ವದಲ್ಲಿ ಈ ಮುಷ್ಕರಕ್ಕೆ ಕರೆ ನೀಡಲಾಗಿದೆ. ಆನ್ಲೈನ್ ಔಷಧ ಮಾರಾಟವನ್ನು ನಮ್ಮ ಸಂಘವು ತೀವ್ರವಾಗಿ ವಿರೋಧಿಸು ತ್ತದೆ. ಔಷಧಿಗಳು ಸಾಮಾನ್ಯ ವಾಣಿಜ್ಯ ವಸ್ತು ಗಳಲ್ಲ. ಅವುಗಳಿಗೆ ಕಟ್ಟುನಿಟ್ಟಿನ ನಿಯಂತ್ರಣ ಮತ್ತು ಜವಾಬ್ದಾರಿಯುತ ವಿತರಣೆ ಅಗತ್ಯ ವಿದೆ. ಆದರೆ ಆನ್ಲೈನ್ನಲ್ಲಿ ಇದು ಸಾಧ್ಯ ವಾಗುವುದಿಲ್ಲ. ಔಷಧಿಗಳ ದುರುಪಯೋಗವಾಗುತ್ತಿದೆ ಎಂದು ಆರೋಪಿಸಿದರು.

ಎ.ಐ. ಬಳಸಿ ನಕಲಿ ಪ್ರಿಸ್ಕ್ರಿಪ್ಷೆನ್ ಗಳನ್ನು ಬಳಸಬಹುದಾಗಿದೆ. ಅಲ್ಲದೆ ಅಸುರಕ್ಷಿತ ಔಷಧಿಗಳ ಬಳಕೆಯಾಗುವ ಸಾಧ್ಯತೆಯೂ ಇದೆ. ಆದ್ದರಿಂದ ಆನ್ಲೈನ್ ಔಷಧ ಮಾರಾಟ ರದ್ದಾಗಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ. ಈಗಾಗಲೇ ಕೇಂದ್ರ ಸರ್ಕಾರಕ್ಕೂ ನಾವು ಅನೇಕ ಬಾರಿ ಮನವಿ ಸಲ್ಲಿಸಿದ್ದೇವೆ. ಆದರೆ ನಮಗೆ ಪರಿಹಾರ ದೊರೆತ್ತಿಲ್ಲ. ಆದ್ದರಿಂದ ಜಿಎಸ್ಆರ್ 817 ದಿ:20-08-2018ನ್ನು ಹಿಂತೆಗೆದುಕೊಳ್ಳಬೇಕು. ಮತ್ತು ಜಿಎಸ್ಆರ್-220 ದಿನಾಂಕ 26-03-2020ನ್ನು ರದ್ದ ಪಡಿಸಬೇಕು ಎಂದು ಆಗ್ರಹಿಸಿದರು.
ಎಸ್.ಚಂದ್ರಶೇಖರ್ ಮಾತನಾಡಿ, ಜನೌಷಧಿ ಕೇಂದ್ರಗಳಲ್ಲೂ ಕೂಡ ಬೇರೆ ಔಷಧಿಗಳು ಮಾರಾಟವಾಗುತ್ತಿವೆ. ಇದು ತಪ್ಪಬೇಕು. ಆನ್ಲೈನ್ ಔಷಧ ಮಾರಾಟ ಸಂಪೂರ್ಣ ಬಂದ್ ಆಗಬೇಕು. ಆನ್ಲೈನ್ ಮೂಲಕ ಮಾದಕ ಔಷಧಿಗಳು ಕೂಡ ಸರಬರಾಜಾಗುವ ಸಾಧ್ಯತೇಯೇ ಹೆಚ್ಚಿದೆ. ಆದ್ದರಿಂದ ನಾವು ಜಿಲ್ಲೆಯಲ್ಲಿ ಮೇ20ರಂದು ಔಷಧಿ ಅಂಗಡಿಗಳನ್ನು ಬಂದ್ಮಾಡಿ, ಸರ್ಕಾರದ ಗಮನ ಸೆಳೆಯುತ್ತಿದ್ದೇವೆ. ಇದ ರಿಂದ ಸಾರ್ವಜನಿಕರಿಗೆ ಉಂಟಾಗುವ ತೊಂದರೆಗೆ ಸಂಘ ವಿಷಾದ ವ್ಯಕ್ತಪಡಿಸುತ್ತದೆ. ಆದರೆ ಆಸ್ಪತ್ರೆಯಲ್ಲಿರುವ ಒಳರೋಗಿಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದ ಅವರು, ಅಪೆಲೋ ಔಷಧಿ ವ್ಯಾಪಾರಿಗಳು ಹಾಗೂ ಮೆಡ್ಪ್ಲಸ್ ಔಷಧಿ ಕಂಪನಿಗಳು ನಮ್ಮ ಮುಷ್ಕರಕ್ಕೆ ಬೆಂಬಲ ನೀಡಿದ್ದಾರೆ ಎಂದರು.
ಪ್ರತಿಭಟನಾ ಸಂದರ್ಭದಲ್ಲಿ ಔಷಧಿ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ವೆಂಕಟೇಶ್ ಇ.ಜಿ., ಮಂಜುನಾಥ್ ಎಂ.ಎಲ್. ವಿವೇಕಾನಂದ್ ನಾಯಕ್, ಎಂ.ಶಂಕರ್, ಮಹಮ್ಮದ್ ಕೈಮ್, ರಮೇಶ್, ಪ್ರಕಾಶ್, ಉಮೇಶ್, ಸತೀಶ್, ಅನಿಲ್, ಭವಾನಿ ಮುಂತಾದವರು ಉಪಸ್ಥಿತರಿದ್ದರು.