ಶಿವಮೊಗ್ಗ:’ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಸಹ್ಯಾದ್ರಿ ರಂಗ ತಂಡ, ಶಿವಮೊಗ್ಗ ರಂಗಾಯಣ ವತಿಯಿಂದ ಡಿಸೆಂಬರ್ 29 (ಸೋಮವಾರ)ರಂದು ಸಂಜೆ 6.30 ಕ್ಕೆ ನಗರದ ಸುವರ್ಣ ಸಾಂಸ್ಕೃತಿಕ ಭವನ(ರಂಗಾಯಣ)ದಲ್ಲಿ ವಿಶ್ವಮಾನವ ದಿನಾಚರಣೆ ಅಂದರೆ, ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನಾಚರಣೆ ಅಂಗವಾಗಿ ‘ಬೊಮ್ಮನ ಹಳ್ಳಿಯ ಕಿಂದರಿ ಜೋಗಿ’ ನಾಟಕ ಪ್ರದರ್ಶನ ಹಾಗೂ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ರಂಗಕರ್ಮಿ ಎ.ಎಸ್.ಮಂಜುನಾಥ ಹಾಗೂ ವಿ.ತೇಜಸ್ವಿನಿಯವರು ನಾಟಕ ನಿರ್ದೇಶನ ಮಾಡಿದ್ದು, ನಾಟಕಕಾರ ಡಾ.ಸಾಸ್ವೆಹಳ್ಳಿ ಸತೀಶ್ ಅವರು ನಾಟಕ ಕುರಿತ ಉಪನ್ಯಾಸ ನೀಡುವರು. ಹಿರಿಯ ಪತ್ರಕರ್ತ ಆರ್.ಎಸ್. ಹಾಲಸ್ವಾಮಿ, ರಂಗಾಯಣ ನಿರ್ದೇಶಕ ಪ್ರಸನ್ನ ಡಿ.ಸಾಗರ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಸಹ್ಯಾದ್ರಿ ರಂಗ ತಂಡ ಅಧ್ಯಕ್ಷ ಬಿ.ಆರ್. ಚಂದ್ರಯ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.

ಈ ನಾಟಕ ವೀಕ್ಷಿಸಲು ಪ್ರವೇಶ ಉಚಿತವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳಬೇಕು ಎಂದು ಸಹ್ಯಾದ್ರಿ ರಂಗ ತಂಡ ಪ್ರಕಟಣೆಯಲ್ಲಿ ಕೋರಿದೆ.