ಇದು ಸಕಾರಾತ್ಮಕ ಕಾನೂನೇ ಸ್ವಾಮಿ?
ವಿಶೇಷ ವರದಿ: ಮಂಜುನಾಥ್, ಭದ್ರಾವತಿ
ಭದ್ರಾವತಿ,ಫೆ.21:
ಭದ್ರಾವತಿಯಲ್ಲಿ ಪ್ರತಿ ಭಾನುವಾರ ಹೊಸಮನೆ ಮುಖ್ಯ ರಸ್ತೆ ಸಂತೆ ಮೈದಾನದಲ್ಲಿ ಸಂತೆ ನಡೆಯುತ್ತದೆ.
ಭದ್ರಾವತಿಯ ಸುತ್ತಮುತ್ತಲಿನ ಎಲ್ಲಾ ಊರುಗಳಿಂದ ಜನ ಬಂದು ವ್ಯಾಪಾರ ಮಾಡಿಕೊಂಡು ಹೋಗುವುದು ವಾಡಿಕೆ. ಹಾಗೂ ಮುಖ್ಯ ರಸ್ತೆಯಲ್ಲಿ ಜನ ಜಂಗುಳಿ ಕೂಡ ಇರುತ್ತದೆ.

ಸಂತೆ ಮೈದಾನದಲ್ಲಿರುವ ಶಿವಾಜಿ ಸರ್ಕಲ್ ಪೋಲಿಸ್ ಠಾಣೆ ಉಪವಿಭಾಗದಿಂದ ದಿನಾಂಕ ನಿನ್ನೆ ಸಂಜೆ ಸುಮಾರು 6.30 ರಿಂದ ಪೋಲಿಸ್ ಅಧಿಕಾರಿ, (ಸಿಂಗಲ್ ಸ್ಟಾರ್ ಮತ್ತು ಡಬಲ್ ಸ್ಟಾರ್ ಅಧಿಕಾರಿಗಳು ಇಲ್ಲದೆ ಪೋಲಿಸ್) ಎಎಸ್ ಐ, ಪಿಎಸ್ಐ ಅಲ್ಲದವರು ಮತ್ತು ಸಿಬ್ಬಂದಿ ಮತ್ತು ಹೋಂ ಗಾರ್ಡ್ ನಿಂದ ವಾಹನಗಳನ್ನು ತಡೆದು ತಪಾಸಣೆ ಮಾಡುತ್ತಿದ್ದು, ಮತ್ತು ದಂಡ ಹಾಕುತ್ತಿದ್ದು ಕಂಡು ಬಂತು.
ಈ ದಿನದಂದು ಈ ರಸ್ತೆಯಲ್ಲಿ ಜನಸಂದಣಿ ತುಂಬಾ ಇರುವ ಕಾರಣ ಈ ತಪಾಸಣೆ ವೇಳೆ ಜನಸಮಾನ್ಯರು ಮತ್ತು ಅತಿ ಹೆಚ್ಚು ವಾಹನ ಓಡಾಟ ಇರುವುದರಿಂದ ಅಪಘಾತ ಕೂಡ ಆಗುವ ಸಂಭವ ಇರುತ್ತದೆ.
ಈ ರಸ್ತೆಯುಲ್ಲಿ ಓಡಾಡುವ ಜನಸಾಮಾನ್ಯರು ಗೊಣಗಾಡುತ್ತಿದ್ದು, ಇವರು ತಪಾಸಣೆ ಹಾಗೂ ದಂಡವಸೂಲಿ ಮಾಡಬಹುದೇ ಎಂಬ ಪ್ರಶ್ನೆ ಕೇಳಿ ಬಂದಿದೆ.

ಭದ್ರಾವತಿಯಲ್ಲಿ ಜೂಜಾಟ, ಗಾಂಜಾ, ರೆಸ್ಟೊರಂಟಗಳಲ್ಲಿ ಮದ್ಯ ಮಾರಾಟ ನಡೆಯುತ್ತಿದ್ದು ಅದನ್ನು ಸರಿಪಡಿಸುವ ಬದಲು ಪೋಲಿಸ್ ಮೇಲಧಿಕಾರಿಗಳಿಲ್ಲದೆ ಪೋಲಿಸ್ ಸಿಬಂದಿ ಮತ್ತು ಹೋಂ ಗಾರ್ಡ್ ನಿಂದ ವಾಹನ ತಪಾಸಣೆ ಮಾಡಲು ಯಾರು ಅಧಿಕಾರ ಕೊಟ್ಟವರು ಯಾರು ಎಂದು ಮಾತಾಡಿಕೊಂಡು ಹೋಗುತ್ತಿದ್ದು ಕಂಡು ಬಂದಿತು. ಇದು ಸಕಾರಾತ್ಮಕ ಕಾನೂನೇ..? ಪಬ್ಲಿಕ್ ಪ್ರಶ್ನೆ.