ತೀರ್ಥಹಳ್ಳಿ: ಕೊರೊನಾ ಪಾಸಿಟಿವ್ ಬಂದಿದ್ದಕ್ಕೆ ಹೆದರಿ ವ್ಯಕ್ತಿಯೊಬ್ಬ ಇರುವೆ ಔಷಧ ತಿಂದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ತೀರ್ಥಹಳ್ಳಿ ಪಟ್ಟಣದಲ್ಲಿ ಶುಕ್ರವಾರ ನಡೆದಿದೆ.
ಪಟ್ಟಣದ ಇಂದಿರಾ ನಗರದಲ್ಲಿ ರಾಘವೇಂದ್ರ(29) ಆತ್ಮಹತ್ಯೆಗೆ ಯತ್ನಿಸಿ ಇದೀಗ ತೀರ್ಥಹಳ್ಳಿ ಜೆಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇತ್ತೀಚಿಗೆ ತೀರ್ಥಹಳ್ಳಿ ಪಟ್ಟಣದ ಇಂದಿರಾ ನಗರ ಸೀಲ್ ಡೌನ್ ಮಾಡಲಾಗಿತ್ತು. ಅತೀ ಹೆಚ್ಚು ಕರೋನಾ ಕೇಸ್ ಹಿನ್ನೆಲೆ ಎಲ್ಲರನ್ನು ಕರೋನಾ ತಪಾಸಣೆ ಮಾಡಿದ್ದು, . ಪತ್ನಿ ನಿರ್ಮಲಾಗೆ ನೆಗೆಟಿವ್ ಬಂದಿದೆ. ಕಳೆದ ಗುರುವಾರ ಹೊಟ್ಟೆನೋವು ಬಂದು ಆಸ್ಪತ್ರೆ ದಾಖಲಾಗಿದ್ದಾಳೆ. ಪತ್ನಿ ಆಸ್ಪತ್ರೆಗೆ ಬಂದಿದ್ದರಿಂದ ನನಗೂ ಕರೋನಾ ಬಂದಿರಬಹುದೆಂದು ಎಂದು ಹೆದರಿ ರಾಘವೇಂದ್ರ ಮನೆ ಬಾಗಿಲು ಹಾಕಿಕೊಂಡು ಇರುವೆ ಔಷಧ ತಿಂದಿದ್ದಾನೆ. ಸ್ಥಳೀಯ ಪಟ್ಟಣ ಪಂಚಾಯತ್ ಸದಸ್ಯ ರಹಮುತುಲ್ಲಾ ಆಸಾದಿ ಮತ್ತು ಸ್ನೇಹಿತರು ತಕ್ಷಣ ಆಸ್ಪತ್ರೆಗೆ ಕರೆತಂದು ಪ್ರಾಣ ಉಳಿಸಿದ್ದಾರೆ. ಈಗ ಆತ ಚೇತರಿಸಿಕೊಳ್ಳುತ್ತಿದ್ದಾನೆಂದು ತಿಳಿದುಬಂದಿದೆ.