ಶಿವಮೊಗ್ಗ,ಸೆ.04:
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಪ ನಿರ್ದೇಶಕರ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಶಾಲಾ ಶಿಕ್ಷಣ ಇಲಾಖೆ ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ಸೆ.೫ ರ ನಾಳೆ ಬೆಳಿಗ್ಗೆ ೦೯ ಗಂಟೆಯಿಂದ ನಗರದ ಕುವೆಂಪು ರಂಗಮಂದಿರದಲ್ಲಿ ಶಿಕ್ಷಕರ ದಿನಾಚರಣೆಯನ್ನು ಈ ಭಾರಿ ವಿನೂತನವಾಗಿ ಆಚರಿಸಲು ನಿರ್ಧರಿಸಲಾಗಿದೆ.

ಇತ್ತೀಚೆಗೆ ನಡೆದ ಶಿಸ್ತು, ಸಮಯ ಬದ್ಧತೆಯ ಸ್ವಾತಂತ್ರೋತ್ಸವ ಮಾದರಿಯಲ್ಲೇ ಈ ಭಾರಿ ಅತ್ಯಂತ ವ್ಯವಸ್ಥಿತವಾಗಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲು ಹಿರಿಯ ಅಧಿಕಾರಿಗಳ ಮಾರ್ಗದರ್ಶನದ ಮೇರೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ತಂಡ ಹೊಸ ವಿನೂತನ ಪ್ಲಾನ್ ಹಾಕಿದೆ.

ಬೆಳಗ್ಗೆ ೯ ರಿಂದ ೯.೪೫ರವರೆಗೆ ಶಿವಮೊಗ್ಗ ತಾಲ್ಲೂಕಿನ ಶಿಕ್ಷಕರಿಂದ ಗೀತಾಗಾಯನ ಕಾರ್ಯಕ್ರಮ ನಡೆಯಲಿದ್ದು, ೯.೪೫ರಿಂದ ೧೦.೪೦ರವರೆಗೆ ೫೫ ನಿಮಿಷಗಳ ಸಂಸ್ಥೆಯ ಮುಖ್ಯಸ್ಥ ಡಾ. ಡಿ.ಆರ್. ಪ್ರಸನ್ನಕುಮಾರ್ ಅವರಿಂದ ಗುರುತ್ವ-ಉತ್ತರದಾಯಿತ್ವ ನಡುವೆ ಸಹಿಭಾಗಿತ್ವವೇ ಸೇತುವೆ ವಿಶೇಷ ಉಪನ್ಯಾಸ ನಡೆಯಲಿದೆ. ನಂತರ ೬ ನಿಮಿಷಗಳ ಕಾಲ ಜನತಾ ಕಾಲೋನಿ ಸ.ಕಿ.ಪ್ರಾ ಶಾಲೆಯ ವಿದ್ಯಾರ್ಥಿನಿಯರಿಂದ ಸ್ವಾಗತ ನೃತ್ಯ ನಡೆಯಲಿದೆ.

ನಂತರದ ೪ ನಿಮಿಷ ಅತಿಥಿಗಳಿಗೆ ಆಹ್ವಾನ, ನಂತರ ೫ ನಿಮಿಷ ಪ್ರಾರ್ಥನೆ, ೮ ನಿಮಿಷ ನಾಡಗೀತೆ, ೭ ನಿಮಿಷ ಸ್ವಾಗತ, ೩ ನಿಮಿಷ ಉದ್ಘಾಟನೆ, ೪ ನಿಮಿಷ ಪುಷ್ಪ ಸಮರ್ಪಣೆ, ೮ ನಿಮಿಷ ಉದ್ಘಾಟಕರ ನುಡಿ ನಂತರ ೧ ಗಂಟೆ ಅಂದರೆ ೧೨.೨೦ರವರೆಗೆ ಮುಖ್ಯ ಅತಿಥಿಗಳ ಭಾಷಣ ನಡೆಯಲಿದೆ.
ಕಾರ್ಯಕ್ರಮದ ವಿಶೇಷತೆ ಎಂಬಂತೆ ೧೨.೨೦ರಿಂದ ೧೨.೪೦ರವರೆಗೆ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ, ನಂತರ ೨೫ ನಿಮಿಷ ನಿವೃತ್ತ ಶಿಕ್ಷಕರಿಗೆ ಸನ್ಮಾನ, ನಂತರ ೨೦ ನಿಮಿಷ ಅಧ್ಯಕ್ಷರ ಭಾಷಣ, ೧.೩೦ರವರೆಗೆ ಅಂದರೆ ಕೊನೆಯ ೫ ನಿಮಿಷ ವಂದನಾರ್ಪಣೆ ನಡೆಯಲಿದೆ.
ವಿಶೇಷ ಭೋಜನ:
ಪ್ರತಿವರ್ಷದಂತೆ ಬಫೆ ಮಾದರಿಯ ಊಟವಿರದೇ ಒಕ್ಕಲಗರ ಸಮುದಾಯ ಭವನದಲ್ಲಿ ಬಾಳೆ ಎಲೆಯ ವಿಶೇಷ ಭೋಜನಾ, ೧.೩೦ರಿಂದ ಆರಂಭಗೊಳ್ಳಲಿದೆ. ಇಡೀ ಕಾರ್ಯಕ್ರಮ ಅತ್ಯಂತ ವ್ಯವಸ್ಥಿತವಾಗಿ ನಡೆಯಲು ಸಕಲ ತಯಾರಿಗಳನ್ನು ಮಾಡಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.