ಶಿವಮೊಗ್ಗ : ಶಿವಮೊಗ್ಗ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಸಾರ್ವಜನಿಕರು ಏಪ್ರಿಲ್ ಅಂತ್ಯದೊಳಗೆ ಕಂದಾಯ ಕಟ್ಟಿದರೆ ಶೇ.೫ರ ರಿಯಾಯಿತಿ ಇದ್ದು ತೆರಿಗೆದಾರರನ್ನು ಗೌರವಿಸುವ ಸಲುವಾಗಿ ಶಿವಮೊಗ್ಗ ಮಹಾನಗರ ಪಾಲಿಕೆ ವಿನೂತನ ಕಾರ್ಯಕ್ಕೆ ಮುಂದಾಗಿದೆ.

ಇಂದು ನಗರದ ಗೋಪಿವೃತ್ತದಲ್ಲಿರುವ ಪಾಲಿಕೆಯ ವಲಯ ಕಛೇರಿ-೨ರಲ್ಲಿ ಮೊದಲು ಕಂದಾಯ ಕಟ್ಟಿದ ನಾಗರೀಕರಿಗೆ ಅಭಿನಂದಿಸಿ ಶಿವಮೊಗ್ಗ ಮಹಾನಗರ ಪಾಲಿಕೆಯ ವ್ಯಾಪ್ತಿಯ ಆಸ್ತಿ ಮಾಲೀಕರಾದ ತಾವು ೨೦೨೬-೨೭ನೇ ಸಾಲಿನ ಆಸ್ತಿ ತೆರಿಗೆಯನ್ನು ಪ್ರಥಮವಾಗಿ ಪಾವತಿಸಿ, ಒಬ್ಬ ಜವಾಬ್ದಾರಿಯುತ ನಾಗರೀಕರಾಗಿ ಹೊರಹೊಮ್ಮಿದ್ದೀರಿ. ನಗರದ ಅಭಿವೃದ್ಧಿ ತಾವು ನೀಡಿದ ಈ ಸಹಕಾರಕ್ಕೆ ಪಾಲಿಕೆಯ ಪರವಾಗಿ ಅಭಿನಂದನೆಗಳು ಎಂದು ‘ಮಾದರಿ ನಾಗರೀಕ’ ಎಂಬ ಅಭಿನಂದನಾ ಪತ್ರವನ್ನು ನೀಡಿ, ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತ ಮಾಯಣ್ಣಗೌಡ, ಉಪ ಆಯುಕ್ತ ವಿರುಪಾಕ್ಷಪ್ಪ ಪೂಜಾರ್, ಆರ್ಓ ನಾಗೇಂದ್ರ, ಸಿಬ್ಬಂದಿಗಳಾದ ಜುಬೇರ್, ಹನೀಫ್, ಆಕಾಶ್, ಅಂಜನಾಮೂರ್ತಿ, ಲಕ್ಷ್ಮಣ್, ಮಂಜುಶ್ರೀ ಮೊದಲಾದವರಿದ್ದರು.