ಸೊರಬ : ಶಿಕ್ಷಕರ ಕ್ರೀಡಾಕೂಟವು ಶಿಕ್ಷಕರಲ್ಲಿ ದೈಹಿಕ ಆರೋಗ್ಯ, ಮಾನಸಿಕ ನೆಮ್ಮದಿ, ತಂಡದ ಕೆಲಸ ಮತ್ತು ಶಿಸ್ತನ್ನು ಉತ್ತೇಜಿಸುವ ಪ್ರಮುಖ ಚಟುವಟಿಕೆ ಎಂದು ರಾಜ್ಯ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಲೇಶ್ ನವುಲೆ ಹೇಳಿದರು.

ಶನಿವಾರ ಸೊರಬದ ಎಸ್ ಬಂಗಾರಪ್ಪ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಣ ಇಲಾಖೆಯ ಟೀಚರ್ ಪ್ರೀಮಿಯರ್ ಲೀಗ್ ಕ್ರಿಕೇಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೈನಂದಿನ ಬೋಧನೆಯ ಒತ್ತಡವನ್ನು ಕಡಿಮೆ ಮಾಡಲು ಮತ್ತು ಪರಸ್ಪರ ಸ್ನೇಹ ಬಾಂಧವ್ಯವನ್ನು ವೃದ್ಧಿಸಲು ಸಹಾಯ ಮಾಡುತ್ತದೆ ಎಂದರು.ಇಂತಹ ಕೂಟಗಳಲ್ಲಿ ಗ್ರಾಮೀಣ ಪ್ರತಿಭಾನ್ವಿತ ಶಿಕ್ಷಕರು ಭಾಗವಹಿಸುವುದು ಬಹಳ ಶ್ಲಾಘನೀಯ ಮುಖ್ಯ ಬಿಡುವಿನ ವೇಳೆಯಲ್ಲಿ ಕ್ರೀಡೆ,ಸಾಂಸ್ಕೃತಿಕ, ಸಾಹಿತ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಕರೆ ನೀಡಿದರು. ಸೊರಬ ಬಿ.ಇ.ಓ ಆರ್ ಪುಷ್ಪ ಮತ್ತು ಬಿ.ಆರ್ ಸಿ ದಯಾನಂದ್ ಕಲ್ಲೇರ್ ಚಾಲನೆ ನೀಡಿ ಶುಭ ಹಾರೈಸಿದರು.
ಈ ಸಮಯದಲ್ಲಿ ಉದ್ರಿ ಗ್ರಾಮ ಪಂಚಾಯತಿಯ ಪಿ.ಡಿ.ಓ ಉಮೇಶ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ
ಸಮಾರಂಭದಲ್ಲಿ ಶಿಕ್ಷಕರ ಸಂಘದ ಗಣಪತಿ ಎನ್, ಶಿವಕುಮಾರ್, ಶಿವಮೂರ್ತಿ, ಓಂಕಾರಪ್ಪ, ಶ್ರೀನಿವಾಸ ಎನ್.ಆರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಘಟನೆಗಳ ಪ್ರಮುಖರಾದ ರಾಘವೇಂದ್ರ, ಗುರುರಾಜ್, ಶಿವಕುಮಾರ್,ಇತರರು ಕ್ರೀಡಾಕೂಟವನ್ನು ಆಯೋಜಿಸಿದ್ದರು.
ಸಿ.ಆರ್.ಪಿ.ಗಳಾದ ವಿಜಯ್ ಕುಮಾರ್, ಕೋರಿಗೌಡ್ರು, ಶಂಕರನಾಯ್ಕ್, ಸುರೇಶ್, ರಫೀ, ವಾಸುದೇವ್, ಮಂಜಪ್ಪ, ದೀಪಕ್, ಕೇಶವ್, ಮೋಹನ್, ಸತೀಶ್ ಮುಂತಾದವರು ಭಾಗವಹಿಸಿದ್ದರು.
ಪಂದ್ಯಾವಳಿಯಲ್ಲಿ ಎಂಟು ಶಿಕ್ಷಕರ ತಂಡಗಳು ಲೀಗ್ ನಲ್ಲಿ ಭಾಗವಹಿಸಿದ್ದವು ಪ್ರಥಮ ಬಹುಮಾನ ಇಪ್ಪತ್ತು ಸಾವಿರ ಹಾಗೂ ದ್ವಿತೀಯ ಬಹುಮಾನ ಹತ್ತು ಸಾವಿರಗಳನ್ನು ನೀಡಲಾಗುವದೆಂದು ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಘೋಷಣೆ ಮಾಡಲಾಯಿತು.