ಶಿವಮೊಗ್ಗ : ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪನವರ ನಿರ್ಲಕ್ಷ್ಯ ಹಾಗೂ ಅಧಿಕಾರಿಗಳ ಬೆಜವಾಬ್ದಾರಿ ತನದಿಂದ ಮೆಗ್ಗಾನ್ ಆಸ್ಪತ್ರೆಯ ಹೈಟೆಕ್ ಶವಗಾರ, ಸಣ್ಣ ಪುಟ್ಟ ಕಾಮಗಾರಿಗಳಿದ್ದರೂ ಸಹ ಕಳೆದ ಎರಡು ವರ್ಷದಿಂದ ಲೋಕಾರ್ಪಣೆಗೊಳ್ಳದೆ ನೆನೆಗುದ್ದಿಗೆ ಬಿದಿದ್ದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಆರೋಪಿಸಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಅಸಹಜ ಸಾವು ಹಾಗೂ ಅಪಘಾತದಲ್ಲಿ ಮರಣ ಹೊಂದಿದವÀರ ಶವ ಪರೀಕ್ಷೆಗೆ ಸುಮಾರು ಎರಡು ಗಂಟೆ ಬೇಕಾಗುತ್ತದೆ. ಮೃತರ ಸಂಬಂಧಿಗಳು ಹಾಗೂ ಸ್ನೇಹಿತರು ಕುಳಿತುಕೊಳ್ಳಲು ಸರಿಯಾದ ವ್ಯವಸ್ಥೆ ಇಲ್ಲ. ಮರದ ಕೆಳಗೆ ನಿಲ್ಲಬೇಕಾಗುತ್ತದೆ. ಒಂದು ವೇಳೆ ಮಳೆ ಬಂದರೆ ಮರಗಳ ಆಶ್ರಯ ಪಡೆಯಬೇಕಾಗುತ್ತದೆ. ಒಂದು ವೇಳೆ ಮಳೆಯಿಂದ ಮರ ಉರುಳಿ ಆಶ್ರಯ ಪಡೆದರ ಮೇಲೆ ಬಿದ್ದರೆ. ಅವರ ಶವ ಪರೀಕ್ಷೆಯು ಕೂಡ ಅಲ್ಲಿಯೆ ಆಗುವ ಸಾಧ್ಯತೆ ಇದೆ ಎಂದರು.

2017 ರಲ್ಲಿ ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಅಲ್ಲಿನ ಅವ್ಯವಸ್ಥೆ ನೋಡಿ 2 ಕೋಟಿ ವೆಚ್ಚದಲ್ಲಿ ಹೈಟೆಕ್ ಶವಗಾರ ನಿರ್ಮಾಣಕ್ಕೆ ಅನುದಾನ ನೀಡಲಾಗಿತ್ತು. ಇದರಲ್ಲಿ ಹೈಟೆಕ್ ಶವ ಪರೀಕ್ಷೆ ಕೊಠಡಿ, ಪೆÇಲೀಸ್ ಮಹಜರು ಮಾಡುವ ಕೊಠಡಿ, ಬಂದವರಿಗೆ ಎಲ್ಲ ರೀತಿ ಸೌಲಭ್ಯವುಳ್ಳ ಕೊಠಡಿ ಇದ್ದವು. ಈಗ ಸುಮಾರು ಸಣ್ಣಪುಟ್ಟ ಕೆಲಸಗಳಿದ್ದು, ಅದನ್ನು ಕೂಡಲೇ ಮುಗಿಸಿ ಲೋಕಾರ್ಪಣೆಗೊಳಿಸಲು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳು ಪ್ರಯತ್ನಿಸಬೇಕು. ಇನ್ನು 15 ದಿನದದಲ್ಲಿ ಉದ್ಘಾಟನೆಗೊಳ್ಳದಿದ್ದಲ್ಲಿ ಶವಗಾರದ ಮುಂಭಾಗ ಧರಣಿ ಸತ್ಯಗ್ರಹ ಪಕ್ಷದಿಂದ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಅದೇ ರೀತಿ ತಾಯಂದಿರ ಮತ್ತು ಮಕ್ಕಳ ಆಸ್ಪತ್ರೆ ಹತ್ತು ಕೋಟಿ ರೂ. ಹಾಗೂ ಡಿಜಿಟಲ್ ಗ್ರಂಥಾಲಯಕ್ಕೆ 3 ಕೋಟಿ ರೂ, ರೋಗಿಗಳ ಸಂಬಂಧಿಕರ ವಿಶ್ರಾಂತಿ ಕೊಠಡಿಗಳ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದ್ದು ಇವುಗಳ ಕಾಮಗಾರಿಯೂ ಸಹ ಕುಂಠಿತವಾಗಿದೆ. ಕೂಡಲೇ ಇದನ್ನು ಸಹ ಪೂರ್ಣಗೊಳಿಸಿ ಉದ್ಘಾಟನೆಗೊಳಿಸಬೇಕೆಂದು ಆಗ್ರಹಿಸಿದರು.

ಶಿವಮೊಗ್ಗ-ಭದ್ರಾವತಿ ನಗಾರಭೀವೃದ್ದಿ ಪ್ರಾಧಿಕಾರ ಗಂಜಿ ಕೇಂದ್ರವಾಗಿ ಮಾರ್ಪಾಟ್ಟಿದೆ. ಊರುಗಡೂರಿನ ಲೇಔಟ್ನಲ್ಲಿ 3039 ಅರ್ಜಿಗಳಿದ್ದು, 687 ನಿವೇಶನ ಹಂಚಬೇಕಾಗಿದೆ. ಇದರಲ್ಲಿ 174 ನಿವೇಶನ ಭೂ ಮಾಲೀಕರಿಗೆ ನೀಡಬೇಕಾಗಿದ್ದು, 76 ಮೂಲೆ ನಿವೇಶನಗಳಿವೆ. ಒಟ್ಟಾರೆ 432 ನಿವೇಶನ ಹಂಚಬೇಕಾಗಿದೆ. ಈ ಲೇಔಟ್ಗಾಗಿ ಈಗಾಗಲೇ ಎರಡು ಬಾರಿ ಅರ್ಜಿಗಳನ್ನು ಕರೆದಿದ್ದಾರೆ 4 ವರ್ಷದವಾದರೂ ಸÀಹ ಇದುವರೆಗೆ ನಿವೇಶನ ಹಂಚಿಕೆ ಮಾಡಲು ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದ ಅವರು ಒಂದು ವೇಳೆ ಹಂಚಿಕೆ ಮಾಡಲು ವಿಳಂಬ ಮಾಡಲು ನಿರ್ಲಕ್ಷಿ?ಯಸಿದ್ದರೆ ಪಕ್ಷದ ವತಿಯಿಂದ ಹೋರಾಟ ಮಾಡಲು ಸಿದ್ದ ಎಂದರು.
ಸುದ್ದಿಗೋಷ್ಠಿಯಲ್ಲಿ ಶಿವಮೊಗ್ಗ ನಗರ ಘಟಕದ ಅಧ್ಯಕ್ಷ ದೀಪಕ್ ಸಿಂಗ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಸತೀಶ್, ಪ್ರಮುಖರಾದ ತ್ಯಾಗರಾಜ, ನರಸಿಂಹ ಗಂಧಗಮನೆ, ಉಮಾಶಂಕರ ಉಪಾಧ್ಯಾಯ, ಹೆಚ್.ಎಂ.ಸಂಗಯ್ಯ, ರಘು, ಗೋಪಿಮೊದಲಿಯಾರ್, ವೆಂಕಟೇಶ್, ಸುನೀಲ್ಗೌಡ, ಸುರೇಶ್ ನಾಡಿಗ್, ಶಂಕರ್ ಇನ್ನಿತರರು ಇದ್ದರು.