ಶಿವಮೊಗ್ಗ: ಕೇಂದ್ರ ಸಚಿವ, ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಅವರ ೬೬ನೇ ಹುಟ್ಟುಹಬ್ಬದ ಅಂಗವಾಗಿ ಶಿವಮೊಗ್ಗ ನಗರ ಜೆಡಿಎಸ್ನಿಂದ ನಗರದ ಶ್ರೀ ಕೋಟೆ ಮಾರಿಕಾಂಬ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಹಾಗೂ ಭಕ್ತಾದಿಗಳಿಗೆ ಸಿಹಿ ವಿತರಿಸಲಾಯಿತು.
ಬಳಿಕ ಶಾರದಾ ದೇವಿ ಅಂಧರ ವಿಕಾಸ ಕೇಂದ್ರದಲ್ಲಿನ ಮಕ್ಕಳಿಗೆ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಮಕ್ಕಳೊಂದಿಗೆ ಕೇಕ್ ಕತ್ತರಿಸಿ

ಹೆಚ್.ಡಿ.ಕೆ. ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್, ರಾಜ್ಯ ಉಪಾಧ್ಯಕ್ಷ ಕೆ.ಬಿ. ಪ್ರಸನ್ನಕುಮಾರ್, ನಗರ ಜೆಡಿಎಸ್ ಅಧ್ಯಕ್ಷ ದೀಪಕ್ ಸಿಂಗ್, ಪ್ರಮುಖರಾದ ತ್ಯಾಗರಾಜ್, ಸಂಗಯ್ಯ, ರಘು, ನರಸಿಂಹ ಗಂಧದಮನೆ, ಮಹೇಶ್, ದಯಾನಂದ ಸಾಲಗಿ,

ಲೋಹಿತ್, ಉಮಾಶಂಕರ ಉಪಾಧ್ಯಾಯ, ಗೋಪಿ, ಸಂಜಯ್ ಕಶ್ಯಪ್ ರಾಘವೇಂದ್ರ ಉಡುಪ, ವಾಜಿದ್, ವೆಂಕಟೇಶ್, ದೀಕ್ಷಿತ್, ಹರೀಶ್, ಶಂಕರ್, ರಾಜಮ್ಮ, ರೇಣುಕಾ, ರಾಜಲಕ್ಷ್ಮಿ, ಸುನಿಲ್ ಗೌಡ, ಚಂದ್ರಶೇಖರ್, ಮನೋಹರ್, ವಿನಯ್ ಹಾಗೂ ಪಕ್ಷದ ಮುಖಂಡರು ಕಾರ್ಯಕರ್ತರು ಇದ್ದರು.