ಶಿವಮೊಗ್ಗ,ಫೆ.06:
ಫೆ. 8ರ ಸಂಜೆ 5:30ಕ್ಕೆ ಶಿವಮೊಗ್ಗದ ಭರತನಾಟ್ಯ ಶಾಲೆಯಾದ ನಟನಂ ಬಾಲ ನಾಟ್ಯ ಕೇಂದ್ರದಿಂದ ನರ್ತನಾಂಕುರ – 4 ಎಂಬ ಭರತನಾಟ್ಯ, ಜಾನಪದ ಹಾಗೂ ಫ್ಯೂಶನ್ ನೃತ್ಯದ ಕಾರ್ಯಕ್ರಮವನ್ನು ಕರ್ನಾಟಕ ಕಲಾಶ್ರೀ ವಿದ್ವಾನ್ ಡಾ. ಎಸ್ ಕೇಶವಕುಮಾರ್ ಪಿಳ್ಳೆ ಹಾಗೂ ವಿದ್ವಾನ್ ಚೇತನ್ ಎಸ್, ಸಿ ವಿದುಷಿ ನಾಟ್ಯಶ್ರೀ ಚೇತನ್ ಇವರು ಪ್ರಸ್ತುತಪಡಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಶಿವಮೊಗ್ಗ ಶಾಸಕ ಚನ್ನಬಸಪ್ಪ ಅವರು ಬಿಶೇಷ ಅತಿಥಿಯಾಗಿ ಆಗಮಿಸಲಿದ್ದಾರೆ.
ಈ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಮಹಾಕಾಳಿ ಸ್ತುತಿ ಅಭಿನಯಿಸುತ್ತಿದ್ದಾರೆ.
ಶಿವಮೊಗ್ಗದ ನಮ್ಮ ಕೇಂದ್ರದ ವಿದ್ಯಾರ್ಥಿಗಳು ಒಟ್ಟು 95 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ನರ್ತಿಸಲಿದ್ದಾರೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರ್ ಶೇಖರ್ ಅವರು ವಹಿಸಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕರ್ನಾಟಕ ಕಲಾಶ್ರೀ ವಿದ್ವಾನ್ ಡಾ. ಎಸ್ ಕೇಶವ್ ಕುಮಾರ್ ಅವರು ಕೋರಿದ್ದಾರೆ.