ಬೆಂಗಳೂರು, ಮೇ.10:
ಕರ್ನಾಟಕ ಸರ್ಕಾರದ ಯೋಜನೆ ಹಾಗೂ ಸಾಂಖ್ಯಿಕ ಸಚಿವ, ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಇಂದು ಮುಂಜಾನೆ 3.15ಕ್ಕೆ ನಿಧನರಾಗಿದ್ದಾರೆ ಎಂದು ಕಿಮ್ಸ್ ಆಸ್ಪತ್ರೆ ತಿಳಿಸಿದೆ.




ಶಿವಮೊಗ್ಗ ಆಚಾರ್ಯ ತುಳಸಿ ವಾಣಿಜ್ಯ ಕಾಲೇಜಿನಲ್ಲಿ ಬಿ.ಕಾಂ ಪಡೆದಿದ್ದ ಸುಧಾಕರ್ ಅವರು ಸರಳ ಸಜ್ಜನಿಕೆಯ ಶಾಸಕರು, ಮಂತ್ರಿಯಾಗಿದ್ದರು. ಈ ಮೊದಲು ಪಕ್ಷೇತರ ಅಭ್ಯರ್ಥಿಯಾಗಿ ಶಾಸಕರಾಗಿದ್ದಾಗ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಸಮಾಜ ಕಲ್ಯಾಣ ಸಚಿವರೂ ಆಗಿದ್ದರು.

ಹಿರಿಯೂರು ಶಾಸಕರಾಗಿದ್ದ, ಚಳ್ಳಕೆರೆ ಮೂಲದ ಸುಧಾಕರ್ ಅಂತ್ಯಕ್ರಿಯೆ ಕುರಿತಂತೆ ಮಾಹಿತಿ ನೀಡುವುದಾಗಿ ಕುಟುಂಬ ಮೂಲಗಳು ತಿಳಿಸಿದೆ.
ಚಿಕ್ಕಪ್ಪ ಜಯಣ್ಣ ಅವರ ರಾಜಕೀಯ ಗರಡಿಯಲ್ಲಿ ಬೆಳೆದಿದ್ದ ಸುಧಾಕರ್, ಚಳ್ಳಕರೆಯಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಪಡೆದಿದ್ದರು.