ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ನಿ, ಶಿವಮೊಗ್ಗ ಇದರ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪುರಸ್ಕರಿಸುವ ಸಲುವಾಗಿ 2026 ನೇ ಸಾಲಿನಲ್ಲಿ ನಡೆದ ಎಸ್.ಎಸ್.ಎಲ್.ಸಿ, 10 ನೇ ತರಗತಿ(ಸಿ.ಬಿ.ಎಸ್.ಇ ಮತ್ತು ಐ.ಸಿ.ಎಸ್.ಇ), ದ್ವಿತೀಯ ಪಿ.ಯು.ಸಿ ಹಾಗೂ 12 ನೇ ತರಗತಿ(ಸಿ.ಬಿ.ಎಸ್.ಇ ಮತ್ತು ಐ.ಸಿ.ಎಸ್.ಇ) ಪರೀಕ್ಷೆಯಲ್ಲಿ ಶೇಕಡ 90 ಕ್ಕೂ ಅಧಿಕ ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಪುರಸ್ಕರಿಸಲು

ಸಂಘದ ಸದಸ್ಯರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹರು, ದಿನಾಂಕ:15-06-2026 ರೊಳಗೆ ಈ ಮುಂದಿನ ಲಿಂಕನ್ನು

ಬಳಸಿ http://bit.ly/govtemphousing ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ ಶ್ರೀ ಬಿ.ಹೆಚ್. ನಿರಂಜನ್ ಮೂರ್ತಿ, (ಮೊ.ಸಂ. 9449050986 ) ಹಾಗೂ ಶ್ರೀ ಲಿಂಗೇಶ್ ಬಿ., (ಮೊ.ಸಂ. 9986268628) ) ಇವರನ್ನು ಸಂಪರ್ಕಿಸಲು ಸಂಘದ ಅಧ್ಯಕ್ಷರಾದ ಶ್ರೀಯುತ ಸಿ.ಎಸ್. ಷಡಾಕ್ಷರಿರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.