ಶಿವಮೊಗ್ಗ : ದಿನಾಂಕ : ೦೩-೧೨-೨೦೨೫ರಂದು ಮಿಥುನ್ ಕುಮಾರ್ ಜಿ.ಕೆ., ಐಪಿಎಸ್, ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ಮತ್ತು ಎ.ಜಿ. ಕಾರಿಯಪ್ಪ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-೧ ಶಿವಮೊಗ್ಗ ಜಿಲ್ಲೆ ಹಾಗೂ ರಮೇಶ್ ಕುಮಾರ್ ಎಸ್., ಹೆಚ್ಚುವರಿ ಪೊಲೀಸ್ ಅಧೀಕ್ಷಕರು-೨ ಶಿವಮೊಗ್ಗ ಜಿಲ್ಲೆರವರ ಮಾರ್ಗ ದರ್ಶನದಲ್ಲಿ, ಕೃಷ್ಣಮೂರ್ತಿ ಕೆ. ಡಿವೈಎಸ್ಪಿ ಮತ್ತು ಮಂಜುನಾಥ್ ಪೊಲೀಸ್ ಇನ್ಸ್ ಪೆಕ್ಟರ್ರವರ ನೇತೃತ್ವದಲ್ಲಿ ಸಿಬ್ಬಂಧಿಗಳ ತಂಡವು ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಕಳೆದು ಹೋದ ಮೊಬೈಲ್ಗಳನ್ನು ಸೈಬರ್ ಕ್ರೈಂ ಪೊಲೀಸ್ ಠಾಣೆಯ ಅಧಿಕಾರಿ

ಸಿಬ್ಬಂದಿಯವರು ‘ಅಇIಖ Poಡಿಣಚಿಟ’ ಮೂಲಕ ಜಿಲ್ಲೆಯಾದ್ಯಂತ ಇದುವರೆಗೂ ಸುಮಾರು ೬೪೪೫ ಕಳೆದು ಹೋದ ಮೊಬೈಲ್ಗಳು ವರದಿಯಾಗಿದ್ದು, ಇವುಗಳಲ್ಲಿ ದೇಶದ ವಿವಿಧ ರಾಜ್ಯಗಳಾದ ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಕೇರಳ ಮತ್ತು ತೆಲಂಗಾಣ ಹಾಗೂ ಕರ್ನಾಟಕ

ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಪತ್ತೆ ಮಾಡಿ ಸುಮಾರು ೧೧೯೪ ಕ್ಕೂ ಹೆಚ್ಚು ಮೊಬೈಲ್ಗಳನ್ನು ವಾರಸುದಾರರಿಗೆ ನೀಡಿದ್ದು, ನಂತರ ಇದೆ ರೀತಿ ಕಳೆದ ೦೨ ತಿಂಗಳಲ್ಲಿ ೧೧೦ ಮೊಬೈಲ್ಗಳನ್ನು ಪತ್ತೆಮಾಡಿದ್ದು ಸದರಿ ಪತ್ತೆಯಾದ ಮೊಬೈಲ್ಗಳನ್ನು ವಾರಸುದಾರರಿಗೆ ಹಿಂದಿರುಗಿಸುವ ಕುರಿತು ಈ ದಿನ ಸಂಜೆ ೦೫-೦೦ ಗಂಟೆಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತದೆ.