

ನೆಗಿಟೀವ್ ಥಿಂಕಿಂಗ್
ವಾರದ ಅಂಕಣ- 65
- ಗಜೇಂದ್ರಸ್ವಾಮಿ ಎಸ್.ಕೆ., ಶಿವಮೊಗ್ಗ
(ಮೂಲ- ಅರಹತೊಳಲು, ಭದ್ರಾವತಿ)
ಇತ್ತೀಚಿನ ದಿನಮಾನಗಳಲ್ಲಿ ಆರೋಗ್ಯದ ವಿಷಯ ಅತ್ಯಂತ ಪ್ರಬಲ ಚರ್ಚೆಯ ವಿಷಯವಾಗಿದೆ. ಆರೋಗ್ಯ ನಮ್ಮ ಭಾಗ್ಯ ಎನ್ನುವ ಮಾತಿನ ಜೊತೆಗೆ ಕಿಡ್ನಿ, ಜಠರ, ಮೂತ್ರಪಿಂಡ, ಲಿವರ್ ಮೊದಲಾದವುಗಳ ಜೊತೆ ಜೊತೆಗೆ ಅತಿ ಹೆಚ್ಚು ಗಮನಿಯವಾಗಿ ಕಾಣಿಸಿಕೊಳ್ಳುತ್ತಿರುವುದು ಹೃದಯ. ಈ ಹೃದಯಕ್ಕೆ ಸ್ಟಂಟ್ ಹಾಕಿಸಿಕೊಳ್ಳುವುದು ಕಾಮನ್ ಸಂಗತಿ ಎಂಬಂತಹ ಪರಿಸ್ಥಿತಿ ಎದ್ದು ಕಾಣುತ್ತಿದೆ.
ಮಾನಸಿಕ ಒತ್ತಡ, ಕೆಲಸದ ಗೊಂದಲಗಳು, ಬದುಕಿನ ರೀತಿ ನೀತಿಗಳು, ವಾಸ್ತವತೆಗಳ ತಲ್ಲಣಗಳು ರಕ್ತದೊತ್ತಡವನ್ನು ಹೆಚ್ಚಿಸುವ ಜೊತೆಗೆ ನಾನಾ ಉಲ್ಬಣ ಕಾಯಿಲೆಗಳಿಗೆ ಕಾರಣವಾಗುತ್ತಿದೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಆದರೆ ಕೆಲವೇ ಕೆಲವು ದೊಡ್ಡ ಆಸ್ಪತ್ರೆಗಳಲ್ಲಿ ಮಾತೆತ್ತಿದರೆ ಸ್ಟಂಟ್ ಹಾಕುವ ಕಾಯಕ ನಡೆಯುತ್ತಿದೆ ಎಂಬ ಗಂಭೀರ ಮಾತುಗಳು ಕೇಳಿ ಬರುತ್ತಿವೆ. ಅದೇ ಈ ವಾರದ ನೆಗಿಟೀವ್ ಥಿಂಕಿಂಗ್ ವಿಷಯ.
ನಾಳೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಶಿವಮೊಗ್ಗಕ್ಕೆ ಅಗಮನ,ಯಾವ್ಯಾವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ? https://tungataranga.com/?p=47189
ಸಂಪೂರ್ಣ ಸುದ್ದಿ ಓದಲು ಆಯಾ ಲಿಂಕ್ ಬಳಸಿ
ಗಮನಿಸಿ ಕಿರಿಕಿರಿ ಇಲ್ಲದ ಸುದ್ದಿವಾಹಿನಿಯ ತುಂಗಾತರಂಗ ಗುಂಪಲ್ಲಿ ಇಲ್ಲದವರು ಮಾತ್ರ ಕೆಳಗಿನ ಲಿಂಕಲ್ಲಿ ಸೇರಿ
https://chat.whatsapp.com/H3sil66ffIHBiBPibzk7Nw?mode=wwc
ಇಲ್ಲಿ ವೈದ್ಯ ಸಮೂಹವನ್ನಾಗಲಿ ಅಥವಾ ದೇಗುಲದಂತಿರಬೇಕಾದ ಆಸ್ಪತ್ರೆಗಳನ್ನಾಗಲಿ ದೂಷಿಸುವ ಅಥವಾ ತೆಗಳುವ ಉದ್ದೇಶ ನಮ್ಮದಲ್ಲ. ಆದರೆ ಕೆಲವರು ಸರ್ಕಾರದ ಯೋಜನೆಗಳ ಹಣ ಪಡೆಯಲು ನಾನಾ ಬಗೆಯ ಚಮತ್ಕಾರಗಳನ್ನು ಮಾಡುತ್ತಾರಂತೆ. ಹೃದಯದ ಸಮಸ್ಯೆಯ ಹೆಸರಲ್ಲಿ ಹಾಕದ ಸ್ಟಂಟ್ ಗಳನ್ನು ಸಹ ಲೆಕ್ಕಕ್ಕೆ ಕೊಟ್ಟುಬಿಡುತ್ತಾರಂತೆ.
ಇತ್ತೀಚೆಗೆ, ಶಿವಮೊಗ್ಗದ ಬಡ ವ್ಯಕ್ತಿಯೊಬ್ಬರು ಹೊಟ್ಟೆ ನೋವಿನ ಕಾರಣಕ್ಕೆ ಆಸ್ಪತ್ರೆಗೆ ಹೋದರಂತೆ. ಅದೇ ದಿನ ಅವರಿಗೆ ಹೃದಯದ ಸಮಸ್ಯೆ ಇದೆ ಎಂದು ಎರಡು ಸ್ಟಂಟ್ ಹಾಕಿದ್ದೇವೆ ಎಂಬುದಾಗಿ ಹೇಳಿ ಮನೆಗೆ ಕಳಿಸಿದ್ದಾರಂತೆ. ಇಲ್ಲಿ ನಿಜವಾಗಿಯೂ ಹೃದಯದ ಸಮಸ್ಯೆ ಇತ್ತಾ? ಅಥವಾ ಅದನ್ನೇ, ಅಂದರೆ ರೋಗಿಗಳ ಸಾವಿನ ಭಯವನ್ನು ಕೆಲವರು ಬಳಸಿಕೊಂಡರಾ ಎಂಬ ಅನುಮಾನದ ಪ್ರಶ್ನೆ ಆ ಕುಟುಂಬದಲ್ಲೇ ಮೂಡಿದೆ.
ಸಿಎಂ ಸಿದ್ದರಾಮಯ್ಯನವರೇ ಐದು ವರ್ಷ ಸಿಎಂ ಅಗಿ ಮುಂದುವರಿಯಲಿ: ಕೋಟೆ ಅಂಜನೇಯ ಸ್ವಾಮಿಗೆ ಈಡುಗಾಯಿ ಸಮರ್ಪಣೆ https://tungataranga.com/?p=47184
ಸಂಪೂರ್ಣ ಸುದ್ದಿ ಓದಲು ಆಯಾ ಲಿಂಕ್ ಬಳಸಿ
ಗಮನಿಸಿ ಕಿರಿಕಿರಿ ಇಲ್ಲದ ಸುದ್ದಿವಾಹಿನಿಯ ತುಂಗಾತರಂಗ ಗುಂಪಲ್ಲಿ ಇಲ್ಲದವರು ಮಾತ್ರ ಕೆಳಗಿನ ಲಿಂಕಲ್ಲಿ ಸೇರಿ
https://chat.whatsapp.com/H3sil66ffIHBiBPibzk7Nw?mode=wwc
ಆರೋಗ್ಯ ನಿಜಕ್ಕೂ ಅತಿ ಅವಶ್ಯಕ, ಸಾವು ಖಚಿತ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಅದರ ನಡುವೆ ಸಾವನ್ನ ಹೇಗೆ ಬೇಕೋ ಹಾಗೆ ಪಡೆಯುವ ಮನಸ್ಥಿತಿ ಯಾರಲ್ಲೂ ಇಲ್ಲ. ಇನ್ನಷ್ಟು ದಿನ ಬದುಕುವ ಬಯಕೆ ನಮ್ಮ ಇತ್ತೀಚಿನ ಆಧುನಿಕ ವೈದ್ಯಕೀಯ ಲೋಕ ಸಾಬೀತುಪಡಿಸಿದೆ. ಅಂತೆಯೇ ನಮ್ಮ ಇತ್ತೀಚಿನ ವೈಜ್ಞಾನಿಕ ಹಾಗೂ ವೈದ್ಯಕೀಯ ತಂತ್ರಜ್ಞಾನಗಳ ಜಗತ್ತು ಏನನ್ನು ಬೇಕಾದರೂ ಸಾಧಿಸಬಹುದು ಎಂಬುದನ್ನು ತೋರಿಸಿ ಕೊಡುತ್ತಿದೆ ಎಂಬುದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಲೇಬೇಕು.
ಹಿಂದಿನ ಜಗತ್ತಿಗೂ ಹಾಗೂ ಇಂದಿನ ಜಗತ್ತಿಗೂ ಅಜಗಜಾಂತರ ವ್ಯತ್ಯಾಸವಿದೆ. ಎಲ್ಲೋ ಒಂದೊಂದು ಎಂದು ಕಾಣಿಸಿಕೊಳ್ಳುತ್ತಿದ್ದ ಆಸ್ಪತ್ರೆಗಳು ಈಗ ಒಂದೊಂದು ಬೀದಿಯಲ್ಲಿ ಕನಿಷ್ಠ ಐದಾರು ಇರುತ್ತವೆ. ಹಾಗಂದರೆ ನಮ್ಮ ಆರೋಗ್ಯ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆಯಾ?


ನಾವು ತಿನ್ನುವ ಆಹಾರ, ಬದುಕುವ ವ್ಯವಸ್ಥೆ ಈ ಆಸ್ಪತ್ರೆಗಳ ಹೆಚ್ಚಳಕ್ಕೆ ಕಾರಣವಾಯಿತಾ? ಹಿಂದೆ ಎಲ್ಲದಕ್ಕೂ ಚಿಕಿತ್ಸೆ ಕೊಡುವ ಒಬ್ಬರೇ ವೈದ್ಯರಿದ್ದರು. ಈಗ ದೇಹದ ಎಲ್ಲಾ ಭಾಗಗಳಿಗೂ ಒಬ್ಬೊಬ್ಬ ವೈದ್ಯರು ಅದರಲ್ಲಿ ಅತ್ಯುನ್ನತ ತರಬೇತಿ ಪಡೆದು ಉನ್ನತ ಮಟ್ಟದ ಚಿಕಿತ್ಸೆ ನೀಡುತ್ತಿದ್ದಾರೆ.
ತಲೆಯ ಮೆದುಳಿನ ಹತ್ತು ಹಲವು ಭಾಗಗಳಿಗೆ ಒಬ್ಬೊಬ್ಬ ವೈದ್ಯರು ಎಂಬಂತೆ ಚಿಕಿತ್ಸೆ ನೀಡುತ್ತಾರೆ. ಕಿಡ್ನಿ ಲಿವರ್ ಸೇರಿದಂತೆ ಎಲ್ಲಾ ಅಂಗಗಳಿಗೆ ಒಬ್ಬೊಬ್ಬ ವೈದ್ಯರು ಏಕಮುಖ ಚಿಕಿತ್ಸೆ ನೀಡುವ ಹೊಸ ವ್ಯವಸ್ಥೆ ನಮ್ಮ ನಡುವೆ ಬಂದಿದೆ. ಇವೆಲ್ಲದರ ನಡುವೆ ಹೃದಯ ಯಾಕೋ ಎಲ್ಲರಲ್ಲೂ ಕಾಡುತ್ತಿದೆ ಎಂಬುದೇ ಗಂಭೀರ ಪ್ರಶ್ನೆ ಹೃದಯ ಮನದ ಭಾವನೆಯನ್ನ ಬಿಂಬಿಸುವ ಒಂದು ದೇಗುಲ ಎಂಬ ಮನೋಭಾವ ನಮ್ಮ ನಡುವೆ ಬೆಳೆದಿದೆ. ಈ ಹೃದಯ ಯಂತ್ರವಲ್ಲ ಅದು ನಿಜಕ್ಕೂ ದೇಹದ ದೇಗುಲ ಅಥವಾ ದೇವರು ಎಂಬ ಮನಸ್ಥಿತಿ ಬೆಳೆದಿರುವಾಗ ಯಾರ ಹೃದಯವೂ ಕಾಡದಿರಲಿ ಎಂಬುದೇ ನಮ್ಮ ಆಶಯ.

ನಿಜಕ್ಕೂ ಈಗಲೂ ಅಪಾರ ವೈದ್ಯರು ,ಹಲವು ಆಸ್ಪತ್ರೆಗಳು ಅತಿ ಹೆಚ್ಚು ಸೇವೆಯ ಹೆಸರಿನಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಅದು ನಿಜಕ್ಕೂ ನಮ್ಮ ಬದುಕನ್ನ ರಕ್ಷಿಸುವ, ದೇಹವನ್ನು ಉಳಿಸುವ ವ್ಯವಸ್ಥೆಯೇ ಹೌದು, ಕೆಲವೇ ಕೆಲವು ಬಂಡವಾಳಶಾಹಿ ಮನೋಭಾವದ ವ್ಯಕ್ತಿಗಳು ಮಾಡಿಕೊಂಡ ಆಸ್ಪತ್ರೆಗಳು ದಿನದ ವ್ಯವಹಾರ ಮುಗಿಸುವ ಕಾಯಕದಲ್ಲಿ ಮಗ್ನವಾಗಿರುವುದು ದುರಂತವೇ ಹೌದು ಎನ್ನುವ ಮಾತು ಕೇಳಿ ಬರುತ್ತಿದೆ.