ಶಿವಮೊಗ್ಗ, ಮಾ.20 : ಕೆ.ಈಕಾಂತೇಶ್ ಸ್ನೇಹ ಬಳಗದ ವತಿಯಿಂದ ಪ್ರತೀ ವರ್ಷದಂತೆ ನಿಕಟಪೂರ್ವ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಯುವ ನಾಯಕ ಕೆ.ಈ. ಕಾಂತೇಶ್ ಅವರ ಹುಟ್ಟುಹಬ್ಬವನ್ನು ಮಾ.22 ರಂದು ಹಲವು ಸಮಾಜಮುಖಿ ಕಾರ್ಯಕ್ರಮದ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ಬಳಗದ ಸಂಚಾಲಕ ಇ.ವಿಶ್ವಾಸ್ ತಿಳಿಸಿದರು.
ಅವರಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಿಗ್ಗೆ 8 ಗಂಟೆಗೆ ವಿನೋಬನಗರದ ಶಿವಾಲಯ ಆವರಣದಲ್ಲಿ ಗೋಪೂಜೆ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದರು.
ನಂತರ ಶ್ರೀ ಬೆಕ್ಕಿನಕಲ್ಮಠದ ಆವರಣದಲ್ಲಿ ಕೆ.ಎಸ್.ಈಶ್ವರಪ್ಪ ಕುಟುಂಬದ ಧರ್ಮ ಸೇರ್ವಾಸ್ಥದಿಂದ ನಿರ್ಮಿಸಲಾಗುತ್ತಿರುವ ಶ್ರೀ ಗುರುಬಸವ ಮಹಾಸ್ವಾಮಿಗಳ ನೂತನ ಗದ್ದುಗೆಗೆ ಶಂಕುಸ್ಥಾಪನೆ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬೆಕ್ಕಿನಕಲ್ಮಠದ ಡಾ.ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ವಹಿಸಲಿದ್ದಾರೆ. ಹಾಗೂ ಶ್ರೀಮಠದ ಆವರಣದಲ್ಲಿ ರೋಟರಿ, ಮೆಗ್ಗಾನ್ ಆಸ್ಪತ್ರೆ ಮತ್ತು ಆಶಾಕಿರಣ ರಕ್ತನಿಧಿಗಳ ಸಹಯೋಗದೊಂದಿಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ ಎಂದರು.

ಬೆಳಿಗ್ಗೆ 8.30ಕ್ಕೆ ಹೊಳೆಬಸ್ಟಾಪ್ ನಿಲ್ದಾಣದ ವೃತದಲ್ಲಿ ಮಲ್ಲೇಶ್ವರ ನಗರ, ಗುಂಡಪ್ಪ ಶೆಡ್, ರಾಮರಾವ್ ಬಡಾವಣೆಯ ನಿವಾಸಿಗಳ ಸಂಘ ಹಾಗೂ ಹೊಳೆಬಸ್ ನಿಲ್ದಾಣ ಗೆಳೆಯರ ಬಳಗದ ಸಹಯೋಗದೊಂದಿಗೆ ಶ್ರಮಿಕರಿಗೆ ಅನ್ನದಾನ ಸೇವೆ ಹಾಗೂ ಕೋಟೆ ಯುವಕರ ಬಳಗ ಮತ್ತು ರೆಡ್ಕ್ರಾಸ್ ಸಂಜೀವಿನಿ ಕೇಂದ್ರದ ಸಹಯೋಗದೊಂದಿಗೆ ಕೋಟೆ ಬಯಲು ರಂಗಮಂದಿರದಲ್ಲಿ ಬೆಳಿಗ್ಗೆ 10 ಗಂಟೆಗೆ ರಕ್ತದಾನ ಶಿಬಿರ ಮತ್ತು ಸೀಗೆಹಟ್ಟಿಯಲ್ಲಿ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಆಲ್ಕೊಳ ವೃತ್ತದಲ್ಲಿ ಕಟ್ಟಡ ಕಾರ್ಮಿಕರ ಸಂಘದಿಂದ ಅನ್ನದಾನ ಶಿಬಿರ ಇರುತ್ತದೆ ಎಂದರು.
ಮಾ.21 ಮತ್ತು 22 ರಂದು ಎನ್ಇಎಸ್ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿದ್ದು, ಇದರಲ್ಲಿ 20ಕ್ಕೂ ಹೆಚ್ಚು ತಂಡಗಳು ಭಾಗವಹಿಸಲಿವೆ ಎಂದರು.
ಮಾ.22ರ ಸಂಜೆ ಶುಭಮಂಗಳ ಸಮುದಾಯ ಭವನ ಆವರಣದಲ್ಲಿ ಕಾಂತೇಶ್ ಹುಟ್ಟುಹಬ್ಬದ ಯುವೋತ್ಸವ ಪ್ರಧಾನ ವೇದಿಕೆ ಕಾರ್ಯಕ್ರಮವಿದ್ದು, ಬಿಗ್ಬಾಸ್ ವಿಜೇತ ಗಿಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಇವರ ಜೊತೆಗೆ ಹೆಸರಾಂತ ಕಲಾವಿದರಿಂದ ಸಾಂಸ್ಕøತಿಕ ಮತ್ತು ಮನೋರಂಜನಾ ಕಾರ್ಯಕ್ರಮ ಇರುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಳಗದ ಪ್ರಮುಖರಾದ ಈಶ್ವರಪ್ಪ, ಮಹಾಲಿಂಗಶಾಸ್ತ್ರಿ, ವೆಂಕಟೇಶ್, ರಮೇಶ್ಬಾಬು ಯಾದವ್, ಗಜೇಂದ್ರನಾಥ್, ಕೋಟೆ ರಾಜು, ಚನ್ನಬಸಪ್ಪ, ಕುಬೇರಪ್ಪ, ಶಿವಾಜಿ, ಎನ್.ಜಿ.ಬಾಲು ಇನ್ನಿತರರು ಉಪಸ್ಥಿತರಿದ್ದರು.