ದೂರು
ಶಿವಮೊಗ್ಗ: ನಗರದ ಮಿಳ್ಳಟ್ಟ ಮುಖ್ಯ ರಸ್ತೆ ಅಣ್ಣ ನಗರ 4 ನೆ ತಿರುವು ಬಲ ಭಾಗದಲ್ಲಿ ಕಾನೂನು ಉಲ್ಲಂಘಿಸಿ ವಾಣಿಜ್ಯ ಕಟ್ಟಡ ನಿರ್ಮಿಸಲಾಗಿದೆ ಎಂದು ಆರೋಪಿಸಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಸಮಿತಿ ಸದಸ್ಯೆ ಅರ್ಚನ ನಿರಂಜನ್ ನೇತೃತ್ವದಲ್ಲಿ ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ವಾಣಿಜ್ಯ ಕಟ್ಟಡವು ನೀಲಿ ನಕ್ಷೆಯಲ್ಲಿ ತೋರಿಸಿರುವಂತೆ ನಿರ್ಮಿಸುತ್ತಿಲ್ಲವೆಂಬ ಆರೋಪ ಅಕ್ಕಪಕ್ಕ ಸ್ಥಳೀಯರು ಹಾಗೂ ಸಾರ್ವಜನಿಕರ ಆರೋಪವಾಗಿದ್ದು, ಅದರ ಸಂಬಂಧ ಪಾರ್ಕಿಂಗ್ ವ್ಯವಸ್ಥೆಗೆ ಜಾಗ ಬಿಟ್ಟಿರುವುದಿಲ್ಲ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ರಾಜಕಾಲುವೆ ಇದ್ದು, ಅದುನ್ನ ಸಹ ಕಾಮಗಾರಿ ವೇಳೆಯಲ್ಲಿ ಒಡೆದು ಹಾಕಿರುವುದಾಗಿ ಸ್ಥಳೀಯರು ದೂರುತ್ತಿದ್ದಾರೆ. ಹಾಗೂ ಮಿಳ್ಳಟ್ಟ ಮುಖ್ಯ ರಸ್ತೆಯು ಅಗಲೀಕರಣ ಅಗುತ್ತಿದೆ. ಇಲ್ಲಿಯೂ ಸಹ ರಸ್ತೆ ಅಗಲೀಕರಣಕ್ಕೂ ಜಾಗ ಬಿಡದೆ ಕಟ್ಟಡ ಕಾಮಗಾರಿ ಆಗುತ್ತಿದೆ ಹಾಗೂ ಯುಜಿಡಿ ಅಥವಾ ರಾಜಕಾಲುವೆ ಒಡೆದು ಹಾಕಿರುವ ಪರಿಣಾಮ ಕಸ ಕಡ್ಡಿ ಗಲೀಜು ತುಂಬಿದ್ದು, ಇದರಿಂದ ಸಾಂಕ್ರಾಮಿಕ ಕಾಯಿಲೆಗೆ ಅಹ್ವಾನವಾಗಿದೆ ಹಾಗೂ ರಸ್ತೆಯಲ್ಲಿ ಮರಳು,ಜಲ್ಲಿ ಕಲ್ಲು ಹಾಗೂ ಸಿಮೆಂಟ್ ಬ್ರಿಕ್ಸ್ ನ್ನು ಎಲ್ಲೆಂದರಲ್ಲಿ ಹಾಕಿರುತ್ತಾರೆ. ಇದರಿಂದ ವಾಹನ ಸವಾರರಿಗೆ ಹಾಗೂ ಸ್ಥಳೀಯರಿಗೆ ಓಡಾಡಲು ಅನಾನುಕೂಲವಾಗುತ್ತಿದೆ ಎಂಬ ದೂರು ವ್ಯಕ್ತಪಡಿಸುತ್ತಿದ್ದಾರೆ ಎಂದು ಆರೋಪಿಸಿದರು.

ಇದೆಲ್ಲದರ ನಡುವೆ ಕಾನೂನು ಉಲ್ಲಂಘನೆ ಮಾಡಿ ಈ ರೀತಿಯ ಕಟ್ಟಡ ನಿರ್ಮಿಸುತ್ತಿರುವ ಕುರಿತು ಮಹಾನಗರ ಪಾಲಿಕೆ ಇದುವರೆಗೂ ಯಾವುದೇ ಕ್ರಮ ಜರುಗಿಸಿರುವುದಿಲ್ಲ ಹಾಗೂ ಈ ಸಂಬಂಧ ಮುಖ್ಯ ಇಂಜಿನಿಯರ್ ಜಿತೇಂದ್ರ ಅವರ ಬಳಿ ಮಾಹಿತಿ ಕೇಳಿದಾಗ ಸಂತೋಷ್ ಗುರೂಜಿ ಅವರಿಗೆ ಸರಿಪಡಿಸಿಕೊಳ್ಳಲು ತಿಳಿಸುತ್ತೇವೆ ಎಂದು ತಿಳಿಸಿದ್ದಾರೆ. ಆದರೂ ಈ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಜನಸಾಮಾನ್ಯರಿಗೆ ಕೂಡ ಇದೆ ರೀತಿಯ ಕಾನೂನು ಉಲ್ಲಂಘನೆಯಾದಲ್ಲಿ ಮಹಾನಗರ ಪಾಲಿಕೆ ಮುಖ್ಯ ಇಂಜಿನಿಯರ್ ತಿಳಿ ಹೇಳಿ ಸರಿಪಡಿಸಿಕೊಳ್ಳಲು ತಿಳಿಸುತ್ತಾರ ಎಂಬುದು ನಮ್ಮ ಪ್ರಶ್ನೆಯಾಗಿದೆ?
ಹಾಗಾಗಿ ಯಾರೇ ಎಷ್ಟೇ ಪ್ರಭಾವಿಯಾಗಿದ್ದರು ಸಹ ಕಾನೂನು ರೀತಿಯಲ್ಲಿ ಸೂಕ್ತ ಕ್ರಮ ಜರುಗಿಸುವ ಮೂಲಕ ಕಾಮಗಾರಿಯನ್ನು ಈ ಕೂಡಲೇ ಸ್ಥಗಿತಗೊಳಿಸುವ ಮೂಲಕ ಮುಂದಿನ ಕ್ರಮ ಜರುಗಿಸಬೇಕೆಂದು ಮನವಿ ಮಾಡಿದರು.