ಶಿವಮೊಗ್ಗ: ಜಿಲ್ಲೆಯಲ್ಲಿ ಬುಧವಾರ ಪೆಟ್ರೋಲ್ ಬೆಲೆ ಶತಕ ಬಾರಿಸಿದೆ. ಡೀಸೆಲ್ ಕೂಡ ಶತಕ ಬಾರಿಸುವ ಸನಿಹದಲ್ಲಿದೆ. ಇನ್ನೊಂದೆಡೆ ತೈಲ ಬೆಲೆ ಏರಿಕೆ ವಿರುದ್ದ ಜನಾಕ್ರೋಶ ಹೆಚ್ಚಲಾರಂಭಿಸಿದೆ.
ಜಿಲ್ಲೆಯಲ್ಲಿ ಪೆಟ್ರೋಲ್ ಬೆಲೆ100.14 ರೂ ಮತ್ತು ಡೀಸೆಲ್ 92.87 ರೂ ಗೆ ತಲುಪಿದೆ. ಪವರ್ ಪೆಟ್ರೋಲ್ 103.69 ಮತ್ತು ಟರ್ಬೊಜೆಟ್ 96.20 ರೂ. ಆಗಿದೆ.
ಮೇ ಒಂದರಂದು ೯೪. ೦೬ ರೂ. , ೫ರಂದು ೯೫.೧೫, ೧೦ರಂದು ೯೫.೯೫, ೧೫ರಂದು ೯೫.೦೮ ಮತ್ತು ೨೫ರಂದು ೯೭.೯೪, ೩೧ರಂದು ೯೯.೦೩ ಕ್ಕೆ ದರ ಏರಿಕೆಯಾಗಿತ್ತು.
ಜೂನ್ ೧ರಂದು ೯೯.೦೩ ಇದ್ದ ಬೆಲೆ ಪೈಸೆ ಲೆಕ್ಕದಲ್ಲಿ ಶತಕ ಬಾರಿಸಿದೆ. ಜೂನ್ ೪ರಂದು ೦.೨೮ ಪೈಸೆಯಷ್ಟು ಹೆಚ್ಚಳವಾಗಿ ೯೯. ೩೧ರೂ, ೬ರಂದು ೯೯.೫೧, ೭ರಂದು ೯೯.೮೮ ಇತ್ತು. ಈಗ ೦.೨೬ ಪೈಸೆ ಹೆಚ್ಚಳವಾಗಿ ನೂರರ ಗಡಿ ದಾಟಿ ೧೦೦. ೧೪ ಪೈಸೆಯಷ್ಟಾಗಿದೆ. ತೈಲ ಬೆಲೆ ಏರಿಕೆಯಿಂದ ಇತರೆ ವಸ್ತುಗಳ ಬೆಲೆ ಸತತ ಏರಿಕೆಯಾಗುತ್ತಿದೆ. ಕಳೆದ ವರ್ಷ ಪ್ರತಿ ಲೀಟರ್‌ಗೆ ೭೪.೬೨ ರೂ. ಇತ್ತು. ೬ ತಿಂಗಳ ಹಿಂದೆ ೯೧.೦೩ರೂಗೆ ಏರಿಕೆಯಾಯಿತು. ಈಗ ೧೧೦ರ ಗಡಿ ದಾಟಿರುವುದು ಜನರಲ್ಲಿ ಅಸಹನೆ ಮೂಡಿಸಿದೆ.
ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದು ,ಕಾಂಗ್ರೆಸ್ ಸತತ ಪ್ರತಿಭಟನೆ ನಡೆಸುತ್ತಿದೆ.

ವಿದ್ಯುತ್ ದರ ಪ್ರತಿ ಯೂನಿಟ್ ಗೆ 30 ಪೈಸೆ ಹೆಚ್ಚಳ

ಬೆಂಗಳೂರು: ರಾಜ್ಯದ ಎಲ್ಲ ವಿದ್ಯುತ್ ಸರಬರಾಜು ಕಂಪನಿಗಳ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ ವಿದ್ಯುತ್ ದರದಲ್ಲಿ 30 ಪೈಸೆ ಹೆಚ್ಚಳ ಮಾಡಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್ ಸಿ) ಬುಧವಾರ ಆದೇಶ ಹೊರಡಿಸಿದೆ.

ಪ್ರತಿ ಯೂನಿಟ್ ಗೆ 30 ಪೈಸೆ ಏರಿಕೆಗೆ ಕೆಇಆರ್ ಸಿ ಅನುಮೋದನೆ ನೀಡಿದೆ. ಏಪ್ರಿಲ್ 1ರಿಂದ ಹೊಸ ದರ ಪೂರ್ವಾನ್ವಯವಾಗಲಿದೆ. ಹಿಂಬಾಕಿಯನ್ನು ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಎರಡು ಸಮಾನ ಕಂತುಗಳಲ್ಲಿ ವಸೂಲಿ‌ ಮಾಡಲು ಆಯೋಗ ಅವಕಾಶ ಕಲ್ಪಿಸಿದೆ

By admin

ನಿಮ್ಮದೊಂದು ಉತ್ತರ

You missed

error: Content is protected !!