*
ಶಿವಮೊಗ್ಗ,ಡಿ.02:
ಇಲ್ಲಿನ ಗೋಪಾಳದಲ್ಲಿ ಬೀದಿ ನಾಯಿಯನ್ನು ಬಲೆ ಹಾಕಿ ಹಿಡಿದು ಕ್ರೂರವಾಗಿ ಹೊಡೆಯುತ್ತಿರುವ ದೃಶ್ಯವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಈ ಬಗ್ಗೆ ಪ್ರಾಣಿ ರಕ್ಷಣಾ ಸೇವಾ ತಂಡ ನೀಡಿದ ದೂರಿನ ಮೇರೆಗೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

ಪ್ರಾಣಿ ರಕ್ಷಣಾ ಸೇವಾ ತಂಡದ ಸದಸ್ಯರಾದ ಕೆ.ಹೆಚ್.ಬಿ. ಕಾಲೋನಿ, ಗೋಪಾಳದ ಸೂರಜ್ ಎಸ್ ನಿನ್ನೆ ರಾತ್ರಿ ರಾತ್ರಿ ತುಂಗಾನಗರ ಪೊಲೀಸ್ ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಮೇಲೆ ಪ್ರಕರಣ ದಾಖಲಾಗಿದೆ.
ಮೊನ್ನೆ ನವೆಂಬರ್ 28 ರಂದು ಶಿವಮೊಗ್ಗದ ವೃದ್ದಾಶ್ರಮ ಎದುರು ಗೋಪಾಳ ಪೊಲೀಸ್ ಲೇ ಔಟ್ ನಲ್ಲಿ ಬೆಳಗ್ಗೆ 08:16 ಗಂಟೆಗೆ, ಖಾಸಗಿ ಹಂದಿ ಹಿಡಿಯುವವರ ಗುಂಪೊಂದು ಸಮುದಾಯದ ಬೀದಿ ನಾಯಿಯನ್ನು ಬಲೆಯಲ್ಲಿ ಹಿಡಿದು ಹೊಡೆದು ಸಾಯಿಸಿದ್ದಾರೆ.

ಸಿ.ಸಿ. ಟಿ.ವಿ. ಕ್ಯಾಮೆರಾ ಪರಿಶೀಲಿಸಿದಾಗ ಬೀದಿ ನಾಯಿಯನ್ನು ಸೆರೆಹಿಡಿದು ಕ್ರೂರವಾಗಿ ಕೊಲ್ಲುವ ದೃಶ್ಯ ಕಂಡು ಬಂದಿದೆ. ಆದ್ದರಿಂದ, ಈ ಕೃತ್ಯವೆಸಗಿದವರ ವಿರುದ್ದ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು ನೀಡಿದ ಲಿಖಿತ ದೂರಿನ ಮೇರೆಗೆ ಶಿವಮೊಗ್ಗ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ: 0723/2025 ಕಲಂ 11 (1) The Prevention of cruelty to Animal (PCA) Act 1960 & ಕಲಂ 325 ಬಿ ಎನ್ ಎಸ್ ರೀತ್ಯಾ ಪ್ರಕರಣ ದಾಖಲು ಮಾಡಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.