ರವರಿಂದ ರಾಷ್ಟ್ರಮಟ್ಟದ ಟಗರು ಕಾಳಗದ
ನಮ್ಮೂರ ಬಳಗ ಶಿವಮೊಗ್ಗದ ವತಿಯಿಂದ ಕೋಟೆ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಫೆಬ್ರವರಿ 15ರಂದು ಹಮ್ಮಿಕೊಂಡಿರುವ ರಾಷ್ಟ್ರಮಟ್ಟದ ಬಾರಿ ಟಗರು ಕಾಳಗದ ದ ‘ಸಂಗೊಳ್ಳಿ ರಾಯಣ್ಣ , ವೀರ ಶಿವಪ್ಪ ನಾಯಕ, ಭಗೀರಥ,ವೀರ ಸಿಂಧೂರ ಲಕ್ಷ್ಮಣ ಬಿರುದಿನ “ಕಂಬಳಿಯ ಜುಲವನ್ನು ” ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ನ ನಿಕಟ ಪೂರ್ವ ಅಧ್ಯಕ್ಷರಾದ ಮೊಹಮ್ಮದ್ ಹ್ಯಾರಿಸ್ ನಲಪಾಡ್

ರವರು ಶಿವಮೊಗ್ಗ ನಗರದ ಫ್ರೀಡಂ ಪಾರ್ಕ್ ನಲ್ಲಿ ಅನಾವರಣಗೊಳಿಸಿ,ನಾಡಿನ ಸಂಸ್ಕೃತಿ, ಪರಂಪರೆ ಮತ್ತು ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ನೀಡುವ ಈ ಮಹೋತ್ಸವವು ಜನರಲ್ಲೊಂದು ವಿಶೇಷ ಉತ್ಸಾಹ ಮೂಡಿಸಿದೆ ಶಿವಮೊಗ್ಗ ಮಾರಿಕಾಂಬ ಜಾತ್ರೆಯ ಟಗರು ಕಾಳವು ಯಶಸ್ವಿಯಾಗಲೆಂದು ಶುಭ ಕೋರಿದರು

ಈ ಸಂದರ್ಭದಲ್ಲಿ ನಮ್ಮೂರ ಬಳಗದ ಪ್ರಧಾನ ಸಂಚಾಲಕ ಕೆ ರಂಗನಾಥ್, ಗೌರವ ಸಂಚಾಲಕರಾದ ಐಡಿಯಲ್ ಗೋಪಿ, ಹೆಚ್ ಪಾಲಾಕ್ಷಿ, ಸಿ ರವಿ, ಜಿಡಿ ಮಂಜುನಾಥ್, ಸೂಡ ಸದಸ್ಯರಾದ ಎಂ.ಪ್ರವೀಣ್ ಕುಮಾರ್, ಹಾಪ್ ಕಾಮ್ಸ್ ನಿರ್ದೇಶಕ ಶರತ್ ಮರಿಯಪ್ಪ, ನಮ್ಮೂರ ಬಳಗದ ಸಂಚಾಲಕರಾದ ಕೆ ಆರ್ ಸುರೇಶ್, ಎಚ್. ಪಿ. ಗಿರೀಶ್, ಬಿ ಲೋಕೇಶ್ ,ಗುರುಪ್ರಸಾದ್, ಚಂದ್ರು ಗೆಡ್ಡೆ, ಶಮಿರ್, ಎಸ್ಕೆ ಮನೋಜ್, ಕಿರಣ್, ರವಿ ಶಾಸ್ತ್ರಿ, ಹಾಗೂ ಇತರರು ಇದ್ದರು