ಶಿವಮೊಗ್ಗ: 45 ವರ್ಷದ ಬನ್ಸಲ್ ತರಬೇತಿ ಪರಂಪರೆ ಹೊಂದಿರುವ ನುರಿತ ಪ್ರಾಧ್ಯಾಪಕರಿಂದ ಫೆ.8ರಂದು ಬೆಳಿಗ್ಗೆ 10 ಗಂಟೆಯಿಂದ ಬಿ.ಹೆಚ್. ರಸ್ತೆಯ ಚರ್ಚ್ ಎದುರಿನ ಹರ್ಷ ಶೋರೂಂ ಕಟ್ಟಡದ 3ನೇ ಮಹಡಿಯ ಎಸ್ಎಸ್ ಕಾಂಪ್ಲೆಕ್ಸ್ ಹಾಲ್ ನಲ್ಲಿ CBSE ಹಾಗೂ ಸ್ಟೇಟ್ ಬೋರ್ಡ್ ನ 10ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಗಣಿತ ವಿಶೇಷ ತರಗತಿ ಆಯೋಜಿಸಲಾಗಿದೆ ಎಂದು ಕೆ.ಆರ್.ಪುರಂ ವೇದಿಕ್ ಎಕ್ಸ್ಪರ್ಟ್ ಪಿಯು ಕಾಲೇಜು ಪ್ರಾಚಾರ್ಯರು ತಿಳಿಸಿದ್ದಾರೆ.

ರಾಜಸ್ಥಾನದ ಕೋಟಾದ ಬನ್ಸಲ್ ನುರಿತ ಫ್ಯಾಕಲ್ಟಿಯಿಂದ ನೇರ ಮಾರ್ಗದರ್ಶನ ಇರಲಿದೆ. ಗಣಿತದ ಭಯ ಕಡಿಮೆ ಮಾಡುವುದು, ಸಮಸ್ಯೆಗಳನ್ನು ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ಪರಿಹರಿಸುವ ವಿಧಾನಗಳು, ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಲು ಸ್ಮಾರ್ಟ್ ತಂತ್ರಗಳ ಬಗ್ಗೆ ವಿಶೇಷ ಮಾರ್ಗದರ್ಶನ ನೀಡಲಾಗುತ್ತದೆ. ಕಡಿಮೆ ಸಮಯದಲ್ಲಿ ಪ್ರಶ್ನೆಗಳನ್ನು ಬಿಡಿಸುವ ಸ್ಮಾರ್ಟ್ ವಿಧಾನಗಳು ಕುರಿತ ಸಂಪೂರ್ಣ ಉಚಿತ ತರಗತಿ ಇದಾಗಿದೆ.
ಕೇವಲ 100 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ (ಮೊದಲು ಬಂದವರಿಗೆ ಆದ್ಯತೆ) ಕಲ್ಪಿಸಲಾಗಿದೆ. ನೋಂದಣಿ ಕಡ್ಡಾಯವಾಗಿದ್ದು, ತರಗತಿಗೆ ಎಂಟ್ರಿ ಪಾಸ್ ಪಡೆಯಬೇಕು. ಮೈತ್ರಿ ಕಾಂಪ್ಲೆಕ್ಸ್, 1ನೇ ಮಹಡಿ, ರಾಯಲ್ ಎನ್ಫೀಲ್ಡ್ ಶೋರೂಂ ಹಿಂಭಾಗ, ಬಿ.ಹೆಚ್. ರಸ್ತೆ ಇಲ್ಲಿ ಎಂಟ್ರಿ ಪಾಸ್ ಪಡೆಯಬೇಕು. ಹೆಚ್ಚಿನ ಮಾಹಿತಿಗೆ 90360 54066 / 90360 54067 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ