ಶಿವಮೊಗ್ಗ : ಸಮಾಜದ ಸ್ವಾಸ್ತ್ಯ ಕಾಪಾಡುವಲ್ಲಿ ವೈದ್ಯರ ಸೇವೆ ಅನನ್ಯವಾಗಿದ್ದು ಎಂದು ಜಿಲ್ಲಾ ಉಸ್ತುವಾರಿ ಹಾಗು ಶಾಲಾ ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ ಶ್ಲಾಘಿಸಿದರು.

ಅವರು ಇಂದು ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಸಿಮ್ಸ್)ಯಲ್ಲಿ ಎಪಿಐ ಕರ್ನಾಟಕ ಚಾಪ್ಟರ್ ಆಯೋಜಿಸಿದ್ದ ಮೂರು ದಿನಗಳ ೪೩ನೇಯ ವಾರ್ಷಿಕ ಸಮ್ಮೇಳನ ಕೆಪಿಕಾನ್-೨೦೨೬ ಉದ್ಘಾಟಿಸಿ ಮಾತನಾಡುತ್ತಿದ್ದರು.
ವೈದ್ಯರೆಂದರೆ ಆಸ್ಪತ್ರೆಗಳಲ್ಲಿರುವ ಸಾಕ್ಷಾತ್ ದೇವರುಗಳು. ರೋಗಿಗಳ ಜೀವ ಉಳಿಸುವಲ್ಲಿ ವೈದ್ಯರ ಪಾತ್ರ ಮುಖ್ಯವಾದದ್ದು. ಕೊವಿಡ್ ನಂತಹ ಸಂದಿಗ್ದ ಪರಿಸ್ಥಿತಿಯಲ್ಲೂ ತಮ್ಮ ಜೀವನವನ್ನೇ ಪಣಕ್ಕಿಟ್ಟು, ಧ್ಯರ್ಯವಾಗಿ ಕಾರ್ಯ ರ್ವಹಿಸಿದವರು ವೈದ್ಯರು ಎಂದು ಅವರ ಸೇವೆಯನ್ನು ಪ್ರಂಶಂಸಿಸಿದರು.

ಮೆಗ್ಗಾನ್ ಆಸ್ಪತ್ರೆಯನ್ನು ಸಿಮ್ಸ್ಗೆ ಸೇರಿಸಿದ್ದು ಅನುಕೂಲವೇ ಆಯಿತು. ರಾಜ್ಯ, ಕೇಂದ್ರ ಸರ್ಕಾರಗಳಿಂದ ಬರುವ ಅನುದಾನಗಳಿಂದ ಮತ್ತಷ್ಟು ಅಭಿವೃದ್ಧಿ ಹೊಂದಲು ಸಹಕಾರಿಯಾಯಿತು. ಈಗ ಈ ಆಸ್ಪತ್ರೆಯಲ್ಲಿ ಹೆರಿಗೆ ವಿಭಾಗ, ಡಯಾಲಿಸಿಸಿ, ಹೊರ ರೋಗಿಗಳ ವಿಭಾಗ ಸೇರಿದಂತೆ ಎಲ್ಲ ವಿಭಾಗಗಳೂ ರೋಗಿಗಳಿಗೆ ಉತ್ತಮ ಸೇವೆ ಸಲ್ಲಿಸುತ್ತಿವೆ ಎಂದ ಅವರು ಮೆಗ್ಗಾನ್ ಆಸ್ಪತ್ರೆ ಕೇವಲ ಜಿಲ್ಲೆಯ ಏಳು ತಾಲೂಕುಗಳ ರೋಗಿಗಳಿಗೆ ಮಾತ್ರ ಚಿಕಿತ್ಸೆ ಡುತ್ತಿಲ್ಲ ಬದಲಾಗಿ ಸುತ್ತ ಮುತ್ತಲಿನ ಸುಮಾರು ೨೩ ತಾಲೂಕುಗಳ ರೋಗಿಗಳೂ ಇಲ್ಲಿಗೆ ಬರುತ್ತಿರುವುದರಿಂದ ಆಸ್ಪತ್ರೆಯಲ್ಲಿನ ವೈದ್ಯರಿಗೆ, ಸಿಬ್ಬಂದಿಗಳಿಗೆ ಒತ್ತಡ ಹೆಚ್ಚಾಗುತ್ತಿದೆ. ಇದನ್ನು ಬಗೆಹರಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಡಾ.ಸಿಮ್ಸ್ ನಿರ್ದೇಶಕ ಡಾ||ವಿರುಪಾಕ್ಷಪ್ಪ, ಡಾ||ಎಸ್.ಬಿ.ಹೆಗಡೆ, ಡಾ||ಪೃಥ್ವಿ ಬಿ.ಸಿ., ಡಾ||ಮಹೇಶ್ಮೂರ್ತಿ ಬಿ.ಆರ್., ಡಾ||ಶ್ರೀಕಾಂತ್ ಎನ್. ಹೆಗಡೆ, ಡಾ||ಬಿ.ರಮೇಶ್, ಡಾ||ಜ್ಯೋತಿರ್ಮಯಿ ಪಾಲ್, ಡಾ||ನಾಗೇಂದ್ರ ಎಸ್., ಡಾ||ನಂದಿನಿ ಚಟರ್ಜಿ, ಡಾ||ಬಿ.ಮಹಾಲಿಂಗಪ್ಪ, ಡಾ||ನರಸಿಂಹಲು, ಡಾ||ಮೋಹನ್ಕುಮಾರ್ ಮಹಾದೇವಯ್ಯ, ಡಾ||ವಿಶ್ವನಾಥ್ ಕೃಷ್ಣಮೂರ್ತಿ ಮೊದಲಾದವರಿದ್ದರು.