ಜಿಲ್ಲಾ ದಿನಪತ್ರಿಕೆಗಳ ಸಂಪಾದಕರ ಸಂಘ, ಶಿವಮೊಗ್ಗ ಪ್ರೆಸ್ ಟ್ರಸ್ಟ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾದಿಕಾರಿಗಳು, ಪ್ರಮುಖರನ್ನೊಳಗೊಂಡಂತೆ ಇಂದು ಬೆಳಿಗ್ಗೆ ಪತ್ರಿಕಾಭವನದಲ್ಲಿ ಮಹತ್ತರವಾದ ಸಭೆ ನಡೆದಿದ್ದು, ಸಭೆಯಲ್ಲಿ ಮುಂದಿನ ಹೋರಾಟದ ಬಗ್ಗೆ ನಿರ್ಧರಿಸಲಾಯಿತು

. ಇಪ್ಪತೈದಕ್ಕೂ ಹೆಚ್ಚು ಪತ್ರಿಕಾ ಸಂಪಾದಕರು ಪಾಲ್ಗೊಂಡು ಚರ್ಚಿಸಿದ್ದು ವಿಶೇಷ. ಸಂಪಾದಕರ ಸಂಘದ ಅಧ್ಯಕ್ಷ ಎಸ್. ಕೆ. ಗಜೇಂದ್ರ ಸ್ವಾಮಿ, ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವೈ. ಹೆಚ್. ವೈದ್ಯನಾಥ್ ಹಾಗೂ ಸಂಪಾದಕರುಗಳಾದ ಜನಹೋರಾಟದ ಶೃಂಗೇಶ್, ವಾಯ್ಸ್ ಬಂಡಿಗಡಿ ನಂಜುಂಡಪ್ಪ, ನಮ್ಮ ನಾಡು ಶಿವಕುಮಾರ್, ಅಜೇಯದ ಶ್ರೀನಿವಾಸ್, ಹೊಸನಾವಿಕದ ರಾಕೇಶ್ ಡಿಸೋಜಾ, ಸಹ್ಯಾದ್ರಿ ಮಂಜುನಾಥ್, ರಾಜ ಋಷಿ ಭರತೇಶ್, ಶಿವಮೊಗ್ಗ ಸಿಂಹದ ಜಿ. ಚಂದ್ರಶೇಖರ್, ಮಲೆನಾಡು ಮಿತ್ರದ ನಾಗರಾಜ್ ನೇರಿಗೆ, ಕ್ರಾಂತಿಭಗತ್ ನ ಶಣೈ, ಆಜ್ ಕೀ ಇನ್ ಕಿಲಾಬ್ ಮುದಾಸಿರ್, ಟೆಲೆಕ್ಸ್ ರವಿಕುಮಾರ್, ಎಚ್ಚರಿಕೆ ಸೂರ್ಯನಾರಾಯಣ್, ಬೆಂಕಿಬಿರುಗಾಳಿಯ ಶಿ.ಜು ಪಾಶಾ, ಉಷಾಮಹಿ ಕಣ್ಣಪ್ಪ, ಭದ್ರಾವಾಹಿನಿಯ ಸುಭಾಷ್, ನುಡಿಗಿಡ ಮಂಜುನಾಥ್, ಮಲೆನಾಡು ಸುದ್ದಿಯ ಲಿಯಾಖತ್, ಶಿವಮೊಗ್ಗ ಸಂಚಲನದ ಆನಂದ್, ಪ್ರಮುಖರಾದ ಹಾಲಸ್ವಾಮಿ, ಅರುಣ್, ಹೊನ್ನಾಳಿ ಚಂದ್ರಶೇಖರ್ ಹಾಗೂ ಇತರರಿದ್ದರು.