ಶಿವಮೊಗ್ಗ,ಸೆ.04:
ಶಿವಮೊಗ್ಗ ಸೇರಿದಂತೆ ಹಲವೆಡೆ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾಗಿದ್ದ, ಶಂಕರಪ್ಪ, ಆನವೇರಿ ಭದ್ರಾವತಿ ತಾಲ್ಲೂಕು ಅವರು ನಿನ್ನೆ ರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ನಿಧನರಾದರು.

ಅವರಿಗೆ 70 ವರ್ಷ ವಯಸ್ಸಾಗಿತ್ತು, ಶಂಕರಪ್ಪ ಅವರು ಪತ್ನಿ, ಪುತ್ರಿ, ಅಳಿಯ ಸೇರಿದಂತೆ ಅಪಾರ ಬಂಧುಬಳಗವನ್ನು ಬಿಟ್ಟು ಅಗಲಿದ್ದಾರೆ.
ಮೃತರ ಪಾರ್ಥಿವ ಶರೀರವನ್ನು ಶಿವಮೊಗ್ಗದ ಕಾಶಿಪುರದ ಸ್ವಗೃಹದಲ್ಲಿ ಇಂದು ಸಂಜೆ 5 ಗಂಟೆಯಿಂದ ನಾಳೆ ಬೆಳಗ್ಗೆ 10 ಗಂಟೆಯವರೆಗೆ ದರ್ಶನಕ್ಕೆ ಇರಿಸಲಾಗುವುದು.

ನಾಳೆ ಬೆಳಗ್ಗೆ (5/9/26) 11 ಗಂಟೆಗೆ ಅವರ ಸ್ವಗ್ರಾಮವಾದ ಆನವೇರಿಯಲ್ಲಿ ಅಂತ್ಯಕ್ರಿಯೆಯನ್ನು ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿದೆ.