
ಶಿವಮೊಗ್ಗದಿಂದ ಆಯನೂರು ಮಾರ್ಗವಾಗಿ ಕೇವಲ 24 ಕಿಲೋ ಮೀಟರ್ ದೂರದಲ್ಲಿ ಅರಸಾಳು ಬಳಿ ಕಾಣಬರುವ ಮುಖ್ಯ ಹೈವೇ ರಸ್ತೆಯಲ್ಲಿರುವ ಮಾಲ್ಗುಡಿ ರೆಸಾರ್ಟ್ ಸ್ನೇಹಿತರು ಹಾಗೂ ಕುಟುಂಬದ ಸದಸ್ಯರೊಂದಿಗೆ ಸವಿದಿನ ಕಳೆಯುವ ಸುಂದರ ಅವಕಾಶವನ್ನು ಕಲ್ಪಿಸುತ್ತದೆ. ಶಿವಮೊಗ್ಗದಿಂದ 25 km ದೂರದ ಆಯನೂರಿನಿಂದ 13 ಕಿಲೋಮೀಟರ್ ದೂರಕ್ಕೆ ಸಿಗುವ ಹಾಗೂ ಶಂಕರ್ ನಾಗ್ ರವರ ಮಾಲ್ಗುಡಿ ಡೇಸ್ ನ ಸವಿ ನೆನಪುಗಳನ್ನು ಮೂಡಿಸಿದ್ದ ಅರಸಾಳು ರೈಲ್ವೆ ನಿಲ್ದಾಣದಿಂದ ಕೇವಲ ಒಂದು ಕಿಲೋಮೀಟರ್ ದೂರದ ಮುಖ್ಯರಸ್ತೆಯಲ್ಲೇ ಕಾಣಿಸುವ ಮಾಲ್ಗುಡಿ ರೆಸಾರ್ಟ್ ಸುಂದರವಾದ ಪ್ರಕೃತಿ ತಾಣ.

ಅತ್ಯಂತ ಆಕರ್ಷಕವಾದ ಒಟ್ಟು ಆರು ಬೆಡ್ ರೂಮ್ ಗಳ, ವಿಶಾಲವಾದ ಮನೆ ಇದಾಗಿದ್ದು, ಯುಪಿಎಸ್, ವಿದ್ಯುತ್, ನೀರಿನ ವ್ಯವಸ್ಥೆ, ಮಗ್ಗುಲಲ್ಲೇ ಹರಿಯುವ ಕುಮದ್ವತಿ ನದಿ ನೀರಿನ ಶಬ್ದ, ಚೂಪನ ಕಟ್ಟೆ ಗುಡ್ಡ ಸೇರಿದಂತೆ ಹಲವು ಹಲವು ಬೆಟ್ಟಗಳ ನಡುವೆ ಕಾಣಿಸುವ ಈ ಸುಂದರ ತೋಟದ ಒಳಗಿನ ಆವರಣದಲ್ಲಿರುವ “ಮಾಲ್ಗುಡಿ ರೆಸಾರ್ಟ್” ನಿಜಕ್ಕೂ ಚಂದದ ಕಾಲ ಕಳೆಯುವ ಪ್ರಕೃತಿ ಸವಿಯುವ ಸುಂದರ ಸ್ಥಳ ಎಂದರೆ ತಪ್ಪಾಗಲಿಕ್ಕಿಲ್ಲ.
ಇಲ್ಲಿ ಸದಾ ನೀರಿನ ವ್ಯವಸ್ಥೆ ಇದ್ದು, ಹೋಟೆಲ್ ಮಾಡುವಂತಹ ಆಸಕ್ತರು ಈ ಸ್ಥಳವನ್ನು ಬಳಸಿಕೊಳ್ಳಬಹುದಾಗಿದೆ ಎಂದು ಜಾಗದ ಮಾಲೀಕರಾದ ಹೇಮಾವತಿ ಅವರು ತಿಳಿಸಿದ್ದಾರೆ.





ಅತ್ಯಂತ ಹತ್ತಿರವಿರುವ ಕುಮದ್ವತಿ ನದಿ ಮಳೆಗಾಲದಲ್ಲಂತೂ ಸುಂದರವಾದ ಪ್ರಕೃತಿ ತಾಣವನ್ನು ನೀಡುವ ಸ್ಥಳ. ಹಾಗೆಯೇ ಅಲ್ಲಿನ ಬೆಟ್ಟಗಳ ತಪ್ಪಲನ್ನು ಅವಲೋಕಿಸುವುದೇ ಸುಂದರ. ಬೆಳಗಿನ ಹಾಗೂ ಸಂಜೆಯ ಸುಂದರ ಪರಿಸರ ಇದು ಎಂದು ಹೇಳಬಹುದು.

ಇದು ಇನ್ನೊಂದಿಷ್ಟು ಪರಿಚಯವಾಗಬೇಕಿರುವ ಚಾರಣಿಗರ ಪ್ರಕೃತಿ ಧಾಮದ ಸ್ಥಳ ಆಗಬೇಕಿದೆ ಎಂಬುದು ಗಮನಾರ್ಹ ಸಂಗತಿ.
ಇಲ್ಲಿನ ಪ್ರಕೃತಿಯ ಮಡಿಲು, ಬೆಟ್ಟದ ತಪ್ಪಲು ಸಾಹಸಿ ಚಾರಣ ಪ್ರಿಯರಿಗೆ ರಸದೌತಣವೇ ಸರಿ.
ಇಲ್ಲಿ ಬೆಳಗಿನ ಹೊತ್ತು ನವಿಲುಗಳು ನಲಿದಾಡುತ್ತವೆ. ಆದರೆ ಯಾವುದೇ ಅನ್ಯ ಕಾಡು ಪ್ರಾಣಿಗಳು ಕಾಣಿಸುವುದಿಲ್ಲ. ಅವುಗಳಿಂದ ಯಾವ ಭೀತಿಯೂ ಇಲ್ಲಿ ಇಲ್ಲ.

ಈ ಸುಂದರ ಸ್ಥಳದಲ್ಲಿ ನೀವು ನಿಮ್ಮ ಸ್ನೇಹಿತರು ಹಾಗೂ ಕುಟುಂಬದ ಜೊತೆ ಸವಿ ದಿನಗಳನ್ನು ಸೊಗಸಾಗಿ ಕಳೆಯಬಹುದಾಗಿದೆ. ಅದಕ್ಕೆ ಇಂತಹ ಅವಕಾಶವನ್ನು ಕಲ್ಪಿಸಲಾಗಿದ್ದು ಅದೇ ರೀತಿಯಲ್ಲಿ ಇಲ್ಲಿ ಹೋಟೆಲ್ ಉದ್ಯಮ ನಡೆಸುವ ಯಾವುದಾದರೂ ಆಸಕ್ತರಿದ್ದರೆ ಅದಕ್ಕೂ ಪೂರಕ ವಾತಾವರಣವನ್ನು ಹಾಗೂ ವೇದಿಕೆಯನ್ನು ಮಾಡಿಕೊಳ್ಳಲಾಗುತ್ತದೆ ಎಂದು ಭೂಮಿಯ ಮಾಲೀಕರು ತಿಳಿಸಿದ್ದಾರೆ.
ವಿವರಗಳಿಗೆ ಹಾಗೂ ತಮ್ಮ ಪ್ರವಾಸ ಮಾಹಿತಿಗೆ 70225 77701 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು.



